ಬೆಳೆ ಸಾಲ ಮನ್ನಾ: ಈ ದಿನಾಂಕದೊಳಗೆ ಅಗತ್ಯ ದಾಖಲೆ ಸಲ್ಲಿಸಿ

By Kannadaprabha NewsFirst Published Mar 18, 2020, 10:51 AM IST
Highlights

ಬೆಳೆಸಾಲ ಪಡೆದ ರೈತರು 1 ಲಕ್ಷ ಸಾಲಮನ್ನಾ ಯೋಜನೆ ಸದುಪಯೋಗ ಪಡೆಯಲು ಕುಮ್ಮೂರ ಹೇಳಿಕೆ| ಮಾ. 25 ರೊಳಗೆ ಸೂಕ್ತ ದಾಖಲಾತಿ ಸಲ್ಲಿಸಲು ಸೂಚನೆ| ಗರಿಷ್ಠ ಒಂದು ಲಕ್ಷ ಸಾಲಮನ್ನಾ ಮಾಡುವ ಬಗ್ಗೆ ರೈತರು ಅಗತ್ಯ ದಾಖಲೆಗಳನ್ನು ಸಂಘಕ್ಕೆ ಪೂರೈಸಬೇಕು| 

ಹಾವೇರಿ(ಮಾ.18): ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪಿಎಲ್‌ಡಿ ಬ್ಯಾಂಕ್‌ಗಳಿಂದ ಅಲ್ಪಾವಧಿ ಬೆಳೆಸಾಲ ಪಡೆದ ರೈತರು 1 ಲಕ್ಷ ಸಾಲಮನ್ನಾ ಯೋಜನೆ ಸದುಪಯೋಗ ಪಡೆಯಲು ಮಾ. 25 ರೊಳಗೆ ಸೂಕ್ತ ದಾಖಲಾತಿಗಳನ್ನು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸಲ್ಲಿಸಲು ಸಹಕಾರಿ ಸಂಘಗಳ ಉಪನಿಬಂಧಕ ಎನ್.ಎಸ್. ಕುಮ್ಮೂರ ತಿಳಿಸಿದ್ದಾರೆ. 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಪಿಎಲ್‌ಡಿ ಬ್ಯಾಂಕ್ ಗಳಿಂದ ಅಲ್ಪಾವಧಿ ಬೆಳೆಸಾಲ ಪಡೆದ ಒಟ್ಟು ಮೊತ್ತದ ಪೈಕಿ 2018 ಜು. 10 ಕ್ಕೆ ಹೊರಬಾಕಿಯಲ್ಲಿ ಗರಿಷ್ಠ ಒಂದು ಲಕ್ಷ ಸಾಲಮನ್ನಾ ಮಾಡುವ ಬಗ್ಗೆ ರೈತರು ಅಗತ್ಯ ದಾಖಲೆಗಳನ್ನು ಸಂಘಕ್ಕೆ ಪೂರೈಸಬೇಕಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈವರೆಗೂ ದಾಖಲೆಗಳನ್ನು ಪೂರೈಸದ ಸಾಲಗಾರ ರೈತರು ತಮ್ಮ ಆಧಾರ್, ಪಡಿತರ ಚೀಟಿ ಮತ್ತು ಭೂಮಿಯ ದಾಖಲೆಗಳನ್ನು ಮತ್ತು ಸ್ವಯಂ ದೃಢೀಕರಣ ಪತ್ರ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ದಾಖಲಾತಿಗಳನ್ನು ಸಲ್ಲಿಸಿ ಸಾಲಮನ್ನಾ ತಂತ್ರಾಂಶದಲ್ಲಿ ಸಂಬಂಧಿಸಿದ ಪ್ರಾಧಿಕಾರದ ದತ್ತಾಂಶದಲ್ಲಿ ಮಾಹಿತಿಗೆ ತಾಳೆಯಾಗದೇ ಇದ್ದಲ್ಲಿ ಅಂತಹ ಅರ್ಹ ರೈತರು ಸೂಕ್ತ ದಾಖಲೆಗಳನ್ನು ಮತ್ತು ಸ್ವಯಂ ದೃಢೀಕರಣ ಪತ್ರವನ್ನು ಮಾ. 25ರೊಳಗಾಗಿ ಸಂಬಂಧಿಸಿದ ಸಹಕಾರ ಸಂಘ, ಬ್ಯಾಂಕಿಗೆ ಸಲ್ಲಿಸಬೇಕು. ಅರ್ಹ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!