ಏ.  1  ರಿಂದ ಕೊರೋನಾ ತಡೆಗೆ ಟಫ್ ರೂಲ್ಸ್.. ಏನೆಲ್ಲ ಹೊಸ ನಿಯಮ-ದಂಡ?

By Suvarna NewsFirst Published Mar 31, 2021, 7:19 PM IST
Highlights

 ರಾಜ್ಯದಲ್ಲಿ ಕೊರೋನಾ ಹೊಸ ರೂಲ್ಸ್ ಜಾರಿ/ ಟ್ರೇಸ್ ಟೆಸ್ಟಿಂಗ್ ಟ್ರೇಟ್‌ಮೆಂಟ್‌ಗೆ ಸಂಬಂಧ ಪಟ್ಟಂತೆ ರೂಲ್ಸ್/ ಏಪ್ರಿಲ್ 30 ರವೆಗೂ ರೂಲ್ಸ್/ ಕೊರೋನಾ ಟೆಸ್ಟಿಂಗ್‌ನ್ನು ಹೆಚ್ಚಿಸಬೇಕು/ ಪ್ರಕರಣಗಳು ಹೆಚ್ಚಾಗಿರುವ ತಾಲೂಕು, ವಾರ್ಡ್‌ಗಳಲ್ಲಿ RTPCR ಟೆಸ್ಟ್/ ಸಿಟಿವ್ ಇರುವ ಪ್ರಕರಣಗಳನ್ನು ಕೂಡಲೇ ಪತ್ತೆ ಹಚ್ಚಬೇಕು

ಬೆಂಗಳೂರು(ಮಾ.  31)  ಏ. 1 ರಿಂದ ರಾಜ್ಯದಲ್ಲಿ ಕೊರೋನಾ ಹೊಸ ರೂಲ್ಸ್ ಜಾರಿಯಾಗಲಿದೆ. ಟ್ರೇಸ್ ಟೆಸ್ಟಿಂಗ್ ಟ್ರೇಟ್‌ಮೆಂಟ್‌ಗೆ ಸಂಬಂಧ ಪಟ್ಟಂತೆ ರೂಲ್ಸ್ ಮಾಡಲಾಗಿದೆ.   ನಾಳೆಯಿಂದ ಏಪ್ರಿಲ್ 30 ರವೆಗೂ ರೂಲ್ಸ್ ಜಾರಿಯಲ್ಲಿ ಇರುತ್ತದೆ. ಪರಿಸ್ಥಿತಿ ನೋಡಿಕೊಂಡು ಮುಂದಿನದ್ದನ್ನು ತೀರ್ಮಾನ ಮಾಡಲಾಗುತ್ತದೆ.

ಕೊರೋನಾ ಟೆಸ್ಟಿಂಗ್‌ನ್ನು ಹೆಚ್ಚಿಸಬೇಕು. ಪ್ರಕರಣಗಳು ಹೆಚ್ಚಾಗಿರುವ ತಾಲೂಕು, ವಾರ್ಡ್‌ಗಳಲ್ಲಿ RTPCR ಟೆಸ್ಟ್ ಕಡ್ಡಾಯ ಮಾಡಬೇಲು. ಪಾಸಿಟಿವ್ ಇರುವ ಪ್ರಕರಣಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಸೋಂಕಿತರನ್ನು ಐಸೋಲೇಷನ್ ಮಾಡಬೇಕು, ಸೋಂಕಿತರ ಸಂಪರ್ಕಿತರನ್ನು ಗುರುತಿಸಬೇಕು. ಅವರನ್ನು ಪ್ರತ್ಯೇಕವಾಗಿ ಐಸೋಲೇಷನ್ ಮಾಡಿ ಕಂಟೈನ್‌ಮೆಂಟ್ ಝೋನ್ ಮಾಡಲು ಸೂಚನೆ ನೀಡಲಾಗಿದೆ.

ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೊಟ್ಟ ಮಹತ್ವದ ಸೂಚನೆಗಳು

ಸೋಂಕಿತರು ವಾಸವಿರೋ ಸ್ಥಳವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಬೇಕು. ಕಂಟೈನ್‌ಮೆಂಟ್ ಝೋನ್‌ಗಳ ಬಗ್ಗೆ ಆಯಾ ಜಿಲ್ಲೆಗಳ ಡಿಸಿ, ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯ ಆಯುಕ್ತರು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.  ಕಂಟೈನ್‌ಮೆಂಟ್ ಝೋನ್‌ಗಳಿಗೆ ಸ್ಟ್ರಿಕ್ಟ್ ರೂಲ್ಸ್ ಸಹ ಹಾಕಲಾಗಿದೆ.

1. ಕಂಟೈನ್‌ಮೆಂಟ್ ಝೋನ್‌ಗಳಿಗೆ ಅಗತ್ಯ ಚಟುವಟಿಕೆಗೆ ಮಾತ್ರ ಅವಕಾಶ

2. ಅಗತ್ಯ ಸೇವೆ, ಸರಕು ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶ

3.ಕಂಟೈನ್‌ಮೆಂಟ್ ಝೋನ್‌ನಿಂದ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ 

4. ಕಂಟೈನ್‌ಮೆಂಟ್ ಝೋನ್‌ಗೆ ಕಣ್ಗಾವಲು ತಂಡ ರಚನೆ , ಮನೆ ಮನೆ ಪರಿಶೀಲನೆ ಮಾಡಲು ಸೂಚನೆ

5. ನಿಗದಿತ ಪ್ರೋಟೋಕಾಲ್ ಪ್ರಕಾರ ಕೊರೋನಾ ಪರೀಕ್ಷೆ ಮಾಡಬೇಕು 

6. ಕೋರೋನಾ ಸೋಂಕಿತನ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು

7. 14 ದಿನಗಳ ಕಾಲ ನಿಗಾ ವಹಿಸಬೇಕು ಶೇ.80ರಷ್ಟು ಕಾಂಟಾಕ್ಟ್ ಗಳನ್ನು 72 ಗಂಟೆಯೊಳಗೆ ಪತ್ತೆ ಹಚ್ಚಬೇಕು

8. ILI ಮತ್ತು SARI ಪ್ರಕರಣಗಳನ್ನು ವಲಯದ ಕ್ಲಿನಿಕ್‌ಗಳ ಅಥವಾ ಫೀವರ್ ಕ್ಲಿನಿಕ್‌ಗಳ ಮೂಲಕ ನಿಗಾ ವಹಿಸಿಬೇಕು 

9.  ಕಂಟೈನ್‌ಮೆಂಟ್ ಝೋನ್‌ನಲ್ಲಿ ರೂಲ್ಸ್ ಫಾಲೋ ಮಾಡದೆ ಹೋದರೆ ಆಯಾ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು

ಇದರ ಜತೆಗೆ ಸೋಂಕಿತರಿಗೆ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಆರೋಗ್ಯ ಕಾರ್ಯಕರ್ತರು ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು. ಬಿಬಿಎಂಪಿ ಹಾಗೂ ಜಿಲ್ಲಾ ಪ್ರಾಧಿಕಾರಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸ್‌ ಮಾಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸದೆ ಇದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 250 ರೂ ದಂಡ ಹಾಗೂ ಇನ್ನಿತರ ಪ್ರದೇಶದಲ್ಲಿ 100 ರೂ ದಂಡ ವಿಧಿಸಲಾಗುವುದು ಎಂದು ತಿಳಿಸಸಲಾಗಿದೆ.

ವಾರಾಂತ್ಯದ ಸಂತೆಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಜನ ಸಂದಣಿಯನ್ನು ತಡೆಯಬೇಕು. ವಿಮಾನ, ರೈಲು ಸೇವೆ ಮತ್ತು ಮೆಟ್ರೋ ರೈಲು ಸಂಚಾರದ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.  ಇನ್ನೊಂದು ಕಡೆ ಕೊರೋನಾ ಅಬ್ಬರವೂ ಮುಂದುವರಿದಿದ್ದು  ಬೆಂಗಳೂರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇಂದು ಒಂದೇ ದಿನ 18 ಸಾವುಗಳು ಕೊರೋನಾದಿಂದ ಆಗಿವೆ. 

 

click me!