ಚಿಕ್ಕಮಗಳೂರು: ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ‌ದಿಂದ ಸರಣಿ ಅಪಘಾತ, ವಿದ್ಯಾರ್ಥಿಗಳಿಗೆ ಗಾಯ

By Girish Goudar  |  First Published Jan 22, 2023, 1:00 AM IST

ಟಾಟಾ ಏಸ್, ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ  ಚಿಕ್ಕಮಗಳೂರು ತಾಲೂಕಿನ ಕಣಿವೆ-ದಾಸರಹಳ್ಳಿ ಬಳಿ ನಡೆದಿದೆ. 


ಚಿಕ್ಕಮಗಳೂರು(ಜ.22): ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ‌ದಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕಣಿವೆ-ದಾಸರಹಳ್ಳಿ ಬಳಿ ಘಟನೆ ನಿನ್ನೆ(ಶನಿವಾರ) ನಡೆದಿದೆ. ಟಾಟಾ ಏಸ್, ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ನಡೆದಿದೆ. ಇದರಿಂದಾಗಿ ಟಾಟಾ ಏಸ್ ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿವೆ. 

ವಿದ್ಯಾರ್ಥಿಗಳು ಚಿಕ್ಕಮಗಳೂರು ಹಬ್ಬ ಮುಗಿಸಿ ವಾಪಸ್ ತೆರಳುತ್ತಿದ್ದರು ಅಂತ ತಿಳಿದು ಬಂದಿದೆ. ಟಾಟಾ ಏಸ್ ವಾಹನದಲ್ಲಿದ್ದ ಮಕ್ಕಳು ಚಿಕ್ಕಮಗಳೂರು ಹಬ್ಬಕ್ಕೆ ಬಂದಿದ್ದರು. ವಿದ್ಯಾರ್ಥಿಗಳೆಲ್ಲರೂ ಸಖರಾಯಪಟ್ಟಣದ ಜಿಗಣೆಹಳ್ಳಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

Tap to resize

Latest Videos

ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

ಗಾಯಗೊಂಡ ವಿದ್ಯಾರ್ಥಿಗಳನನ್ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!