ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು

Published : Nov 05, 2018, 01:19 PM ISTUpdated : Nov 05, 2018, 01:48 PM IST
ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು

ಸಾರಾಂಶ

ತುಂಗಾನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು | ಪ್ರವಾಸಕ್ಕೆಂದು ಬಂದಿದ್ದ ವೇಳೆ ದುರ್ಘಟನೆ | 

ಚಿಕ್ಕಮಗಳೂರು (ನ. 05): ದೇವಾಲಯದ ಶೌಚಗೃಹದಲ್ಲಿ ಸ್ನಾನಕ್ಕೆ 20 ರೂಪಾಯಿ ಕೇಳಿದರೆಂದು ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಸಕ್ಕೆ ಬಂದಿದ್ದ 9 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ. 

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ ತರುಣ್ ಗೌಡ ಮೃತ ವಿದ್ಯಾರ್ಥಿ. ಶಾಲೆಯಿಂದ ಸುಮಾರು 60 ವಿದ್ಯಾರ್ಥಿಗಳು ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮಕ್ಕಳು ಸ್ನಾನಕ್ಕೆ ಬಂದಾಗ ಶೌಚಗೃಹದವರು ಒಬ್ಬರಿಗೆ 20 ರೂಪಾಯಿ ಕೇಳಿದ್ದಾರೆ.  ಹಣ ಜಾಸ್ತಿಯಾಯಿತೆಂದು ಎಲ್ಲರೂ ತುಂಗಾ ನದಿಗೆ ಸ್ನಾನಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. 

ಸ್ಥಳಿಯರು ಹಾಗೂ ಪೊಲೀಸರ ಸಹಕಾರದಿಂದ ಸುಮಾರು ಒಂದು ಗಂಟೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನ ನೀರಿನಿಂದ ಮೇಲೆತ್ತಿದ್ದಾರೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಹಿಂದೂ ಮಹಿಳೆಯ ಜೊತೆಗೆ ಕಾಂಗ್ರೆಸ್ ನಾಯಕ ಷರೀಫ್ ರಾತ್ರಿ ಕಹಾನಿ: ಬೆಡ್‌ರೂಮ್‌ನಲ್ಲಿ ಗಂಡನಿಗೆ ಸಿಕ್ಕಿಬಿದ್ದ!
ದತ್ತಪೀಠದಲ್ಲಿ ಹೊಸ ವಿವಾದ, ಸುಪ್ರೀಂ ಆದೇಶ ಉಲ್ಲಂಘಿಸಿ ಗುಹೆಯೊಳಗೆ ಹೊಸ ಆಚರಣೆ, ಮುಜಾವರ್‌ಗಳು ವಿವಾಹಿತರಾಗಿರಬಾರದು!