Tungabhadra Dam ಬೇಸಿಗೆಯಲ್ಲೂ ಭತ್ತದೆ ವಿಶೇಷತೆ ಉಳಿಸಿಕೊಂಡ ತುಂಗಭದ್ರಾ

By Suvarna News  |  First Published May 17, 2022, 4:54 PM IST

ತುಂಗಭದ್ರಾ ಜಲಾಶಯದಲ್ಲಿ ಇದೀಗ ಮೇ ತಿಂಗಳ ಬೇಸಿಗೆ ಸಮಯದಲ್ಲಿಯೂ ಸಹ ನೀರು ಬತ್ತದೆ ಹಾಗೆಯೇ ಇರುವುದು ವಿಶೇಷ. 


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ.17) : ಸಾಮಾಬ್ಯವಾಗಿ ಬೇಸಿಗೆ ಕಾಲದಲ್ಲಿ ಜಲಾಶಯಗಳು, ಹಳ್ಳಕೊಳ್ಳಗಳು ಬತ್ತಿ ಬರಿದಾಗುತ್ತವೆ. ಆದರೆ ಇಲ್ಲೊಂದು ಜಲಾಶಯ ಮಾತ್ರ ಬೇಸಿಗೆಯಲ್ಲಿಯೂ ಬತ್ತದೆ ತನ್ನ ಒಡಲಿನಲ್ಲಿ ಇನ್ನೂ ಸಹ ನೀರು ಉಳಿಸಿಕೊಂಡಿದೆ.‌ ಅಷ್ಟಕ್ಕೂ ಬೇಸಿಗೆಯಲ್ಲಿ ಬತ್ತದ ಜಲಾಶಯ ಯಾವುದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

Tap to resize

Latest Videos

ಬೇಸಿಗೆಯಲ್ಲಿ ಬತ್ತದ ಜಲಾಶಯ ಯಾವುದು?
ತುಂಗಾ ಪಾನ, ಗಂಗಾ ಸ್ನಾನ ಎನ್ನುವ ಮಾತಿದೆ. ಆ ಮಾತಿನಂತೆ ತುಂಗಭದ್ರಾ ನದಿಯ ನೀರು ಕುಡಿಯಲು ಅಷ್ಟೊಂದು ಶುದ್ಧವಾಗಿರುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಳಿ ಹುಟ್ಟುವ ಈ ನದಿ ಶಿವಮೊಗ್ಗ, ದಾವಣಗೆರೆ, ವಿಜಯನಗರದ ಮೂಲಕ ಹರಿದು ಬರುವ ಈ ನದಿಗೆ ಅಡ್ಡಲಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಇಂತಹ ತುಂಗಭದ್ರಾ ಜಲಾಶಯದಲ್ಲಿ (Tungabhadra Dam  ) ಇದೀಗ ಮೇ ತಿಂಗಳ ಬೇಸಿಗೆ ಸಮಯದಲ್ಲಿಯೂ ಸಹ ನೀರು ಬತ್ತದೆ ಹಾಗೆಯೇ ಇರುವುದು ವಿಶೇಷ.

VIJAYAPURA ಅಪರೂಪದ ಘಟನೆಗೆ ಸಾಕ್ಷಿಯಾದ ಆ ಅಪಘಾತ!

ಜಲಾಶಯದಲ್ಲಿರುವ ನೀರಿನ ಪ್ರಮಾಣ ಎಷ್ಟು?
ಕೊಪ್ಪಳ-ರಾಯಚೂರು-ಬಳ್ಳಾರಿ- ವಿಜಯನಗರ ಈ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಈ ಬಿರು ಬೇಸಿಗೆಯಲ್ಲಿಯೂ ಸಹ ನೀರು ಇದೆ.‌ ಸದ್ಯ ಜಲಾಶಯದಲ್ಲಿ ಬೇಸಿಗೆಯಲ್ಲೇ ಡ್ಯಾಂನಲ್ಲಿ 12.881 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಒಂದು ತಿಂಗಳಲ್ಲಿ ಉಂಟಾದ ಅಕಾಲಿಕ ಮಳೆಗೆ ಜಲಾಶಯಕ್ಕೆ 7 ಟಿಎಂಸಿ ನೀರು ಹರಿದು ಬಂದಿದೆ.‌ ಜೊತೆಗೆ ಪೂರ್ವ ಮುಂಗಾರು ಮಳೆಯಿಂದಲೂ ಸಹ ತುಂಗಭದ್ರಾ  ಡ್ಯಾಂಗೆ ಒಳ ಹರಿವು ಆರಂಭವಾಗಿದೆ.

ಡ್ಯಾಂ ಗೆ ಒಳಹರಿವುನಿಂದ ಸಂತಸದಲ್ಲಿ ರೈತರು
ಇನ್ನು ಡ್ಯಾಂ ಗೆ ಬೇಸಿಗೆ ಸಮಯದಲ್ಲಿಯೂ ಸಹ ಒಳಹರಿವು ಆರಂಭವಾಗಿರುವುದರಿಂದ ಸಹಜವಾಗಿಯೇ ರೈತ ಸಮೂಹ ಖುಷಿ ಯಲ್ಲಿದೆ. ಇದೇ ತುಂಗಭದ್ರಾ ಜಲಾಶಯದ ನೀರನ್ನೇ ನೆಚ್ಚಿಕೊಂಡು ಕೊಪ್ಪಳ- ಬಳ್ಳಾರಿ-ವಿಜಯನಗರ- ರಾಯಚೂರು ಜಿಲ್ಲೆಗಳ ರೈತರು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಹೀಗಾಗಿ ಜಲಾಶಯಕ್ಕೆ ಒಳಹರಿವು ಇರುವುದರಿಂದ  ಭತ್ತ ಬೆಳೆಯುವ ರೈತರಿಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡಿದೆ. ಈಗಾಗಲೇ ರೈತರು ಭತ್ತ ನಾಟಿಗೆ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲು ಆರಂಭ ಮಾಡಿಕೊಳ್ಳುತ್ತಿದ್ದಾರೆ.

Mining Effect ಬಂಟ್ವಾಳ ಕಾರಿಂಜೇಶ್ವರನಿಗೆ ಆಪತ್ತು, ಉರುಳಿಬಿದ್ದ ಬೃಹತ್ ಬಂಡೆ!

ಇನ್ನು ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಕಳೆದ ಏಪ್ರಿಲ್ 26 ರಿಂದ ಆರಂಭವಾಗಿರೋ ಒಳ ಹರಿವು ಆರಂಭವಾಗಿದ್ದು, ಇದು ದಾಖಲೆ ಎನ್ನಲಾಗಿದೆ.  ಐತಿಹಾಸಿಕ ಎನ್ನುವಂತೆ ನಡು ಬೇಸಿಗೆಯಲ್ಲೂ ಟಿಬಿ ಡ್ಯಾಂಗೆ ಒಳಹರಿವು ಆರಂಭವಾಗಿರುವುದು ರೈತ ಸಮೂಹಕ್ಕೆ ಖುಷಿಯೋ ಖುಷಿ. 

ಸದ್ಯ ತುಂಗಭದ್ರಾ ಡ್ಯಾಂ ಶೇಕಡಾ 12 ರಷ್ಟು ಭರ್ತಿಯಾಗಿದ್ದು, ಕಳೆದ ವರ್ಷದಲ್ಲಿ ಜುಲೈ ತಿಂಗಳಿನಲ್ಲಿ ಜಲಾಶಯ ಭರ್ತಿ ಆಗಿತ್ತು. ಈ ವರ್ಷವೂ ಸಹ ಅದಕ್ಕೂ ಪೂರ್ವದಲ್ಲಿಯೇ ಜಲಾಶಯ ಭರ್ತಿಯಾಗುವ ಎಲ್ಲ ಲಕ್ಷಣಗಳು ಇವೆ. ಆದಷ್ಟೂ ಬೇಗನೇ ಜಲಾಶಯ ತುಂಬಲಿ ಎನ್ನುವುದೇ ಎಲ್ಲರ ಆಶಯ.

Udupi ಒಂದೂವರೆ ವರ್ಷದ ಹಿಂದೆ ಹೂತ ಪಂಜಾಬ್ ವ್ಯಕ್ತಿಯ ಶವ ಹೊರಕ್ಕೆ!

click me!