ಕುಕ್ಕೆ ಸುಬ್ರಮಣ್ಯ ದೇವಳದಲ್ಲಿ ಯಾವುದೇ ಹರಕೆ ಸೇವೆಗಳು ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಭಕ್ತರಿಗೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲು ಕೂಡಾ ಅವಕಾಶವಿರುವುದಿಲ್ಲ. ಆದರೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ತಿಳಿಸಿದ್ದಾರೆ.
ಮಂಗಳೂರು(ಮಾ.18): ಕೊರೋನಾ ವೈರಾಣು ಕಾಯಿಲೆಯ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿ ಆದೇಶದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ನಿತ್ಯೋತ್ಸವದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ನಿರ್ಬಂಧಿಸಲಾಗಿದೆ.
ಕೊರೋನಾ ಕಾಟಕ್ಕೆ ಸುಸ್ತಾದ ಜನ: ಊರಿಗೆ ಹೋಗಲು ಪ್ರಯಾಣಿಕರ ಹಿಂದೇಟು!
undefined
ದೇವಳದಲ್ಲಿ ಯಾವುದೇ ಹರಕೆ ಸೇವೆಗಳು ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಭಕ್ತರಿಗೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲು ಕೂಡಾ ಅವಕಾಶವಿರುವುದಿಲ್ಲ. ಆದರೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ತಿಳಿಸಿದ್ದಾರೆ.
ಸೇವೆಗಳಿಗೆ ಅವಕಾಶವಿಲ್ಲ:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ, ಶೇಷ ಸೇವೆ, ತುಲಾಭಾರ ಸೇರಿದಂತೆ ದೇವಳದಲ್ಲಿ ಭಕ್ತರು ನೆರವೇರಿಸುತ್ತಿದ್ದ ಎಲ್ಲಾ ಹರಿಕೆ ಸೇವೆಗಳನ್ನು ಬುಧವಾರದಿಂದ ಮುಂದಿನ ಆದೇಶದ ತನಕ ನಿರ್ಬಂಧಿಸಲಾಗಿದ್ದು, ಯಾವುದೇ ಸೇವೆಗಳನ್ನು ನಡೆಸಲು ಭಕ್ತರಿಗೆ ಅವಕಾಶವಿಲ್ಲ.ಅಲ್ಲದೆ ಭಕ್ತರು ನೆರವೇರಿಸುತ್ತಿದ್ದ ಸೇವಾ ಉತ್ಸವಗಳಿಗೂ ಕೂಡಾ ಅವಕಾಶವಿಲ್ಲ.
ಬೆಂಗಳೂರಲ್ಲಿಯೂ ಹಕ್ಕಿ ಜ್ವರದ ಭೀತಿ : ಕಾಗೆಗಳ ಸರಣಿ ಸಾವು
ಮುಂದಿನ ಆದೇಶದ ತನಕ ಭಕ್ತರು ನಡೆಸುವ ಹರಿಕೆ ಸೇವೆ ಮತ್ತು ಉತ್ಸವಗಳನ್ನು ರದ್ದುಗೊಳಿಸಲಾಗಿದೆ. ದೇವರಿಗೆ ನಿತ್ಯಪೂಜೆ ಮತ್ತು ನಿತ್ಯೋತ್ಸವಗಳು ಎಂದಿನಂತೆ ನಡೆಯಲಿದ್ದು, ನಿತ್ಯೋತ್ಸವಗಳಲ್ಲಿ ಸಾರ್ವಜನಿಕ ಭಕ್ತರ ಭಾಗವಹಿಸುವಿಕೆ ನಿರ್ಬಂಧಿಸಲಾಗಿದೆ. ಕೇವಲ ದೇವಳದ ಸಿಬ್ಬಂದಿ ಮಾತ್ರ ಭಾಗವಹಿಸಬಹುದು.