Gadag: ಉತ್ತರಾಧಿಕಾರಿ ವಿಚಾರ: ಶಿವಾನಂದ ಮಠದಲ್ಲಿ ಮುಂದುವರಿದ ಗೊಂದಲ

By Kannadaprabha News  |  First Published Jan 27, 2023, 9:41 AM IST

ಹುಬ್ಬಳ್ಳಿ ಮೂರುಸಾವಿರ ಮಠ ಬಳಿಕ ಇಲ್ಲಿನ ಪ್ರತಿಷ್ಟಿತ ಶಿವಾನಂದ ಮಠದ ‘ಉತ್ತರಾಧಿಕಾರ ವಿವಾದ’ ಭುಗಿಲೆದ್ದಿದ್ದು, ಗುರುವಾರ ಸಂಜೆ ಮಠದ ಆವರಣದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳ ಭಕ್ತರ ಮಧ್ಯೆತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


ಗದಗ (ಜ.27) : ಹುಬ್ಬಳ್ಳಿ ಮೂರುಸಾವಿರ ಮಠ ಬಳಿಕ ಇಲ್ಲಿನ ಪ್ರತಿಷ್ಟಿತ ಶಿವಾನಂದ ಮಠದ ‘ಉತ್ತರಾಧಿಕಾರ ವಿವಾದ’ ಭುಗಿಲೆದ್ದಿದ್ದು, ಗುರುವಾರ ಸಂಜೆ ಮಠದ ಆವರಣದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳ ಭಕ್ತರ ಮಧ್ಯೆತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಧ್ಯಕ್ಷರ ನೇಮಕದ ವಿಷಯದಲ್ಲಿ ಬುಧವಾರ ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಮಹಾಸ್ವಾಮಿಗಳು ಸುದ್ದಿಗೋಷ್ಠಿ ನಡೆಸಿ, ಕಿರಿಯ ಶ್ರೀಗಳಾದ ಸದಾಶಿವಾನಂದ ಸ್ವಾಮಿಗಳ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ಅದಕ್ಕಾಗಿ ಈ ಬಾರಿಯ ಜಾತ್ರೆಯನ್ನು ನನ್ನ ನೇತೃತ್ವದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದರು.

Tap to resize

Latest Videos

undefined

ಬಿ.ಕೆ.ಹರಿಪ್ರಸಾದ ಕೊತ್ವಾಲ ರಾಮಚಂದ್ರನ ಶಿಷ್ಯ; ಪ್ರತಿಪಕ್ಷ ನಾಯಕನ ಜನ್ಮ ಜಾಲಾಡಿದ ಸಚಿವ

ಗುರುವಾರ ಕಿರಿಯ ಶ್ರೀ ಮತ್ತು ಹಿರಿಯ ಶ್ರೀಗಳ ಭಕ್ತರ ನಡುವೆ ನ್ಯಾಯಾಲಯ ನೀಡಿದ ತೀರ್ಪಿನ ವಿಚಾರವಾಗಿ ಕೆಲ ಕಾಲ ಜೋರಾಗಿ ವಾಗ್ವಾದ ನಡೆಯಿತು. ಎರಡೂ ಕಡೆಯ ನೂರಾರು ಭಕ್ತರು ಸೇರಿದ್ದರಿಂದ ಪರಿಸ್ಥಿತಿ ಸ್ವಲ್ಪ ವಿಕೋಪಕ್ಕೆ ಹೋಗುವ ಹಂತ ತಲುಪಿತ್ತು.

ಕಿರಿಯ ಶ್ರೀಗಳÜ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಅವರಿಗೆ ಇಲ್ಲಿ ಯಾವ ಅಧಿಕಾರವೂ ಇಲ್ಲ. ಈ ಮಠಕ್ಕೆ ನಾನೇ ಪೀಠಾಧಿಪತಿ ಮತ್ತು ನನ್ನಿಂದಲೇ ಎಲ್ಲ ವ್ಯವಹಾರ, ಆಡಳಿತ ನಡೆಯಬೇಕೆಂದು ಕೋರ್ಚ್‌ ಆದೇಶ ನೀಡಿದೆ ಎಂದು ಹಿರಿಯ ಶ್ರೀಗಳು ಹೇಳಿದ್ದು ಭಕ್ತರ ಗಲಾಟೆಗೆ ಕಾರಣವಾಗಿತ್ತು. ಕಿರಿಯ ಶ್ರೀಗಳ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೌಂಟರ್‌ ಪ್ರೆಸ್‌ ಮೀಟ್‌:

ಗುರುವಾರ ಕಿರಿಯ ಶ್ರೀಗಳು ಸಹ ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೆ ಹಿರಿಯ ಶ್ರಿಗಳ ಭಕ್ತರು ಅಡ್ಡಿಪಡಿಸಿ ಪ್ರಶ್ನೆ ಮಾಡುತ್ತಿದ್ದಂತೆ ಎರಡೂ ಬಣದ ಭಕ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕಿರಿಯ ಶ್ರೀಗಳನ್ನು ಉತ್ತರಾಧಿಕಾರಿ ಸ್ಥಾನದಿಂದ ಈಗಾಗಲೇ ಕೆಳಗಿಳಿಸಲಾಗಿದೆ. ಅವರಿಗೆ ಮಠದ ವ್ಯವಹಾರ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಯಾವುದೇ ಅಧಿಕಾರ ಇಲ್ಲ ಅಂತ ಮತ್ತೊಂದು ಬಣದ ಸ್ವಾಮೀಜಿಗಳ ಭಕ್ತರು ತಮ್ಮ ವಾದ ಮುಂದಿಟ್ಟಿದ್ದಾರೆ.

ನ್ಯಾಯಾಲಯದ ಆದೇಶದಲ್ಲಿ ಯಾವುದೇ ಪತ್ರಿಕಾಗೋಷ್ಠಿ ನಡೆಸಬಾರದು ಅಂತ ಇಲ್ಲ. ನಮ್ಮ ಅಭಿಪ್ರಾಯ ಹೇಳಲು ಬಿಡಿ ಎಂದು ಕಿರಿಯ ಶ್ರೀಗಳ ಭಕ್ತರು ತಮ್ಮ ವಾದ ವ್ಯಕ್ತಪಡಿಸಿದ್ದಾರೆ. ಎರಡೂ ಗುಂಪಿನ ಭಕ್ತರು ಇಬ್ಬರು ಸ್ವಾಮೀಜಿಗಳ ಸಮ್ಮುಖದಲ್ಲೇ ವಾಗ್ವಾದ, ಕೈಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದರಿಂದ ಮಠದ ಆವರಣ ಪ್ರಕ್ಷುಬ್ದವಾಗಿತ್ತು.

ನಂತರ ಗದಗ ಶಹರ ಪೊಲೀಸ್‌ ಠಾಣೆ ಸಿಬ್ಬಂದಿಗಳು ಬಂದ ನಂತರ ಪರಸ್ಥಿತಿ ತಿಳಿಗೊಂಡಿತು.

ಸುದ್ದಿಗೋಷ್ಠಿ:

ಸಭೆಯ ಗೊಂದಲದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಿಯ ಶ್ರೀಗಳು, ಹಿರಿಯ ಶ್ರೀಗಳು ಕೆಲವರÜ ಹಿತಾಸಕ್ತಿಗೆ ಬಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಮಠ 200 ಕೋಟಿ ಮೌಲ್ಯದ ಆಸ್ತಿಯಾಗಿರುವ ಬಿಎಎಂಎಸ್‌ ಕಾಲೇಜು ಕಬಳಿಸಲು, ಇದರೊಟ್ಟಿಗೆ ಇನ್ನುಳಿದ ಆಸ್ತಿಗಳ ರಕ್ಷಣೆ, ಉಳಿಸುವ ವಿಷಯದಲ್ಲಿ ಉತ್ತರಾಧಿಕಾರಿಯಾಗಿ ನಾನು ಕೈಗೊಂಡ ಕ್ರಮ ಈ ಎಲ್ಲ ಬೆಳವಣಿಗೆಗೆ ಕಾರಣ. ನಾನು ಪ್ರಾಮಾಣಿಕವಾಗಿ, ಕರ್ತವ್ಯಬದ್ಧನಾಗಿ ಕ್ರಮ ಕೈಗೊಂಡಿದ್ದೇನೆ ಎಂದರು.

ಹಾನಗಲ್ಲ ನಿರಂತರ ಕುಡಿಯುವ ನೀರು ಯೋಜನೆ ಶೀಘ್ರ ಸಾಕಾರ: ಶಾಸಕ ಶ್ರೀನಿವಾಸ ಮಾನೆ

ನನ್ನನ್ನು ಮಠದಿಂದ ತೆಗೆಯಲಾಗಿದೆ ಎನ್ನುವ ಸುಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರೆ, ಇದಕ್ಕೆಲ್ಲ ನಾನು ಹೆದರುವುದಿಲ್ಲ. ಈಗಾಗಲೇ ನಾವು ಘೋಷಣೆ ಮಾಡಿದ ಜಿ.ಆರ್‌. ಆದಪ್ಪಗೌಡ್ರ ಅವರೇ ಜಾತ್ರಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅವರ ಅಧ್ಯಕ್ಷತೆಯಲ್ಲಿಯೇ ಜಾತ್ರೆ ನಡೆಯಲಿದೆ ಎಂದ ಅವರು, ಹಿರಿಯ ಶ್ರೀಗಳ ವರ್ತನೆ, ಅವರ ಹಿಂಬಾಲಕರ ನಡೆ ನುಡಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮೋಹನ ಮಾಳಶೆಟ್ಟಿ, ಎಸ್‌.ಕೆ. ಮ್ಯಾಗೇರಿ, ಸಂತೋಷ ಕಬಾಡ್ರ, ರಾಹುಲ್‌ ಅರಳಿ, ರಾಜು ಖಾನಪ್ಪನವರ ಸೇರಿದಂತೆ ಶಿವಾನಂದ ಮಠದ ಭಕ್ತರು, ಅವಳಿ ನಗರದ ಪ್ರಮುಖರು ಇದ್ದರು.

click me!