'ಮಂಗಳೂರು ವಿಮಾನ ನಿಲ್ದಾಣಕ್ಕೆ  ಶ್ರೀ ಮಧ್ವ ಶಂಕರರ ಹೆಸರಿಡಿ'

Published : Nov 27, 2020, 12:14 AM ISTUpdated : Nov 27, 2020, 12:18 AM IST
'ಮಂಗಳೂರು ವಿಮಾನ ನಿಲ್ದಾಣಕ್ಕೆ  ಶ್ರೀ ಮಧ್ವ ಶಂಕರರ ಹೆಸರಿಡಿ'

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರರ ಹೆಸರಿಡುವಂತೆ ಪುತ್ತಿಗೆ ಶ್ರೀ ಒತ್ತಾಯ/ ಪುತ್ತಿಗೆ ಮಠದ ಸುಗುಣೇಂದ್ರ  ತೀರ್ಥ ಶ್ರೀಗಳಿಂದ ಒತ್ತಾಯ/ ಉಡುಪಿ ಪುತ್ತಿಗೆ ಮಠದ ಮಠದ ಸುಗುಣೇಂದ್ರ ತೀರ್ಥರು/ ಮಂಗಳೂರು ಸಮೀಪದಲ್ಲಿ ಉಡುಪಿ ಹಾಗೂ ಶೃಂಗೇರಿ ಕ್ಷೇತ್ರ ಇದೆ/ ಜಗದ್ಗುರು ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದ್ದಾರೆ

ಉಡುಪಿ(ನ. 26)  ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ಎಂದು ಹೆಸರಿಡಬೇಕು ಎಂದು ಪುತ್ತಿಗೆ ಶ್ರೀ ಒತ್ತಾಯ ಮಾಡಿದ್ದಾರೆ. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಒತ್ತಾಯ ಮಾಡಿದ್ದು ಮಂಗಳೂರು ಸಮೀಪದಲ್ಲಿ ಉಡುಪಿ ಹಾಗೂ ಶೃಂಗೇರಿ ಕ್ಷೇತ್ರ ಇದೆ ಜಗದ್ಗುರು ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದ್ದಾರೆ. ಮಧ್ವಾಚಾರ್ಯರು ಉಡುಪಿ ಶ್ರೀ ಕೃಷ್ಣ ಮಠ ಸ್ಥಾಪಿಸಿದ್ದಾರೆ ಶ್ರೀ ಮಧ್ವಶಂಕರ ವಿಮಾನ ನಿಲ್ದಾಣ ಹೆಸರಿಡುವುದು ಅರ್ಥ ಪೂರ್ಣ ಎಂದು ಹೇಳಿದ್ದಾರೆ.

ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ  ಶ್ರೀರಾಮನ ಹೆಸರಿಡಲಾಗಿದೆ ಮಧ್ವ ಶಂಕರ ಹೆಸರಿಟ್ಟರೆ ದಾರ್ಶನಿಕ ಪರಂಪರೆಗೆ ಗೌರವ ಸಂದಂತೆ ಆಗುತ್ತದೆ. ಆಧ್ಯಾತ್ಮಿಕತೆಯೇ ಭಾರತದ ಮೂಲ ಸಂಪತ್ತು ರಾಮಾನುಜಾಚಾರ್ಯ, ಬಸವಣ್ಣ ನವರ ಹೆಸರೂ ಇಡಬೇಕು. ಅವರ ಮೂಲ ಊರಗಳ ಸಮೀಪದ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕು ಎಂದು ಸಲಹೆ ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಹೆಸರಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ನೀಡಲಾಗಿದೆ ಎಂಬ ಕೂಗು ಸಹ ಎದ್ದಿತ್ತು. 

 

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್