ಕೋವಿಡ್‌ನಿಂದ ಬಹು ಅಂಗಾಂಗ ವೈಫಲ್ಯ: ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

By Kannadaprabha NewsFirst Published Nov 21, 2020, 10:22 AM IST
Highlights

ಕೋವಿಡ್‌ ಪಾಸಿಟಿವ್‌ ಜತೆಗೆ ಕಿಡ್ನಿ, ಶ್ವಾಸಕೋಶ, ಹೃದಯದ ಸಮಸ್ಯೆ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ| ಕೋವಿಡ್‌ ನಂತರದಲ್ಲಿ ಕಾಣಿಸಿಕೊಳ್ಳುವ ಪಿಐಎಂಎಸ್‌-ಟಿಎಸ್‌ ಸಾಕಷ್ಟು ಅಪಾಯಕಾರಿ| ಈ ಕುರಿತಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುವ ಅವಶ್ಯಕತೆ ಇದೆ: ವೈದ್ಯರು| 

ಬೆಂಗಳೂರು(ನ.21): ಕೋವಿಡ್‌ನಿಂದ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದ 14 ವರ್ಷದ ಬಾಲಕಿಗೆ ರೈನ್‌ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದೆ.

ಬಾಲಕಿಯಲ್ಲಿ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿತ್ತು. ಜತೆಗೆ ಕಿಡ್ನಿ, ಶ್ವಾಸಕೋಶ, ಹೃದಯದ ಸಮಸ್ಯೆ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ಬಾಲಕಿಯಲ್ಲಿ ಕೋವಿಡ್‌ನ ಕೊನೆಯ ಹಂತಗಳಲ್ಲೊಂದಾದ ಪಿಡಿಯಾಟ್ರಿಕ್‌ ಮಲ್ಟಿಸಿಸ್ಟಮ್‌ ಇನ್‌ಫ್ಲಾಮೆಟರಿ ಸಿಂಡ್ರೋಮ್‌ (ಪಿಐಎಂಎಸ್‌-ಟಿಎಸ್‌) ಎಂಬ ಲಕ್ಷಣಗಳಿದ್ದವು. ರೈನ್‌ ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಬಾಲಕಿ ಜ್ವರದ ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯನ್ನು ತಕ್ಷಣ ಮಕ್ಕಳ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಪರೀಕ್ಷಿಸಿದಾಗ ಬಾಲಕಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದ್ದರಿಂದ ಮಗು ಚೇರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಕ್ಕೆ ತಯಾರಿ: ಬಿಬಿಎಂಪಿ ಆಯುಕ್ತ

ಮಕ್ಕಳಲ್ಲಿ ಸತತವಾಗಿ ಮೂರು ದಿನಗಳ ಕಾಲ ಜ್ವರ, ದೇಹದ ಮೇಲೆ ರಾರ‍ಯಷಸ್‌ ಕಾಣಿಸಿಕೊಳ್ಳುವುದು, ಉಸಿರಾಟದ ಸಮಸ್ಯೆಯಾದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಕೋವಿಡ್‌ ನಂತರದಲ್ಲಿ ಕಾಣಿಸಿಕೊಳ್ಳುವ ಪಿಐಎಂಎಸ್‌-ಟಿಎಸ್‌ ಸಾಕಷ್ಟು ಅಪಾಯಕಾರಿಯಾಗಿದೆ. ಈ ಕುರಿತಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುವ ಅವಶ್ಯಕತೆ ಎನ್ನುತ್ತಾರೆ ರೈನ್‌ ಬೋ ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರು.
 

click me!