ನಾನು ಸೈಲಂಟ್ - ನನ್ನ ವಿಚಾರಕ್ಕೆ ಬಂದ್ರೆ ವೈಲೆಂಟ್ : ಸುಮಲತಾ ಎಚ್ಚರಿಕೆ

Kannadaprabha News   | Asianet News
Published : Jul 14, 2021, 03:15 PM IST
ನಾನು ಸೈಲಂಟ್ - ನನ್ನ ವಿಚಾರಕ್ಕೆ ಬಂದ್ರೆ ವೈಲೆಂಟ್ : ಸುಮಲತಾ ಎಚ್ಚರಿಕೆ

ಸಾರಾಂಶ

 ಗಣಿಗಾರಿಕೆ  ತಡೆಗಟ್ಟಲು ಕೆಆರ್‌ಎಸ್ ಉಳಿಯಬೇಕು - ಸುಮಲತಾ ರೈತರಿಗೆ ಒಳ್ಳೆಯದಾಗಬೇಕು. ಸರ್ಕಾರಕ್ಕೆ ರಾಜಧನ ಸಂದಾಯವಾಗಬೇಕು ಎಂದುದಷ್ಟೇ ನನ್ನ ಮೂಲ ಉದ್ದೇಶ ಹೋರಾಟವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ

ಮದ್ದೂರು (ಜು.14): ಗಣಿಗಾರಿಕೆ  ತಡೆಗಟ್ಟಲು ಕೆಆರ್‌ಎಸ್ ಉಳಿಯಬೇಕು. ರೈತರಿಗೆ ಒಳ್ಳೆಯದಾಗಬೇಕು. ಸರ್ಕಾರಕ್ಕೆ ರಾಜಧನ ಸಂದಾಯವಾಗಬೇಕು ಎಂದುದಷ್ಟೇ ನನ್ನ ಮೂಲ ಉದ್ದೇಶ. ಹೋರಾಟವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. 

ಜಿಲ್ಲೆಯಲ್ಲಿ ಗಣಿಗಾರಿಕೆ ವಿರುದ್ದದ ಹೋರಾಟ ಈಗಿನದಲ್ಲ ಹಿಂದಿನಿಂದಲೂ ನಡೆಯುತ್ತಿದೆ. ಇದಕ್ಕೆ ಜನರಿಂದ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಜನರಿಗೆ ಅನುಕೂಲವಾಗುವುದನ್ನು ಬಿಟ್ಟು ಬೇರೆ ಯಾವ ಹಿತಾಸಕ್ತಿಯು ನನ್ನ ಹೋರಾಟದಲ್ಲಿ ಅಡಗಿಲ್ಲ ಎಂದು ತಿಳಿಸಿದರು. 

KRS ಬಗ್ಗೆ ಸುಮಲತಾ ಅಂಬರೀಶ್ ಆತಂಕ : ಸಿಬಿಐ ತನಿಖೆಗೆ ಆಗ್ರಹ

ನನ್ನ ಹೋರಾಟವನ್ನು ಜೆಡಿಎಸ್ ನವರು ಟೀಕಿಸುವ ಮೂಲಕ ನನ್ನನ್ನು ಕೆಣಕುತ್ತಿದ್ದಾರೆ. ಇಂತಹ ಟೀಕೆಗಳಿಗೆ ನೀವೆ ಅಂತ್ಯ ಕಾಣಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಪರೋಕ್ಷವಾಗಿ ಸಲಹೆ ನೀಡಿದರು. 

ಜೆಡಿಎಸ್‌ವರು ನನ್ನ ವಿರುದ್ಧ ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ  ಕುಮಾರಸ್ವಾಮಿ ಪುತ್ರನ ವಿರುದ್ಧ ಗೆದ್ದಿದ್ದೇನೆ ಎಂಬ ಒಂದೇ ಕಾರಣಕ್ಕೆ ಈ ರೀತಿಯ ಧ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಭಾರತೀನಗರ ಜಿಪಂ ಸದಸ್ಯ ಎ. ರಾಜೀವ್, ಮಾಜಿ ಅಧ್ಯಕ್ಷ ಬಿ. ವಿವೇಕಾನಂದ ಸೇರಿದಂತೆ ಹಲವು ಮುಖಂಡರು ಇದ್ದರು. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC