ಕರಾವಳಿಯಲ್ಲಿ ಬಿಸಿಲಿನ ಝಳ ಮುಂದುವರಿದಿದ್ದರೂ ದ.ಕ.ಜಿಲ್ಲೆಯ ಅಲ್ಲಲ್ಲಿ ಬೇಸಗೆಯ ಮೊದಲ ಮಳೆ ಬುಧವಾರ ಕಾಣಿಸಿದೆ. ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗಡಿ ಭಾಗಗಳಲ್ಲಿ ಮಧ್ಯಾಹ್ನ ವೇಳೆಗೆ ಮಳೆಯಾಗಿದೆ.
ಮಂಗಳೂರು (ಮಾ.16): ಕರಾವಳಿಯಲ್ಲಿ ಬಿಸಿಲಿನ ಝಳ ಮುಂದುವರಿದಿದ್ದರೂ ದ.ಕ.ಜಿಲ್ಲೆಯ ಅಲ್ಲಲ್ಲಿ ಬೇಸಗೆಯ ಮೊದಲ ಮಳೆ ಬುಧವಾರ ಕಾಣಿಸಿದೆ. ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗಡಿ ಭಾಗಗಳಲ್ಲಿ ಮಧ್ಯಾಹ್ನ ವೇಳೆಗೆ ಮಳೆಯಾಗಿದೆ.
ಮಂಗಳೂರಿನಲ್ಲಿ ಬುಧವಾರ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತಾಪಮಾನದಲ್ಲಿ ತುಸು ಇಳಿಕೆಯಾಗಿದ್ದು, ಬಿಸಿಲಿನ ಧಗೆಗೆ ಮಳೆಯ ಸಿಂಚನವಾಗಿದೆ. ಪುತ್ತೂರಿನ ಕಬಕ, ಕೆದಿಲ, ಮಿತ್ತೂರು, ಮಾಣಿ, ಪೆರ್ನೆಗಳಲ್ಲಿ ತುಂತುರು ಮಳೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಕಂಡುಬಂದಿದೆ.
undefined
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಾ.16ರ ವರೆಗೆ ಕರಾವಳಿಯ ಅಲ್ಲಲ್ಲಿ ಗುಡುಗು ಸಹಿತ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ.
Karnataka Rainfall: ಕೊಡಗಿನಲ್ಲಿ ಆಲಿಕಲ್ಲು ಮಳೆ, ಚಿಕ್ಕಮಗಳೂರಿನಲ್ಲಿ ಧರೆಗೆ ತಂಪೆರೆದ ವರುಣ!
ಕಾರ್ಕಳ: ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆ
ತಾಲೂಕಿನಾದ್ಯಂತ ಬುಧವಾರ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಮಳೆ ಸುರಿದಿದೆ. ಬುಧವಾರ ಮುಂಜಾನೆ 5 ಗಂಟೆಗೆ ಮಳೆ ಆರಂಭವಾಗಿದ್ದು, 7 ಗಂಟೆ ವರೆಗೆ ಮುಂದುವರಿದಿತ್ತು. ಸಂಜೆ ವೇಳೆ ಗುಡುಗು, ಮಿಂಚು ಇತ್ತು.
ಮುಂಜಾನೆ ತಾಲೂಕಿನ ಮಾಳ ಕಡಾರಿ ಬಜಗೋಳಿ, ನಾರಾವಿ, ಮಾಳ, ಚೌಕಿ, ಕೆರುವಾಶೆ, ಶಿರ್ಲಾಲು, ಈದು, ಅಜೆಕಾರು, ಹೆಬ್ರಿ ತಾಲೂಕಿನ ಅಂಡಾರು, ಮುನಿಯಾಲು, ಕಬ್ಬಿನಾಲೆ, ಬಚ್ಚಪು, ನಾಡ್ಪಾಲಿನಲ್ಲಿ ತುಂತುರು ಮಳೆ ಸುರಿದಿದೆ.
ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!
ಉಡುಪಿ ವಿವಿಧೆಡೆ ತುಂತುರು:
ಬುಧವಾರ ಮುಂಜಾನೆ ಉಡುಪಿ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ಲಘು ಮಳೆಯಾಗಿದೆ. ಕಾಪು ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದರೆ, ಉಡುಪಿ ತಾಲೂಕಿನಲ್ಲಿ ಹನಿಹನಿ ಮಳೆಯಷ್ಟೇ ಆಗಿದೆ. ಬೆಳಿಗ್ಗೆ 6ರಿಂದ 6 ಗಂಟೆ ನಡುವೆ ಸುರಿದ ಈ ಹನಿ ಮಳೆಯಿಂದ ಬೆಳಗ್ಗೆ ವಾತಾವರಣ ತಂಪಾಗಿತ್ತು. ಕರಾವಳಿಯಲ್ಲಿ ಮಾ.19ರವರೆಗೆ ಗುಡುಗುಮಿಂಚು ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಗಲಿನಲ್ಲಿ ಒಣಹವೆ ಇದ್ದು, ಕೆಲವು ಕಡೆ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ