ಎಂಟಿಬಿ ನಾಗರಾಜು ಭೇಟಿ ಮಾಡಿದ ಸುಮಲತಾ ಅಂಬರೀಶ್

By Kannadaprabha NewsFirst Published Mar 5, 2021, 2:40 PM IST
Highlights

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಕ್ಕೆ ಸಚಿವ ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿದ್ದಾರೆ. ಎಂಟಿಬಿ ಬಳಿ ಸುಮಲತಾ ಮಾತುಕತೆ ನಡೆಸಿದ್ದಾರೆ. ಸಕ್ಕರೆ ಸಚಿವರೊಂದಿಗೆ ಮಂಡ್ಯ ಸಂಸದೆ ನಡೆಸಿದ ಚರ್ಚೆ ಏನು..?

ಮಂಡ್ಯ (ಫೆ.05):  ಮೈಸೂರು ಸಕ್ಕರೆ ಕಾರ್ಖಾನೆ ಆರಂಭದ ವಿಷಯವಾಗಿ ಸಕ್ಕರೆ ಸಚಿವ ಎಂ.ಟಿ.ಬಿ.ನಾಗರಾಜು ಅವರನ್ನು ಸಂಸದೆ ಸುಮಲತಾ ಅಂಬರೀಶ್‌ ಗುರುವಾರ ಭೇಟಿಯಾಗಿ ಚರ್ಚೆ ನಡೆಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಕೃತವಾಗಿ ಭೇಟಿ ಮಾಡಿ ಮೈಷುಗರ್‌ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಚರ್ಚಿಸಿದರು. ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಸಕ್ಕರೆ ಕಾರ್ಖಾನೆಯ ಮುಂದುವರಿಕೆಯಿಂದ ರೈತರಿಗೆ ಅನುಕೂಲವಾಗುವ ಧನಾತ್ಮಕ ವಿಚಾರಗಳನ್ನು ಸಂಬಂಧಪಟ್ಟಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿ, ಚರ್ಚಿಸಿ ಅಧಿಕಾರಿಗಳಿಂದ ಕಾರ್ಖಾನೆ ಪುನಶ್ಚೇತನ ಕುರಿತು ಸಂಪೂರ್ಣ ಮಾಹಿತಿಯನ್ನು ಸಚಿವರ ಸಮ್ಮುಖದಲ್ಲಿ ಪಡೆದುಕೊಂಡರು.

ಎಂಪಿ ನಿಧಿ ಬಳಕೆ: ಪ್ರತಾಪ್‌ ನಂ.1, ಸುಮಲತಾ ನಂ.2 ..

ಮೈಷುಗರ್‌ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಈಗಾಗಲೇ ಸಚಿವ ಸಂಪುಟದಿಂದ ಅನುಮೋದನೆಗೊಂಡಿದ್ದು, ಟೆಂಡರ್‌ ಪ್ರಕ್ರಿಯೆಗೆ ರೂಪುರೇಷೆಗಳು ಸಿದ್ಧವಾಗುತ್ತಿದೆ ಎಂದು ಸಚಿವರೆದುರು ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಕಟಾವಿಗೆ ಬಂದಿರುವ ಕಬ್ಬಿನ ಬೆಳೆಯನ್ನು ಈ ಸಾಲಿನಲ್ಲಿ ಮೈಷುಗರ್‌ ಸಕ್ಕರೆ ಕಾರ್ಖಾನೆಯೇ ಖರೀದಿಸಲು ವ್ಯವಸ್ಥೆ ಮಾಡಬೇಕು. 2021-22 ಸಾಲಿನ ಜೂನ್‌-ಜುಲೈ ಮಾಹೆಗೆ ಮುಂಚಿತವಾಗಿಯೇ ಕಾರ್ಖಾನೆ ಆರಂಭಿಸಲುಯ ಒತ್ತು ನೀಡುವಂತೆ ಸುಮಲತಾ ಮನವಿ ಮಾಡಡಿದರು. ಸುಮಲತಾ ಅವರ ಮನವಿಗೆ ಸ್ಪಂದಿಸಿ ಮೈಷುಗರ್‌ಕಾರ್ಖಾನೆಯನ್ನು ಆದಷ್ಟುಬೇಗ ಪುನರಾರಂಭಗೊಳಿಸುವುದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಸಚಿವ ಎಂ.ಟಿ.ಬಿ.ನಾಗರಾಜು ನೀಡಿದರು.

click me!