ನೂತನ ಸಂಸದೆ ಸುಮಲತಾ ಹೆಸರನ್ನೇ ಕೈ ಬಿಟ್ಟ ತಾಲೂಕು ಆಡಳಿತ

Published : Jun 27, 2019, 11:43 AM ISTUpdated : Jun 27, 2019, 02:34 PM IST
ನೂತನ ಸಂಸದೆ ಸುಮಲತಾ ಹೆಸರನ್ನೇ ಕೈ ಬಿಟ್ಟ ತಾಲೂಕು ಆಡಳಿತ

ಸಾರಾಂಶ

ತಾಲೂಕು ಆಡಳಿತ ಸುಮಲತಾ ಅಂಬರೀಶ್ ಅವರ ಹೆಸರನ್ನೇ ಆಹ್ವಾನ ಪತ್ರಿಕೆಯಿಂದ ಕೈ ಬಿಟ್ಟಿದ್ದು, ಇದರಿಂದ ಅಭಿಮಾನಿಗಳು ತೀವ್ರ ಆಕ್ರೋಶಿತರಾಗಿದ್ದಾರೆ. 

ಮಂಡ್ಯ [ಜೂ27]  : ಮಂಡ್ಯದ ನೂತನ ಸಂಸದೆ ಸುಮಲತಾ ಅವರ ಹೆಸರನ್ನೇ ಇಲ್ಲಿನ ತಾಲೂಕು ಆಡಳಿತ ಮಂಡಳಿ ಕೈ ಬಿಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.

ಕೆಂಪೇಗೌಡ ಜಯಂತಿ ಅಂಗವಾಗಿ ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ಸುಮಲತಾ ಅಂಬರೀಶ್ ಹೆಸರು ಸೇರಿಸುವುದನ್ನೇ ತಾಲೂಕು ಆಡಳಿತ ಮರೆತಿದೆ.

ಕೆ.ಆರ್ ಪೇಟೆ ತಾಲೂಕಿನಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಆಹ್ವಾನ ಪತ್ರಿಕೆ ಮಾಡಿಸಲಾಗಿತ್ತು. ಇದರಲ್ಲಿ ನೂತನ ಸಂಸದೆ ಹೆಸರನ್ನೇ ಕೈ ಬಿಡಲಾಗಿದೆ.

ಸುಮಲತಾ ಹೆಸರು ಮುದ್ರಣ ಮರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ತಾಲೂಕು ಆಡಳಿತ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.  ರಾಜಕೀಯ ಪ್ರೇರಿತವಾಗಿ ಹೆಸರು ಕೈ ಬಿಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC