ಮೈಸೂರಿನ ಹಳೆ ಕೆಸರೆಗೆ ಕಸ ತಂದು ಸುರಿಯುತ್ತಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ

By Kannadaprabha NewsFirst Published Jan 30, 2024, 12:47 PM IST
Highlights

ಸೂಯೇಜ್ ಫಾರಂನಲ್ಲಿರುವ ಕಸದ ರಾಶಿಯನ್ನು ಹಳೆ ಕೆಸರೆ ಕಸ ವಿಲೇವಾರಿ ಘಟಕಕ್ಕೆ ತಂದು ಸುರಿಯುತ್ತಿರುವುದನ್ನು ಖಂಡಿಸಿ ಕೆಸರೆ ಸುತ್ತಮುತ್ತಲಿನ ನಾಗರಿಕರು ಹಾಗೂ ಗ್ರಾಮಸ್ಥರು ಘಟಕದ ಬಳಿ ಸೋಮವಾರ ಪ್ರತಿಭಟಿಸಿದರು.

  ಮೈಸೂರು :  ಸೂಯೇಜ್ ಫಾರಂನಲ್ಲಿರುವ ಕಸದ ರಾಶಿಯನ್ನು ಹಳೆ ಕೆಸರೆ ಕಸ ವಿಲೇವಾರಿ ಘಟಕಕ್ಕೆ ತಂದು ಸುರಿಯುತ್ತಿರುವುದನ್ನು ಖಂಡಿಸಿ ಕೆಸರೆ ಸುತ್ತಮುತ್ತಲಿನ ನಾಗರಿಕರು ಹಾಗೂ ಗ್ರಾಮಸ್ಥರು ಘಟಕದ ಬಳಿ ಸೋಮವಾರ ಪ್ರತಿಭಟಿಸಿದರು.

ಮೈಸೂರು ಮಹಾನಗರ ಪಾಲಿಕೆಯು ಸೂಯೇಜ್ ಫಾರಂನಲ್ಲಿರುವ ಕಸದ ರಾಶಿ ಕರಗಿಸಲು ಹಳೆ ಕೆಸರೆ ಗ್ರಾಮದಲ್ಲಿರುವ ಪಾಲಿಕೆಯ ಸ್ಥಳದಲ್ಲಿ ಕಸ ಸುರಿಯುತ್ತಿದೆ. ಬೆಳೆಯುತ್ತಿರುವ ಮಹಾನಗರದಲ್ಲಿ ನಿತ್ಯ 200 ಟನ್ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ 100 ಟನ್ ಕಸವನ್ನು ಕೆಸರೆಗೆ ತಂದು ಹಾಕಲಾಗುತ್ತಿದೆ. ಇದರಿಂದ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ದುರ್ವಾಸನೆ ಹೆಚ್ಚಾಗುತ್ತಿದೆ ಎಂದು ಅವರು ಆರೋಪಿಸಿದರು.

Latest Videos

ಕಳೆದ 20 ವರ್ಷಗಳಿಂದಲೂ ಘಟಕ ಸ್ಥಳಾಂತರ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆ ಮಲತಾಯಿ ಧೋರಣೆ ಅನುಸರಿಸಿ ಗ್ರಾಮಸ್ಥರ ಸ್ವಾಸ್ಥ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಘಟಕದ ಸುತ್ತಮುತ್ತ ಆಸ್ಪತ್ರೆ, ಆರ್ ಟಿಒ ಕಚೇರಿ, ಶಾಲಾ ಕಾಲೇಜುಗಳು ಇರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ದುರ್ವಾಸನೆಯೊಂದ ಆರೋಗ್ಯ ಹದಗೆಡುತ್ತಿದೆ. ಅಲ್ಲದೆ ಕಸ ವಿಲೇವಾರಿ ಘಟಕವನ್ನು ಮೂಲ ನಿವಾಸಿಗಳ ಸಮ್ಮತಿ ಇಲ್ಲದೆ ಸ್ಥಾಪನೆ ಮಾಡಲಾಗಿದೆ. ಹೀಗಾಗಿ, ಕೂಡಲೇ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷ ಸಿ. ಮಾದೇಶ್, ಸದಸ್ಯರಾದ ಜ್ಯೋತಿ, ಲಲಿತಮ್ಮ, ಆಶಾ, ಅರ್ಪಿತಾ, ಮುಖಂಡ ರೇವಣ್ಣ ಮೊದಲಾದವರು ಇದ್ದರು.

ಕೆರೆ ಪಕ್ಕದಲ್ಲೇ ರಾಶಿ ಕಸ

ಚಿತ್ರದುರ್ಗ(ಡಿ.10):  ಕೆರೆ ಹೂಳೆತ್ತುವುದು ಎಷ್ಟು ಮುಖ್ಯವೋ ಅ ಕಸವನ್ನು ಬೇರೆಡೆ ಹಾಕುವುದು ಅಷ್ಟೇ ಪ್ರಮುಖವಾಗಿರುತ್ತದೆ. ಆದ್ರೆ ಇಲ್ಲೊಂದು ಕೆರೆ ಪಕ್ಕದಲ್ಲೇ ರಾಶಿ ರಾಶಿ ಕಸ ಸುರಿದು ರಸ್ತೆಯಲ್ಲಿ ಓಡಾಡುವ ಜನರಿಗೆ ನಿತ್ಯ ಕಿರಿಕಿರಿ ಉಂಟು ಮಾಡ್ತಿರುವ ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ...., ಹೀಗೆ ಕೆಟ್ಟ ದುರ್ವಾಸನೆಯನ್ನು ತಾಳಲಾರದೇ ಮೂಗು ಮುಚ್ಚಿಕೊಂಡೇ ಓಡಾಡ್ತಿರುವ ಜನರು. ಮತ್ತೊಂದೆಡೆ ರಾಶಿ ರಾಶಿ ಕಸದ ಮಧ್ಯೆಯೇ ಸತ್ತು ಬಿದ್ದಿರೋ ಹಂದಿಗಳ ಕೆಟ್ಟ ದುಸ್ಥಿತಿ ಇರುವ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಕೂದಲೆಳೆ ಅಂತರದಲ್ಲಿ ಇರುವ ಮಲ್ಲಾಪುರ ಗ್ರಾಮದ ಬಳಿ. 

ಇಡೀ ನಗರದ ಜನರು ಬಳಸುವ ನೀರೆಲ್ಲಾ ಬಂದು ಸೇರುವ ಜಾಗ ಈ ಮಲ್ಲಾಪುರ ಕೆರೆ. ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ-೧೩ ರಸ್ತೆ ಹಾದು ಹೋಗಿದ್ದು, ಇಡೀ ನಗರದ ಜನರು ಉಪಯೋಗಿಸುವ ರಾಶಿ ರಾಶಿ ಕಸವನ್ನು ಹಾಗೂ ಕೆರೆಯಿಂದ ಊಳೆತ್ತಿರುವ ಕಸವನ್ನು ರಸ್ತೆಯ ಪಕ್ಕದಲ್ಲೇ ಹಾಕಿರೋದ್ರಿಂದ ನಿತ್ಯ ಓಡಾಡುವವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗ್ತಿದೆ. ಅಲ್ಲದೇ ಎರಡು ಹಂದಿಗಳು ಸತ್ತು ಹೋಗಿದ್ರು ಅವುಗಳನ್ನು ಇಲ್ಲೇ‌ ಬಿಸಾಡಿ‌ ಹೋಗಿರೋದು ವಾಹನ ಸವಾರರಿಗೆ ಸಾಕಷ್ಟು ಹಿಂಸೆ ಆಗ್ತಿದೆ. ಮಲ್ಲಾಪುರ ಕೆರೆ ಹತ್ತಿರ ಬರ್ತಿದ್ದಂತೆ ಮೂಗು ಮುಚ್ಚಿಕೊಂಡು ಉಸಿರು ಬಿಗಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ ಎಂದು ಸ್ಥಳೀಯರಾದ ಕಾಂತರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ: ಇಬ್ಬರು ಮಕ್ಕಳನ್ನು ತೊಟ್ಟಿಯಲ್ಲಿ ಮುಳುಗಿಸಿ ಕೊಂದು ತಾಯಿಯೂ ಆತ್ಮಹತ್ಯೆ

ನಿತ್ಯ ಈ‌ ರಸ್ತೆಯಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಈ ರೀತಿ ಕಸವನ್ನೆಲ್ಲಾ ಒಂದೆಡೆ ತಂದು ಹಾಕೋದ್ರಿಂದ‌ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಈ ಭಾಗದಲ್ಲಿ ಓಡಾಡುವ ಜನರಿಗೆ ಇದೊಂದೆ ಮಾರ್ಗ ಇರುವುದು, ಅದ್ಯಾವ ಪುಣ್ಯತ್ಮರು ಈ‌ ರೀತಿ ಕಸದ ರಾಶಿಯನ್ನು ತಂದು ಸುರಿದು ಹೋಗಿದ್ದಾರೋ ಗೊತ್ತಿಲ್ಲ. ಆದ್ರೆ ಇದ್ರಿಂದ ನಿತ್ಯ ಸಂಚರಿಸುವ ನಮಗೆ ಸಾಕಷ್ಟು ತೊಂದರೆ ಆಗ್ತಿದೆ. ಇಷ್ಟೆಲ್ಲಾ ಸಮಸ್ಯೆ ಕಣ್ಮುಂದೆ ಇದ್ರು ನಗರಸಭೆ ಅಧಿಕಾರಿಗಳಿ ಇತ್ತ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಜನರ ಆರೋಗ್ಯದಲ್ಲಿ ಏರುಪೇರು ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ರಾಶಿ ಕಸವನ್ನು ತೆರವುಗೊಳಿಸಬೇಕಿದೆ ಎಂದು ರೈತ ಮುಖಂಡ ರಂಗೇಗೌಡ ಆಗ್ರಹಿಸಿದರು.

click me!