Chikkodi: 25 ಸರ್ಕಾರಿ ಶಾಲೆಗಳಿಗೆ ಡಿಜಿಟಲ್‌ ಬೋರ್ಡ್‌ ಕೊಟ್ಟ ಖಾಸಗಿ ಶಾಲೆ ಮಾಲೀಕ: ಮಾದರಿ ಕಾರ್ಯ

By Sathish Kumar KHFirst Published Jan 21, 2023, 10:43 PM IST
Highlights

ತನ್ನದೇ ಶಾಲೆ ಇದ್ದರೂ ಸಹ ಸರ್ಕಾರಿ ಶಾಲೆಗೆ ಲಕ್ಷಂತಾರ ರೂ ಖರ್ಚು...
ನಾಲ್ಕು ವಲಯಗಳ 25 ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ!
ಬೆಲ್ಲದರ ಬೆಲ್ಲದಂತ ಕೆಲಸಕ್ಕೆ ಸರ್ಕಾರಿ ಶಾಲಾ ಶಿಕ್ಷಕರ ಮೆಚ್ಚುಗೆ!

ವರದಿ- ಮುಷ್ತಾಕ್ ಪೀರ್ಜಾದೆ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಚಿಕ್ಕೋಡಿ (ಜ.21): ಶಿಕ್ಷಣ ಎನ್ನುವುದು ಈಗಿಗ ಬ್ಯುಸಿನೆಸ್ ಆಗಿದೆ ಎನ್ನುವುದು ಗೌಪ್ಯ ವಿಚಾರವೇನೂ ಅಲ್ಲ. ಲಕ್ಷ ಲಕ್ಷ ಫೀಸು, ಡೊನೆಷನ್ನೂ, ಎಲ್ಲವೂ ಈಗ ಪೋಷಕರ ಜೇಬು ಖಾಲಿ ಮಾಡ್ತಿವೆ. ಇಲ್ಲೊಬ್ಬ ವ್ಯಕ್ತಿ ತನ್ನದೇ ಸಿಬಿಎಸ್ಸಿ ಶಾಲೆ ಇದ್ದರೂ ಸಹ ತನ್ನ ಅಕ್ಕ ಪಕ್ಕದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸೌಲಭ್ಯಗಳು ಸಿಗ್ಲಿ ಅಂತ 25 ಸ್ಮಾರ್ಟ್ ಬೋರ್ಡ್ ನೀಡಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈ ಜೋಡಿಸಿದ್ದಾರೆ.‌ಅರೇ ಇದ್ಯಾರಪ್ಪ ತನ್ನದೇ ಶಾಲೆ ಇದ್ದರೂ ಸಹ ಸರ್ಕಾರಿ ಶಾಲೆಯ ಬಗ್ಗೆ ‌ಇಷ್ಟು ಕಾಳಜಿ ಮಾಡ್ತಿರೋ ಅಂತೀರಾ ಈ ಸ್ಟೋರಿ ನೋಡಿ..

ವೇದಿಕೆಯ ಮೇಲೆ ಆಸೀನರಾಗಿರೋ ಗಣ್ಯರು, ಸಾಲಾಗಿ ನಿಲ್ಲಿಸಲಾಗಿರುವ ಸ್ಮಾರ್ಟ್ ಬೋರ್ಡ್ಗಳು, ಸರ್ಕಾರಿ ಶಾಲಾ ಶಿಕ್ಷಕರಿಗೆ ಅದೇ ಬೋರ್ಡ್ ಹಂಚಿಕೆ ಮಾಡ್ತಿರೋ ಗಣ್ಯರು. ಈ ದೃಶ್ಯಗಳು ಕಂಡು ಬಂದಿದ್ದು ‌ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ. ಇದೇ ಓಂ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷರಾಗಿರುವ ಮಹೇಶ್ ಬೆಲ್ಲದ ಅವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ 25 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ ಮಾಡಿದ್ದಾರೆ.

ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನ: ಮಕ್ಕಳಿಗೆ ಅತ್ತ ಪಾಠವೂ ಇಲ್ಲ ಇತ್ತ ಬಿಸಿ ಊಟವೂ ಇಲ್ಲ!

ಓಂ ಶಿಕ್ಷಣ ಸಂಸ್ಥೆಯಲ್ಲಿ 3-ಡಿ ಸೌಲಭ್ಯದ ಡಿಜಿಟಲ್ ಕೊಠಡಿ: ಚಿಕ್ಕೋಡಿ, ರಾಯಭಾಗ, ಹುಕ್ಕೇರಿ ಹಾಗೂ ಜಮಖಂಡಿ ವಲಯಗಳ ಸುಮಾರು 25 ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ವಿತರಣೆ ಮಾಡಲಾಗಿದೆ. ಜತೆಗೆ ಕಾರ್ಯಕ್ರಮದಲ್ಲಿ ಹಳ್ಳಿ ವಿಚಾರಗಳ ಜಾಗತೀಕರಣ ಎಂಬ ವಿಷಯದ ಕುರಿತು ಚರ್ಚೆ ನಡೆಸಿ ಹಳ್ಳಿಗಳ, ಆಚಾರ,ವಿಚಾರ, ಸಂಪ್ರದಾಯ, ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಸಹ ಓಂ ಶಿಕ್ಷಣ ಸಂಸ್ಥೆಯಿಂದೆ ನಡೆದಿದೆ. ಇನ್ನು ಓಂ ಶಿಕ್ಷಣ ಸಂಸ್ಥೆಯಲ್ಲಿ ತ್ರೀ ಡಿ ಸೌಲಭ್ಯ ಉಳ್ಳ ಡಿಜಿಟಲ್ ಕೊಠಡಿಯನ್ನು ಇದೆ ಸಮಯದಲ್ಲಿ ನಿಡಸೋಶಿ ಸಿದ್ಧಸಂಸ್ಥಾನ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರು ಉದ್ಘಾಟಿಸಿದರು. 

ಒಟ್ಟಿನಲ್ಲಿ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೂ ಸಹ ಸಿಗಲಿ ಎನ್ನುವ ಉದ್ದೇಶ ಹೊಂದಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈ ಜೋಡಿಸಿರಿಸುವ ಮಹೇಶ್ ಬೆಲ್ಲದರ ಕಾರ್ಯ ಎಲ್ಲರಿಗೂ ಅನುಕರಣೀಯ.

click me!