ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳಮುಖಿ ಆಯ್ಕೆ: ಗ್ರಾಮಸ್ಥರಿಂದ ಸನ್ಮಾನ

By Govindaraj S  |  First Published Aug 4, 2023, 5:48 PM IST

ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಮಂಗಳಮುಖಿ ಆಯ್ಕೆಯಾಗಿದ್ದಾರೆ. ಅಂಜಿನಮ್ಮ ಚೋರನೂರು ಗ್ರಾಮ ಪಂಚಾಯ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಅಧ್ಯಕ್ಷೆಯಾಗಿದ್ದಾರೆ. ಇನ್ನು ಅಧ್ಯಕ್ಷೆ ಅಂಜಿನಮ್ಮಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ. 


ಬಳ್ಳಾರಿ (ಆ.04): ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಮಂಗಳಮುಖಿ ಆಯ್ಕೆಯಾಗಿದ್ದಾರೆ. ಅಂಜಿನಮ್ಮ ಚೋರನೂರು ಗ್ರಾಮ ಪಂಚಾಯ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಅಧ್ಯಕ್ಷೆಯಾಗಿದ್ದಾರೆ. ಇನ್ನು ಅಧ್ಯಕ್ಷೆ ಅಂಜಿನಮ್ಮಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದಾರೆ. 

ಪಾಲಡ್ಕ ಗ್ರಾಮ ಪಂಚಾಯಿತಿ ಗ್ರಾಮಸಭೆ: ಪಾಲಡ್ಕ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಪಂಚಾಯಿತಿ ಅಧ್ಯಕ್ಷ ದಿನೇಶ್‌ ಕಾಂಗ್ಲಾಯಿ ಅವರ ಅಧ್ಯಕ್ಷತೆಯಲ್ಲಿ ಕಡಂದಲೆ ಪಲ್ಕೆ ಗಣೇಶ ದರ್ಶನ ಸಭಾಭವನದಲ್ಲಿ ನಡೆಯಿತು. ಕಡಂದಲೆ ವಿದ್ಯಾಗಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 83 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ಶೌಚಾಲಯವು ತೀರಾ ಹದಗೆಟ್ಟಿದ್ದು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. 

Latest Videos

undefined

ಜೆಜೆಎಂ ಕಾಮಗಾರಿಯಲ್ಲಿ 80 ಲಕ್ಷ ಅಕ್ರಮ: ಹೋರಾಟಕ್ಕಿಳಿದ ಬಿಜೆಪಿ ಮುಖಂಡ ಮಲ್ಲಪ್ಪ‌ ಹಳಕಟ್ಟಿ!

ತಕ್ಷಣ ಶೌಚಾಲಯವನ್ನು ನಿರ್ಮಿಸಬೇಕು ಎಂದು ಗ್ರಾಪಂ ಸದಸ್ಯೆ ಸುನೀತಾ ಸುಚರಿತ ಶೆಟ್ಟಿಅವರು ಶಿಕ್ಷಣ ಇಲಾಖೆಯ ಅಧಿಕಾರಿ ಮಹೇಶ್ವರಿ ಅವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಿಆರ್‌ಪಿ, ಶಿಕ್ಷಣ ಇಲಾಖೆಯಲ್ಲಿ ವರ್ಷಕ್ಕೆ 30,000 ಮಾತ್ರ ಅನುದಾನ ಬರುತ್ತಿದ್ದು ಇದು ಇತರ ಕೆಲಸಗಳಿಗೆ ವಿನಿಯೋಗವಾಗುತ್ತಿದೆ. ಪಂಚಾಯಿತಿಯಿಂದ ನಿರ್ಮಿಸುವುದಾದರೆ ಒಳ್ಳೆಯದು, ಇಲ್ಲದಿದ್ದರೆ ಮುಂದಿನ ಅನುದಾನ ಬಂದಾಗ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು ಎಂದರು.

ಮಕ್ಕಳಿಲ್ಲವೆಂದು ಮುಕ್ಕಡಪ್ಪು ಶಾಲೆಯನ್ನು ಮುಚ್ಚಲಾಗಿದ್ದು ಇಲ್ಲಿ ಅನೈತಿಕ ಚಟುವಟಿಕೆಗೆ ನಾವೇ ವ್ಯವಸ್ಥೆ ಮಾಡಿಕೊಟ್ಟಂತಾಗಿದೆ. ಆದ್ದರಿಂದ ತಕ್ಷಣ ಶಾಲೆಗೆ ಭದ್ರತಾ ವ್ಯವಸ್ಥೆಯನ್ನು ಮಾಡಿದರೆ ಉತ್ತಮ ಎಂದು ನಿವೃತ್ತ ಶಿಕ್ಷಕ ಟಿ.ಎನ್‌. ಕೆಂಬಾರೆ ಸಲಹೆ ನೀಡಿದರು. ನೀರಿನ ಬಿಲ್‌ ಕಟ್ಟಿರುವುವರಿಗೆ ಸರಿಯಾಗಿ ಮುಕ್ಕಾಲು ಗಂಟೆಯಾದರೂ ನೀರನ್ನು ಬಿಡಿ . ಐದು-ಹತ್ತು ನಿಮಿಷ ನೀರು ಬಿಟ್ಟರೆ ಏನು ಪ್ರಯೋಜನ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಕೆಲವರು ನೀರಿನ ಬಿಲ್‌ ಕಟ್ಟದೆ ಬಾಕಿ ಇಟ್ಟಿದ್ದಾರೆ. ಇದರಿಂದಾಗಿ ಪಂಪ್‌ ಆಪರೇಟರ್‌ಗಳಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ. 

ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!

ಆದ್ದರಿಂದ ಎಲ್ಲರೂ ನೀರಿನ ಬಿಲ್‌ನ್ನು ಸರಿಯಾಗಿ ಪಾವತಿಸುವಂತೆ ಪಿಡಿಒ ಹೇಳಿದರು. ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಯುಗೇಂದ್ರ ಇಲಾಖೆಯಲ್ಲಿ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ಸುಖೇಶ್‌ ಶೆಟ್ಟಿಮತ್ತು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

click me!