ಹಾಸನದಿಂದ ತಿಪಟೂರಿಗೆ ಪ್ರೇಮಿಗಳ ಶವ ತೇಲಿ ಬಂದಿದೆ. ಅಷ್ಟು ದೂರ ನದಿಯಲ್ಲಿ ತೇಲಿ ಬಂದ ಶವದ ಹಿಂದೆ ಇದೆ ಒಂದು ಲವ್ ಸ್ಟೋರಿ ಏನದು..?
ತಿಪಟೂರು (ನ.21): ಪ್ರೇಮವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಕಾರಣ ಪ್ರೇಮಿಗಳಿಬ್ಬರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿನ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಶವಗಳು ಗುರುವಾರ ಸಂಜೆ ತಿಪಟೂರಿನಲ್ಲಿ ಪತ್ತೆಯಾಗಿವೆ.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ರಮೇಶ್(24) ಇದೇ ತಾಲೂಕಿನ ಮತ್ತಿಘಟ್ಟಗ್ರಾಮದ ಸುಶ್ಮಿತಾ(19) ಮೃತ ಪ್ರೇಮಿಗಳಾಗಿದ್ದಾರೆ. ಇವರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಬೇರೆ ಕೋಮಿಗೆ ಸೇರಿದ ಕಾರಣ ವಿವಾಹಕ್ಕೆ ಪೋಷಕರ ವಿರೋಧವಿತ್ತು ಎನ್ನಲಾಗಿದೆ.
ಮದುವೆ ಆಗದಿದ್ದರೆ ನಗ್ನ ಫೋಟೋ ವೈರಲ್ ಬೆದರಿಕೆ: ಕಂಗಾಲಾದ ಯುವತಿ..!
ಇದರಿಂದ ಮನನೊಂದ ಪ್ರೇಮಿಗಳು ಚನ್ನರಾಯಪಟ್ಟಣದ ಬಾಗೂರು ನಾಲೆ ಪಕ್ಕದಲ್ಲಿ ಬೈಕ್ ಹಾಗೂ ಚಪ್ಪಲಿಗಳನ್ನು ಬಿಟ್ಟು, ಬಟ್ಟೆಯಿಂದ ಇಬ್ಬರು ಸೊಂಟಕ್ಕೆ ಕಟ್ಟಿಅಪ್ಪಿಕೊಂಡು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವಗಳು ತಿಪಟೂರು ತಾಲೂಕಿನ ಮತ್ತಿಘಟ್ಟಬಳಿ ಹೇಮೆ ನಾಲೆಯಲ್ಲಿ ತೇಲಿಕೊಂಡು ಬಂದಿವೆ. ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.