ಕೆಎಸ್ಆರ್‌ಟಿ ಬಸ್‌ಗಳಲ್ಲಿ ಓವರ್ ಲೋಡ್ ಸಮಸ್ಯೆ, ಸರ್ಕಾರಿ ಬಸ್ಸುಗಳಲ್ಲಿ ಇರುವ ಮಹಿಳೆಯರು ಖಾಸಗಿ ಬಸ್ಸುಗಳ ಮೆಟ್ಟಿಲು ತುಳೀತಿಲ್ಲ. ಗ್ಯಾರಂಟಿ ಸರ್ಕಾರದ ಪಂಚ ಯೋಜನೆಗಳಲ್ಲಿ ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ ಖಾಸಗಿ ಬಸ್‌ಗಳಿಗೆ ಟ್ರಬಲ್ ಮೇಲೆ ಟ್ರಬಲ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.04): ಕೆಎಸ್ಆರ್‌ಟಿ ಬಸ್‌ಗಳಲ್ಲಿ ಓವರ್ ಲೋಡ್ ಸಮಸ್ಯೆ, ಸರ್ಕಾರಿ ಬಸ್ಸುಗಳಲ್ಲಿ ಇರುವ ಮಹಿಳೆಯರು ಖಾಸಗಿ ಬಸ್ಸುಗಳ ಮೆಟ್ಟಿಲು ತುಳೀತಿಲ್ಲ. ಗ್ಯಾರಂಟಿ ಸರ್ಕಾರದ ಪಂಚ ಯೋಜನೆಗಳಲ್ಲಿ ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ ಖಾಸಗಿ ಬಸ್‌ಗಳಿಗೆ ಟ್ರಬಲ್ ಮೇಲೆ ಟ್ರಬಲ್. ಶಕ್ತಿ ಯೋಜನೆ ಎಫೆಕ್ಟ್‌ನಿಂದ ಖಾಸಗಿ ಬಸ್‌ಗಳ ಚಕ್ರಕ್ಕೆ ಚೈತನ್ಯವಿಲ್ಲದಂತಾಗಿದೆ. ಸದ್ಯಕ್ಕೆ 200 ಕುಟುಂಬಗಳು ಬೀದಿಗೆ ಬಿದ್ದಿವೆ. ಬಸ್ಸಿಗೆ ಪ್ರಯಾಣಿಕರೂ ಇಲ್ಲ. ಡೀಸೆಲ್ ಗೆ ಕಾಸು ಇಲ್ಲ. ಶಕ್ತಿ ಯೋಜನೆಯಿಂದ ಅಶಕ್ತರಾಗಿರೋ ಖಾಸಗಿ ಬಸ್‌ಗಳ ಸಂಚಾರ ಕಾಫಿನಾಡಿನಲ್ಲಿ ಸ್ಥಗಿತವಾಗಿದೆ.
undefined
ಮಲೆನಾಡಿನ ಸಂಪರ್ಕ ಸೇತುವೆ ಆಗಿದ್ದ ಖಾಸಗಿ ಬಸ್‌ಗಳು: ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಓಡಾಡಲು ಶಕ್ತಿ ಬಂದಿರೋ ರಾಜ್ಯದ ಮಹಿಳೆಯರು ಸರ್ಕಾರಿ ಬಸ್‌ಗಳ ಡೋರ್‌ಗಳನ್ನೇ ಮುರಿಯುತ್ತಿದ್ದಾರೆ. ಆದ್ರೆ, ಕಾಫಿನಾಡಲ್ಲಿ ಪ್ರೈವೇಟ್ ಬಸ್ ಮೆಟ್ಲು ಹತ್ತೋಕು ಜನರಿಲ್ಲ. ಅದರ ಪರಿಣಾಮ ಘೋರವಾಗಿದೆ. ಕಾಫಿನಾಡಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸರದಿ ಸಾಲಲ್ಲಿ ಬಸ್‌ಗಳು ನಿಂತಿವೆ. ಚಾಲಕರು-ನಿರ್ವಾಹಕರು ಬಸ್ ಓಡ್ಸಲ್ಲ ಅಂತಲ್ಲ. ಬಸ್ ಓಡ್ಸುದ್ರು ಹತ್ತೋಕೆ ಜನ ಇಲ್ಲ ಎನ್ನುವ ಕಾರಣಕ್ಕೆ ಜಿಲ್ಲಾ ಕೇಂದ್ರದ ಖಾಸಗಿ ಬಸ್ ನಿಲ್ದಾಣದಲ್ಲಿ 400 ಖಾಸಗಿ ಬಸ್‌ಗಳಲ್ಲಿ 15 ಬಸ್‌ಗಳ ಸಂಚಾರ ಇದೀಗ ಸ್ಥಗಿತವಾಗಿದೆ. ಶಕ್ತಿ ಯೋಜನೆಯಿಂದ ಮಲೆನಾಡಿನ ಜನರು ಸರ್ಕಾರಿ ಬಸ್‌ಗಳ ಮೊರೆ ಹೋಗಿದ್ದಾರೆ.
Mysuru: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 135 ಮೊಬೈಲ್‌ಗಳ ಹಸ್ತಾಂತರ!
ಹಳ್ಳಿಯಿಂದ ಹೆದ್ದಾರಿವರೆಗೆ ಆಟೋ-ಬೈಕ್‌ಗಳಲ್ಲಿ ಬಂದು ಸರ್ಕಾರಿ ಬಸ್ ಹತ್ತುತ್ತಿದ್ದಾರೆ. ಪ್ರೈವೇಟ್ ಬಸ್ ಹೋದ್ರು ಹತ್ತೋರಿಲ್ಲ. 3-4-5 ಜನ ಹಾಕ್ಕೊಂಡ್ ಗುಡ್ಡಗಾಡು, ನಕ್ಸಲ್ ಬಾದಿತ ಪ್ರದೇಶದಲ್ಲಿ ಪ್ರೈವೇಟ್ ಬಸ್ ಓಡ್ಸುದ್ರೆ ಡೀಸೆಲ್ ಹಾಕ್ಸೋಕು ಆಗಲ್ಲ ಅಂತ ಶಕ್ತಿ ಯೋಜನೆ ಆರಂಭವಾದ ಎರಡೇ ತಿಂಗಳಿಗೆ 400ರಲ್ಲಿ 15 ಪ್ರೈವೇಟ್ ಬಸ್ ಕಂಪ್ಲೀಟಾಗಿ ನಿಂತಿವೆ. ಹಲವು ದಶಕಗಳಿಂದ ಮಲೆನಾಡ ಪ್ರಯಾಣಿಕರನ್ನೇ ನಂಬಿ ಬದುಕ್ತಿದ್ದ ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿಗಳು ಬಹುತೇಕ ಬೀದಿಗೆ ಬಿದ್ದಂತಾಗಿದೆ. ಹಾಗಾಗಿ, ಪ್ರೈವೇಟ್ ಬಸ್ ಮಾಲೀಕರು ಪ್ರೈವೇಟ್ ಬಸ್‌ಗಳಲ್ಲಿ ನಮಗೂ ಫ್ರೀ ಕೊಡಿ. ಇಲ್ಲವಾದರೆ, ಬಸ್ ನಿರ್ವಹಣೆ ಕಷ್ಟವಾಗಲಿದ್ದು, ಎಲ್ಲಾ ಬಸ್‌ಗಳನ್ನೂ ನಿಲ್ಲಿಸಬೇಕಾದ ಸ್ಥಿತಿ ಬರಲಿದೆ ಎಂದು ಅಸಹಾಯಕತೆ ಖಾಸಗಿ ಬಸ್ ಮಾಲೀಕರು ಹೊರಹಾಕಿದ್ದಾರೆ.
ಟ್ಯಾಕ್ಸ್ ಕಟ್ಟಲು ಹಣ ಎಲ್ಲಿಯಿಂದ ತರೋದು: ಬಸ್ ನಿರ್ವಹಣೆ, ಡೀಸೆಲ್, ಕಾರ್ಮಿಕರ ಸಂಬಳ ಒಂದೆಡೆಯಾದರೆ ಪ್ರೈವೇಟ್ ಬಸ್‍ನವರು ಮೂರು ತಿಂಗಳಿಗೊಮ್ಮೆ 48 ಸಾವಿರ ಟ್ಯಾಕ್ಸ್ ಕಟ್ಟಬೇಕು. ಎಲ್ಲಿಂದ ದುಡ್ಡು ತರೋದು ಎಂದು ಮಾಲೀಕರು ಕೂಡ ಅತಂತ್ರವಾಗಿದ್ದಾರೆ. ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದ್ರು ಸ್ಪಂದಿಸದ ಸರ್ಕಾರದ ನಿರ್ಧಾರಕ್ಕೆ ರೋಸಿ ಹೋಗಿರೋ ಪ್ರೈವೇಟ್ ಬಸ್ ಮಾಲೀಕರು ಎರಡೇ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ದಾಖಲಾತಿಗಳನ್ನು ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದ್ದಾರೆ. ಮುಂದಿನ ತಿಂಗಳು ಇನ್ನು 60ಕ್ಕೂ ಹೆಚ್ಚು ಬಸ್ಸುಗಳ ಖಾಸಗಿ ದಾಖಲೆಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಸೆಲ್ಫಿ ತೆಗೆದುಕೊಳ್ಳುವಾಗ ಹಾರಂಗಿ ನದಿಗೆ ಬಿದ್ದು ಬೆಂಗಳೂರಿನ ಟ್ಯಾಟೂ ಕಲಾವಿದ ಸಾವು
ಬಸ್‌ಗಳನ್ನೇ ನಂಬಿದ್ದ ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ. ನಾವು 20 ವರ್ಷಗಳಿಂದ ಬಸ್‍ಗಳನ್ನೇ ನಂಬಿ ಬದುಕ್ದೋರು. ನಮಗೆ ಬೇರೆ ಕೆಲಸ ಬರಲ್ಲ. ಈಗ ಬೇರೆ ಯಾವ ಕೆಲಸ ಮಾಡೋದು. ಮಾಲೀಕರು ಕೂಡ ಹಣವನ್ನ ಎಲ್ಲಿಂದ ತರ್ತಾರೆ ಅಂತಿರೋ ಕಾರ್ಮಿಕರ ಬದುಕು ಅಡ್ಡಕತ್ತರಿಗೆ ಸಿಕ್ಕಂತಾಗಿದೆ. ಒಟ್ಟಾರೆ, ಒಂದೆಡೆ ಸರ್ಕಾರದ ಶಕ್ತಿ ಯೋಜನೆಯಿಂದ ಅದೆಷ್ಟೋ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗ್ತಿದೆ. ಆದ್ರೆ, ಅದನ್ನೇ ನಂಬಿ ಬದುಕ್ತಿದ್ದ ಖಾಸಗಿ ಬಸ್ ಮಾಲೀಕರು, ಕಾರ್ಮಿಕರು ಬೀದಿಗೆ ಬೀಳುತ್ತಿರುವುದು ದುರಂತ. ಒಂದು ವೇಳೆ, ಸರ್ಕಾರ ಖಾಸಗಿ ಬಸ್ಸಿನ ಉಳಿವಿಗೆ ದಾರಿ ತೋರಿಸದಿದ್ದರೆ ಎಲ್ಲಾ ಬಸ್ಗಳು ನಿಲ್ಲೋದು ಗ್ಯಾರಂಟಿ.