Chikkamagaluru ನಗರಸಭೆ ಕಿರುಕುಳಕ್ಕೆ ಬೇಸತ್ತು ತನ್ನ ಗಾಡಿಗೆ ಬೆಂಕಿ ಇಟ್ಟ ವ್ಯಾಪಾರಿ!

Published : May 17, 2022, 05:47 PM ISTUpdated : May 17, 2022, 07:41 PM IST
Chikkamagaluru ನಗರಸಭೆ ಕಿರುಕುಳಕ್ಕೆ ಬೇಸತ್ತು ತನ್ನ ಗಾಡಿಗೆ ಬೆಂಕಿ ಇಟ್ಟ ವ್ಯಾಪಾರಿ!

ಸಾರಾಂಶ

ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ನಗರಸಭೆ ಅಧಿಕಾರಿಗಳ ಎದುರು ಗಾಡಿಗೆ ಬೆಂಕಿ ಹಚ್ಚಿದ ವ್ಯಾಪಾರಿ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಘಟನೆ ಚಿಕ್ಕಮಗಳೂರು ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.17): ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಗಾಡಿಯನ್ನು ನಗರಸಭೆ ಸಿಬ್ಬಂದಿ ತೆರವು ಮಾಡುವ ವೇಳೆ ವ್ಯಾಪಾರಿಯೇ ತನ್ನ ಗಾಡಿಗೆ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ  ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. 

ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿ ಗಾಡಿಗೆ ಬೆಂಕಿ ಹಚ್ಚಿದ್ದಾರೆ. ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಬೀದಿಯಲ್ಲಿ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು 200-300 ರೂ. ದುಡಿದು ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಆದರೆ ನಗರಸಭೆ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರ ನಡೆಸಬಾರದು ಎಂದು ವ್ಯಾಪಾರಿಗಳಿಗೆ ಸೂಚಿಸಿದ್ದರು.

"

TUNGABHADRA DAM ಬೇಸಿಗೆಯಲ್ಲೂ ಭತ್ತದೆ ವಿಶೇಷತೆ ಉಳಿಸಿಕೊಂಡ ತುಂಗಭದ್ರಾ

ಈ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದವರಲ್ಲಿ ಬಡ ವ್ಯಾಪಾರಿಯೊಬ್ಬ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಂದು ಈ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ನಗರಸಭೆ ಸಿಬ್ಬಂದಿ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಬಡ ವ್ಯಾಪಾರಿಯು, ನಮ್ಮ ಹೊಟ್ಟೆ ಮೇಲೆ ಹೊಡಿಯುತಿದ್ದೀರಾ, ನಾನೇ ಬೆಂಕಿ ಹಾಕ್ತೀನಿ ಎಂದು ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ನಗರಸಭೆ ವಿರುದ್ದ ಸಾರ್ವನಿಜಕರ ಆಕ್ರೋಶ: ಬಡವ್ಯಾಪಾರಿಗಳನ್ನೇ ಟಾಗೇಟ್ ಮಾಡಲಾಗಿದೆ ಎಂದು ಸಾರ್ವಜನಿಕರು ನಗರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನ್ನ ಅಳಲು ತೋಡಿಕೊಂಡಿರುವ ಬಡವ್ಯಾಪಾರಿಯು, ನಗರಸಭೆ ಅವರು 500 ವರೆಗೆ ಹಣ ಕೇಳುತ್ತಾರೆ. ಅದನ್ನು ಎಲ್ಲಿಂದ ತಂದು ಕೊಡ್ಲಿ. ಫೈನಾನ್ಸ್ಗೆ ಹಣ ಕಟ್ಟುವುದೇ ಕಷ್ಟವಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಇವರಿಗೆ ಹೇಗೆ ನೀಡುವುದು ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

Mining Effect ಬಂಟ್ವಾಳ ಕಾರಿಂಜೇಶ್ವರನಿಗೆ ಆಪತ್ತು, ಉರುಳಿಬಿದ್ದ ಬೃಹತ್ ಬಂಡೆ!

ನಗರಸಭೆ ನಡೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿ ಕೃಷ್ಣಪ್ಪ ನವರವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ನಗರಸಭೆ ವರ್ತನೆಗೆ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಏಕಾಏಕಿ ನಗರಸಭೆ ಈ ರೀತಿ ವರ್ತಿಸಿದರೆ ನಮ್ಮ ಪಾಡೇನು ನಗರಸಭೆಯ ಈ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ. ನಮ್ಮ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತೀರಿ ಎಂದು ತಳ್ಳುವ ಗಾಡಿ ಮಾಲೀಕಕರು ಅಸಮಾಧನ ಹೊರಹಾಕಿದ್ದಾರೆ.

ನಗರಸಭೆ ಅಧ್ಯಕ್ಷರಿಂದ ಸ್ಪಷ್ಪನೆ: ರಸ್ತೆಯಲ್ಲಿ ಅಡ್ಡಾದಿಡ್ಡಿ ಗಾಡಿ ನಿಲ್ಲಿಸಿ ವ್ಯಾಪಾರ ಮಾಡದಂತೆ ಸೂಚಿಸಲಾಗಿದೆ.ಆದ್ರೂ ತೆರವು ಗೊಳಿಸಿಲ್ಲ. ತಳ್ಳುವ ಗಾಡಿಯ ಮಾಲೀಕರಿಗೆ ಯಾರೋ ಪ್ರಚೋದನೆ ನೀಡಿದ ಪರಿಣಾಮ ಅವರ ಗಾಡಿಗೆ ಅವರೇ ಬೆಂಕಿ ಹಾಕಿಕೊಂಡಿರುವುದು ವಿಪರ್ಯಾಸ. ವಿರೋಧ ಪಕ್ಷದವರು ಅಮಾಯಕರನ್ನು ಎತ್ತಿಕಟ್ಟಿ  ನಗರಸಭೆ ಹೆಸರು ಹಾಳು ಮಾಡುವ ಕುತಂತ್ರ  ಇದಾಗಿದೆ ಎಂದು ಆರೋಪಿಸಿದ್ದಾರೆ.

Udupi ಒಂದೂವರೆ ವರ್ಷದ ಹಿಂದೆ ಹೂತ ಪಂಜಾಬ್ ವ್ಯಕ್ತಿಯ ಶವ ಹೊರಕ್ಕೆ!

PREV
Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!