Chikkaballapura: ಅರ್ಧ ವರ್ಷ ಮುಗಿದರೂ ಸಿಗದ ಸೈಕಲ್‌ ಭಾಗ್ಯ

By Kannadaprabha News  |  First Published Oct 24, 2022, 5:27 AM IST

ರಾಜ್ಯದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ 8ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಇನ್ನೂ ಸೈಕಲ್‌ ವಿತರಣೆ ಕಡೆ ಗಮನ ಹರಿಸದಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.


  ಚಿಕ್ಕಬಳ್ಳಾಪುರ (ಅ.24):  ರಾಜ್ಯದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ 8ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಇನ್ನೂ ಸೈಕಲ್‌ ವಿತರಣೆ ಕಡೆ ಗಮನ ಹರಿಸದಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

ರಾಜ್ಯದಲ್ಲಿ(Rural)  ಭಾಗದ(Bus)  ಸಂಪರ್ಕ ಸೌಲಭ್ಯ ಇರದ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ 8ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸುವ ಮಹತ್ವಕಾಂಕ್ಷಿ ಕಾರ್ಯಕ್ರಮ ಶುರುವಾದರೂ ಆರಂಭದಲ್ಲಿ ಮಾತ್ರ ಸಮರ್ಪಕವಾಗಿ ನಡೆದ ಕಾರ್ಯಕ್ರಮ ಇತ್ತೀಚಿನ ವರ್ಷಗಳಲ್ಲಿ ಸೈಕಲ್‌ ವಿತರಣೆ ಸರ್ಕಾರ ಬೇಕಾಬಿಟ್ಟಿಸಮಯಕ್ಕೆ ನೀಡುತ್ತಿರುವುದು ಎದ್ದು ಕಾಣುತ್ತಿದೆ.

Tap to resize

Latest Videos

ಜಿಲ್ಲೆಯಲ್ಲಿ 7,242 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಪ್ರತಿ ವರ್ಷ ಉಚಿತ ಸೈಕಲ್‌ ವಿತರಣೆ ಮಾಡಿಕೊಂಡು ಬರುತ್ತಿದ್ದು ಈ ವರ್ಷ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು ಜಿಲ್ಲೆಯ 18,103 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಆ ಪೈಕಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 7,242 ವಿದ್ಯಾರ್ಥಿಗಳು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇದ್ದು ಈ ಮಕ್ಕಳಿಗೆ ಸೂಕ್ತ ಸಾರಿಗೆ ಸೌಕರ್ಯ ಇಲ್ಲದೇ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ಇದ್ದು. ಕೆಲವೊಂದು ಶಾಲೆಗಳಿಗೆ ಕಿ.ಮೀ ಗಟ್ಟಲೇ ಕಾಲ್ನಡಿಗೆಯಲ್ಲಿ ತೆರಳಬೇಕಾದ ದುಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಇದುವರೆಗೂ ವಿದ್ಯಾರ್ಥಿಗಳಿಗೆ ಸೈಕಲ್‌ ಭಾಗ್ಯ ಕಲ್ಪಿಸದೇ ಇರುವುದು ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಸರ್ಕಾರ ಕನಿಷ್ಠ ಪಕ್ಷ ಈ ವರ್ಷದ ಕೊನೆಯೊಳಗೆ ಆದರೂ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆಗೆ ಕ್ರಮ ವಹಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಶೂ, ಸಾಕ್ಸ್‌ ಈಗ ಸರಬರಾಜು

ರಾಜ್ಯ ಸರ್ಕಾರ ಸದ್ಯಕ್ಕೆ ಅಂತೂ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್‌ ವಿತರಣೆ ಯಾವಾಗ ಮಾಡುತ್ತದೆಂಬ ಸ್ಪಷ್ಟತೆ ಇಲ್ಲ. ಆದರೆ ದಸರಾ ರಜೆಗಳನ್ನು ಮುಗಿಸಿ ಶಾಲೆಗಳಿಗೆ ಬರುತ್ತಿರುವ 1 ರಿಂದ 10ನೇ ತರಗತಿ ಓದುತ್ತಿರುವ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬರೋಬ್ಬರಿ 76,643 ಮಕ್ಕಳಿಗೆ ಶೂ ಸಾಕ್ಸ್‌ಗಳನ್ನು ಈಗಷ್ಟೇ ಗುತ್ತಿಗೆದಾರರಿಂದ ಸರಬರಾಜು ಆಗಿದ್ದು ವಿತರಣೆ ಕಾರ್ಯ ಶಾಲಾ ಹಂತದಲ್ಲಿ ಭರದಿಂದ ಸಾಗಿದೆ. ಆದರೆ ಸೈಕಲ್‌ ವಿತರಣೆ ವಿಳಂಬ ಆಗುತ್ತಿರುವುದ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಅರ್ಧ ವರ್ಷ ಮುಗಿದರೂ ಸಿಗದ ಸೈಕಲ್‌ ಭಾಗ್ಯ

ಆಹಾರ ಡೆಲಿವರಿ ಮಾಡುವ ಬಾಲಕ

ಕೃತಜ್ಞತೆ ಹಾಗೂ ಮೆಚ್ಚುಗೆಯ ಸಾಕಷ್ಟು ಲೇಖನಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೀವು ಓದಿರಬಹುದು. ಹಾಗೂ, ಈ ಸ್ಫೂರ್ತಿದಾಯಕ ಸ್ಟೋರಿಗಳು ಒಳನೋಟವುಳ್ಳ ಮತ್ತು ವಾಸ್ತವದ ಬಗ್ಗೆ ಪ್ರತಿಬಿಂಬಿಸುತ್ತದೆ. ಆಹಾರ ಡೆಲಿವರಿ ಮಾಡುವ ಬ್ರ್ಯಾಂಡ್‌ಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೋ ಹಾಗೂ ಇತರೆ ಕಂಪನಿಗಳ ಡೆಲಿವರಿ ಪಾರ್ಟ್‌ನರ್‌ಗಳ ಬಗ್ಗೆಯೂ ಸಾಕಷ್ಟು ಸ್ಟೋರಿಗಳು ಹರಿದಾಡುತ್ತಿರುತ್ತವೆ. ಡೆಲಿವರಿ ಪಾರ್ಟ್‌ನರ್‌ಗಳ ಕಷ್ಟ, ಗ್ರಾಹಕರ ಮನೆಗೆ ಆಹಾರ ಡೆಲಿವರಿ ಮಾಡುವ ಪಾರ್ಟ್‌ನರ್‌ಗಳ ಸ್ಥಿತಿ, ಅವರಿಗೆ ಮೆಚ್ಚುಗೆ, ಬೈಗುಳ, ಅವರ ಮೇಲೆ ಹಲ್ಲೆ ಇಂತಹ ಹಲವು ಕಥೆಗಳನ್ನು ನೀವು ವೆಬ್‌ಸೈಟ್‌ಗಳಲ್ಲಿ, ಲಿಂಕ್ಡ್‌ಇನ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. 

ಟ್ವಿಟ್ಟರ್‌ ಮೂಲಕ ಇಂತಹ ಸ್ಟೋರಿಯೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ 7 ವರ್ಷದ ಶಾಲಾ ಬಾಲಕ ಜೊಮ್ಯಾಟೋ ಡೆಲಿವರಿ ಏಜೆಂಟ್‌ ಆಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಟ್ವೀಟ್‌ ಮಾಡಲಾಗಿದೆ. ಬಾಲಕನ ತಂದೆಗೆ ಅಪಘಾತವಾದ ಬಳಿಕ ಮಗ ಡೆಲಿವರಿ ಪಾರ್ಟ್‌ನರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ರಾಹುಲ್‌ ಮಿತ್ತಲ್‌ ಎಂಬ ಟ್ವಿಟ್ಟರ್‌ ಬಳಕೆದಾರ, ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಶಾಲಾ ಬಾಲಕ ತಾತ್ಕಾಲಿಕವಾಗಿ ಫುಡ್‌ ಡೆಲಿವರಿ ಬಾಯ್‌ ಆಗಿದ್ದಾನೆ ಎಂದು ಅವರು ಹೇಳಿದ್ದಾರೆ. ಆತ ಬೆಳಗ್ಗೆ ಶಾಲೆಗೆ ಹೋಗುತ್ತಾನೆ, ನಂತರ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಾನೆ. ಅಪ್ಪನಿಗೆ ಅಪಘಾತವಾದ್ದರಿಂದ ಕುಟುಂಬವನ್ನು ಸಾಕಲು ಬಾಲಕ ಈ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಆನ್‌ಲೈನ್‌ ಫುಡ್ ಆರ್ಡರ್‌ ಮಾಡ್ತೀರಾ? ಎಷ್ಟೊಂದು ಬೆಲೆ ವ್ಯತ್ಯಾಸ ನೋಡಿ

ಟ್ವೀಟ್‌ವೊಂದರಲ್ಲಿ ವಿಡಿಯೋವನ್ನೂ ಹಂಚಿಕೊಳ್ಳಲಾಗಿದ್ದು, ರಾಹುಲ್‌ ಎಂಬ ಗ್ರಾಹಕ ಹಾಗೂ ಬಾಲಕನ ನಡುವಿನ ಮಾತುಕತೆಯನ್ನು ಇಲ್ಲಿ ಶೇರ್‌ ಮಾಡಲಾಗಿದೆ. ಜೊಮ್ಯಾಟೋ ಗ್ರಾಹಕರ ಮನೆ - ಮನೆಗೆ ಸೈಕಲ್‌ ಮೂಲಕ ಬಾಲಕ ಆಹಾರ ಡೆಲಿವರಿ ಮಾಡುತ್ತಿದ್ದಾನೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ತನ್ನ ತಂದೆಯ ಪ್ರೊಫೈಲ್‌ಗೆ ಬರುತ್ತಿರುವ ಬುಕ್ಕಿಂಗ್‌ಗಳನ್ನು ನಾನು ಈಗ ನೋಡಿಕೊಳ್ಳುತ್ತಿರುವುದಾಗಿಯೂ ಬಾಲಕ ಹೇಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

ಆ ವಿಡಿಯೋದಿಂದ ಆ ಬಾಲಕನ ಹೆಸರನ್ನು ಎಡಿಟ್‌ ಮಾಡಲಾಗಿದ್ದು, ತೆಗೆದು ಹಾಕಿದ್ದರೂ, ಆ ಬಾಲಕನ ಹೆಸರು ಹಾಗೂ ವಯಸ್ಸನ್ನು ರಾಹುಲ್‌ ಮಿತ್ತಲ್‌ ಎಂಬ ಬಳಕೆದಾರ ಹೇಳಿದ್ದಾನೆ. ಅಲ್ಲದೆ, ಆ ಬಾಲಕನ ತಂದೆ ಇನ್ನೂ ಬದುಕಿದ್ದು, ಆದರೆ ಹೊರಗೆ ಓಡಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದುಬಂದಿದೆ. 

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಶಾಲಾ ಬಾಲಕ ಡೆಲಿವರಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಇನ್ನು, ಈ ಟ್ವೀಟ್‌ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ವೈವಿಧ್ಯಮಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಹಲವು ನೆಟ್ಟಿಗರು ಶಾಲಾ ಬಾಲಕ ಡೆಲಿವರಿ ಬಾಯ್‌ ಆಗಿರುವುದನನ್ನು ವಿರೋಧಿಸಿದ್ದು, ಇದು ಬಾಲ ಕಾರ್ಮಿಕ ಪದ್ಧತಿಯಲ್ಲವೇ ಎಂಬ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನು ಹಲವರು ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಿರುವ ಬಾಲಕನ ಬೆಂಬಲ ಸೂಚಕವನ್ನು ಇನ್ನೂ ಹಲವು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ಆ ಬಾಲಕನ ತಂದೆ ಬೇಗ ಚೇತರಿಸಿಕೊಳ್ಳಲಿ ಎಂದು ಕೆಲವರು ಟ್ವೀಟ್‌ಗಳನ್ನು ಮಾಡಿದ್ದಾರೆ

ಜಿಲ್ಲೆಯ 7,242 ಮಕ್ಕಳಿಗೆ ಸೈಕಲ್‌ ವಿತರಿಸಬೇಕಿದೆ

ಸರ್ಕಾರದ ವಿಳಂಬ ನೀತಿಗೆ ಪೋಷಕರ ಕಿಡಿ

click me!