ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಜನರು ರೂಢಿಸಿಕೊಳ್ಳುವುದು ಉತ್ತಮ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಸೊಸೈಟಿಯ ಮುಖ್ಯಸ್ಥರಾದ ಡಾ. ಬಾಲಕೃಷ್ಣ ರೆಡ್ಡಿ ಹೇಳಿದರು.
ತುರುವೇಕೆರೆ : ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಜನರು ರೂಢಿಸಿಕೊಳ್ಳುವುದು ಉತ್ತಮ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಸೊಸೈಟಿಯ ಮುಖ್ಯಸ್ಥರಾದ ಡಾ. ಬಾಲಕೃಷ್ಣ ರೆಡ್ಡಿ ಹೇಳಿದರು.
ಮಾರುತಿ ಎಜುಕೇಷನ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಮತ್ತು ಉಚಿತ ತಪಾಸಣಾ ಶಿಬಿರದಲ್ಲಿ ಅವರು ಶಿಬಿರಾರ್ಥಿಗಳಿಗೆ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ದತಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಭಾರತೀಯ ಪರಂಪರಿಕಾ ಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಋಷಿ ಮುನಿಗಳು ಕಂಡು ಹಿಡಿದಿರುವ ಎಲ್ಲಾ ಔಷಧೀಯ ಗುಣಗಳ ಮಾಹಿತಿ ಲಭ್ಯವಿದೆ. ಹಾಗಾಗಿ ತಮ್ಮ ಸಂಸ್ಥೆ ಈ ಚಿಕಿತ್ಸಾ ವಿಧಾನವನ್ನು ಸಾರ್ವಜನಿಕರಿಗೆ ಪರಿಚಯಿಸುವ ಕಾಯಕ ಮಾಡುತ್ತಿದೆ ಎಂದು ಹೇಳಿದರು.
ಈ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ನೂರಾರು ಕಾಯಿಲೆಗಳಿಗೆ ಔಷಧ ನೀಡಲಾಗುವುದು. ಇಂತಹ ಖಾಯಿಲೆಗೆ ಔಷಧಿ ಇಲ್ಲ ಎನ್ನುವ ಮಾತೇ ಇಲ್ಲ. ಆಕ್ಯುಪಂಚರ್ ಮಾಡುವುದರಿಂದ ಮನುಷ್ಯನ ಯಾವ ಭಾಗದಲ್ಲಿ ತೊಂದರೆ ಇದೆ ಎಂಬುದನ್ನು ಕಂಡು ಹಿಡಿದು ಆ ಸಮಸ್ಯೆಗೆ ಚಿಕಿತ್ಸೆ ಕೊಡಬಹುದಾಗಿದೆ ಎಂದು ಡಾ.ಬಾಲಕೃಷ್ಣ ರೆಡ್ಡಿ ಹೇಳಿದರು.
ಜನರು ತಮ್ಮ ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕು. ಫಾಸ್ಟ್ ಫುಡ್ ಎಂಬ ಬಾಯಿ ರುಚಿಯ ಆಸೆಗೆ ಬಿದ್ದು ತಮ್ಮ ಜೀವವನ್ನೇ ನಿರ್ಲಕ್ಷಿಸಿದ್ದಾರೆ. ದುರಂತವೆಂದರೆ ಹಣವನ್ನು ತೆತ್ತು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಈ ಭಾರತೀಯ ಪಾರಂಪರಿಕ ಚಿಕಿತ್ಸಾ ವಿಧಾನಕ್ಕೆ ಒಳಪಡುವ ವ್ಯಕ್ತಿಗಳು ತಾಳ್ಮೆಯಿಂದ ಚಿಕಿತ್ಸೆ ಪಡೆದರೆ ಅದರ ಫಲಿತಾಂಶ ಲಭಿಸುತ್ತದೆ. ಈ ಚಿಕಿತ್ಸಾ ವಿಧಾನದಲ್ಲಿ ಯಾವುದೇ ಅಡ್ಡಪರಿಣಾಮ ಕಂಡು ಬರುವುದಿಲ್ಲ. ರೋಗ ವಾಸಿಯಾಗುವುದು ಕೆಲ ಕಾಲ ತಡವಾಗಬಹುದೇ ವಿನಃ ಯಾವುದೇ ಸಮಸ್ಯೆ ಕಾಣದು ಎಂದು ತಿಳಿಸಿದರು.
ನೂರಾರು ಮಂದಿ ಭಾರತೀಯ ಪಾರಂಪರಿಕ ಚಿಕಿತ್ಸಾ ವಿಧಾನದ ಅನುಕೂಲ ಪಡೆದುಕೊಂಡರು. ಸಂಸ್ಥೆಯ ಕೊಡಗೀಹಳ್ಳಿ ಪಲ್ಲವಿ, ಮಂಜುಶ್ರೀ, ಸಾರಿಕಾ, ಹರೀಶ್, ಶ್ಯಾಮ್ ಇದ್ದರು