ಸ್ವಚ್ಛತೆ ಕಾಪಾಡಿದಲ್ಲಿ ಡೆಂಘೀ ನಿಯಂತ್ರಿಸಬಹುದು

By Kannadaprabha News  |  First Published Oct 7, 2023, 9:09 AM IST

ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರ ವಹಿಸುವ ಜತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಲ್ಲಿ ಡೆಂಘೀ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಸತೀಶ್‌ ಸಲಹೆ ನೀಡಿದರು.


  ಹೊಳೆನರಸೀಪುರ :  ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರ ವಹಿಸುವ ಜತೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಲ್ಲಿ ಡೆಂಘೀ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಡಾ. ಸತೀಶ್‌ ಸಲಹೆ ನೀಡಿದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಯ ನೇತ್ರ ತಜ್ಞ ಡಾ. ಸತೀಶ್‌ ಡೆಂಘೀ ಲಾರ್ವ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿ, ಮಾತನಾಡಿದರು. ಡೆಂಘೀ, ಮಲೇರಿಯಾ, ಮೆದುಳು ಜ್ವರ, ಆನೆ ಕಾಲುರೋಗ, ಚಿಕುನ್‌ ಗೂನ್ಯ ರೋಗಗಳು ಸೊಳ್ಳೆಗಳಿಂದ ಬರುವ ಕಾಯಿಲೆಗಳಾಗಿದ್ದು, ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಮಾರಣಾಂತಿಕವಾಗಿದೆ.

Tap to resize

Latest Videos

ಆದ್ದರಿಂದ ರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗುವುದು ಒಂದೆಡೆಯಾದರೆ, ರೋಗವೇ ಬಾರದಂತೆ ಎಚ್ಚರ ವಹಿಸಿದಲ್ಲಿ ಎಲ್ಲರಿಗೂ ಒಳ್ಳೆಯದು ಜತೆಗೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆಯು ನೀಡುವ ಸಲಹೆಗಳನ್ನು ಪಾಲನೆ ಮಾಡುತ್ತಾ, ಭಿತ್ತಿಪತ್ರಗಳಲ್ಲಿ ನೀಡುವ ಎಲ್ಲಾ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಅರ್ಥೈಸಿಕೊಂಡು ಜನರಲ್ಲಿ ಹೆಚ್ಚಿನ ಅರಿವನ್ನು ಮೂಡಿಸುವ ಕಾರ್ಯವನ್ನು ವಿದ್ಯಾವಂತರು ಮಾಡಿದಲ್ಲಿ ಸಾಂಕ್ರಮಿಕ ರೋಗ ಮುಕ್ತ ಪಟ್ಟಣ ಅಥವಾ ಬಡಾವಣೆ ಎಂಬ ಹೆಗ್ಗಳಿಗೆ ನಿಮ್ಮದಾಗುತ್ತದೆ ಎಂದರು.

ಪಟ್ಟಣದ ಸೀತವಿಲಾಸ ರಸ್ತೆ, ಚೌಡೇಶ್ವರಿ ದೇವಾಲಯ ರಸ್ತೆ, ಮೇದರ ಬೀದಿ, ಹೌಸಿಂಗ್ ಬೋರ್ಡ್, ಆಯತ್‌ ನಗರ, ಆಶ್ರಯ ಬಡಾವಣೆ ಹಾಗೂ ಇತರೆ ಬಡಾವಣೆಗಳಲ್ಲಿ ಕೈಗೊಂಡ ಡೆಂಘೀ ಲಾರ್ವ ಸಮೀಕ್ಷೆ ಕಾರ್ಯದಲ್ಲಿ ತಾ. ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜೈರಾಮ್‌ ಸ್ವಾಮೀಜಿ, ಸೋಮಶೇಖರ್‌, ರಾಮ್‌ ಪ್ರಸಾದ್‌ ಗೌರೀಶ್ ಹಾಗೂ ಜೆ.ಟಿ.ಸ್ವಾಮಿ, ಶುಶ್ರೂಷಕರಾದ ಕೃಷ್ಣಭಾರತಿ ಇತರರು ಇದ್ದರು.

ಬಳ್ಳಾರಿಯಲ್ಲಿ ಹೆಚ್ಚಿದ ಡೆಂಘಿ

ಬಳ್ಳಾರಿ(ಸೆ.10):  ನಗರ ಸೇರಿದಂತೆ ಜಿಲ್ಲಾದ್ಯಂತ ಶಂಕಿತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ನೂರಾರು ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿಯೇ ಜಿಲ್ಲೆಯಲ್ಲಿ 436 ಜನರಲ್ಲಿ ಡೆಂಘೀಜ್ವರ ಕಾಣಿಸಿದೆ. ಈ ಪೈಕಿ ಬಳ್ಳಾರಿ ನಗರದಲ್ಲಿಯೇ 229 ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 2616 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ! ಶಂಕಿತ ಡೆಂಘೀ ಪ್ರಕರಣಗಳ ಪೈಕಿ 92 ಪ್ರಕರಣಗಳು ಖಚಿತವಾಗಿವೆ.

ಬಳ್ಳಾರಿ ನಗರದಲ್ಲಿಯೇ ಹೆಚ್ಚು ಪ್ರಕರಣ

ಜಿಲ್ಲೆಯ ಪೈಕಿ ಬಳ್ಳಾರಿ ಮಹಾನಗರದಲ್ಲಿ ಅತಿಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಜನವರಿಯಿಂದ ಈವರೆಗೆ ಒಟ್ಟು 1124 ಪ್ರಕರಣಗಳು ಪತ್ತೆಯಾಗಿದ್ದು, ಆಗಸ್ಟ್ ತಿಂಗಳು ಒಂದರಲ್ಲಿಯೇ 229 ಜನರಲ್ಲಿ ಡೆಂಘೀಜ್ವರ ಇರುವುದು ಖಚಿತವಾಗಿದೆ.

ಯಾವಾಗಲೂ ನಿಮಗೇ ಸೊಳ್ಳೆ ಕಚ್ಚುತ್ತಾ? ಯಾರ ಕಂಡ್ರೆ ಇದಕ್ಕೆ ಹೆಚ್ಚು ಇಷ್ಟ?

ಗಮನಾರ್ಹ ಸಂಗತಿ ಎಂದರೆ ಜ್ವರ ಹಿನ್ನಲೆಯಲ್ಲಿ ಪರೀಕ್ಷಿಸಲಾದ ಜಿಲ್ಲೆಯ ಒಟ್ಟು 2378 ಜನರ ಪೈಕಿ ಎಲ್ಲರಲ್ಲೂ ಶಂಕಿತ ಡೆಂಘೀಜ್ವರ ಇರುವುದು ಖಚಿತವಾಗಿದೆ. ನಗರದ ವಿವಿಧ ಕಾಲೋನಿಗಳ ತಗ್ಗು ಪ್ರದೇಶಗಳಲ್ಲಿ ಹೆಚ್ಚು ದಿನಗಳ ಕಾಲ ಮಳೆನೀರು ಸಂಗ್ರಹಗೊಳ್ಳುತ್ತಿರುವುದು, ಕುಡಿವನೀರನ್ನು ಬಹಳದಿನಗಳವರೆಗೆ ಹಿಡಿದಿಟ್ಟುಕೊಳ್ಳುವುದು, ಹೂವಿನ ಕುಂಡಗಳಲ್ಲಿ ನಿತ್ಯ ನೀರು ಬದಲಾಯಿಸದಿರುವುದು, ಟೈರ್, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹಗೊಳ್ಳುತ್ತಿರುವುದು ಸೇರಿದಂತೆ ನಾನಾ ಕಾರಣಗಳಿಂದ ಈಡೀಸ್ ಸೊಳ್ಳೆಯ ಸಂತಾನೋತ್ಪತ್ತಿ ಹೆಚ್ಚಾಗುತ್ತಿರುವುದರಿಂದ ಡೆಂಘೀಜ್ವರ ಪ್ರಕರಣಗಳು ನಗರ ಪ್ರದೇಶದಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಲು ಕಾರಣವಾಗಿದೆ.

click me!