ಸರ್ಕಾರಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ್ರೇ ಮುಂದೆ ಯಾವುದೇ ಸಾಧನೆ ಮಾಡಲಾಗೋದಿಲ್ಲ ಎಂದು ಮುಗುಮುರಿಯೋರೇ ಹೆಚ್ಚು, ಅಂಥವರು ಈ ಸಾಧಕನ ಕತೆಯನ್ನೊಮ್ಮೆ ಕೇಳಬೇಕು, ಓದಬೇಕು. ಮೆರಿಟ್ ಸೀಟು ಪಡೆದು ಬಳ್ಳಾರಿ ವಿಮ್ಸ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ವ್ಯಕ್ತಿಯೊಬ್ಬ ಇವತ್ತು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಸೆ.25): ಸರ್ಕಾರಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ್ರೇ ಮುಂದೆ ಯಾವುದೇ ಸಾಧನೆ ಮಾಡಲಾಗೋದಿಲ್ಲ ಎಂದು ಮುಗುಮುರಿಯೋರೇ ಹೆಚ್ಚು, ಅಂಥವರು ಈ ಸಾಧಕನ ಕತೆಯನ್ನೊಮ್ಮೆ ಕೇಳಬೇಕು, ಓದಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕನ್ನಡ ಮಾಧ್ಯಮ ಪಿಯುಸಿವರೆಗೆ ಸರ್ಕಾರಿ ಕಾಲೇಜಿನಲ್ಲಿ ಓದಿದ್ರು. ಮೆರಿಟ್ ಸೀಟು ಪಡೆದು ಬಳ್ಳಾರಿ ವಿಮ್ಸ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ವ್ಯಕ್ತಿಯೊಬ್ಬ ಇವತ್ತು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ. ಸಾಧನೆಯುದ್ದಕ್ಕೂ ಕಲ್ಲು-ಮುಳ್ಳಿನ ಹಾದಿಯಲ್ಲಿ ನಡೆದ ವೀರ ಕನ್ನಡಿಗ ಡಾ.ಎಂ.ಶ್ರೀನಿವಾಸ ಅವರ ಸಾಧನೆ ಕತೆಯಿದು..
undefined
ದಿಲ್ಲಿ ಏಮ್ಸ್‌ಗೆ ಕನ್ನಡಿಗ, ಯಾದಗಿರಿಯ ಡಾ. ಶ್ರೀನಿವಾಸ್ ಮುಖ್ಯಸ್ಥ
ಉಪನ್ಯಾಸಕರ ನೆಚ್ಚಿನ ಶಿಷ್ಯ: ಮೂಲತಃ ಯಾದಗಿರಿಯವರಾದ್ರೂ ಡಾ. ಶ್ರೀನಿವಾಸ(Dr.Shrinivas) ಎಂಬಿಬಿಎಸ್(MBBS) ಕಲಿತಿದ್ದು ಬಳ್ಳಾರಿ(Ballari)ಯಲ್ಲಿ. ಅವರಿಗೆ ಎಂಬಿಬಿಎಸ್ ನಲ್ಲಿ ಪಾಠ ಮಾಡಿದ ಡಾ. ವಿದ್ಯಾಧರ ಕಿನ್ನಾಳ್(Dr.Vidyadhar Kinnal) ಹೇಳೋ ಮಾತು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. ಪ್ರತಿಷ್ಠಿತ ಶಾಲೆ-ಕಾಲೇಜಿನಲ್ಲಿ ಓದಿದರೆ ಮಾತ್ರ ಉನ್ನತ ಹುದ್ದೇಗೆರುತ್ತಾರೆ. ಅನ್ನೋದನ್ನ ಡಾ. ಶ್ರೀನಿವಾಸ ಅಲ್ಲಗಳೆದಿದ್ದಾರೆ. ಓದಬೇಕೆನ್ನುವ ಛಲ ಇದ್ದವರಿಗೆ ಸರ್ಕಾರಿ ಶಾಲೆಯಾದ್ರೇನು ಖಾಸಗಿ ಶಾಲೆಯಾದ್ರೇನು ಎನ್ನುವ ಮೂಲಕ
ಸಾಧನೆಯ ಶಿಖರವನ್ನೇರಿದ್ದಾರೆ. ಈ ಮೂಲಕ ಮತ್ತೊಬ್ಬರಿಗೆ ಮಾದರಿಯಾಗುವಂತೆ ಸಾಧಿಸಿ ತೋರಿಸಿದ್ದಾರೆ. ಇವರು ನಮ್ಮ ವಿಮ್ಸ್(VIMS)ನಲ್ಲಿ ಓದಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಅಂದ್ರೆ ಅದೊಂದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಸದ್ಯ ನಿವೃತ್ತಿಯಾಗಿರೋ ಡಾ. ಕಿನ್ನಾಳ.
ಎಂಬಿಬಿಎಸ್ ನಲ್ಲೂ ಟಾಪರ್:
ಯಾದಗಿರಿಯಲ್ಲಿ SSLC ಮತ್ತು PUC ಯಲ್ಲಿ ವ್ಯಾಸಂಗ ಮುಗಿದ ಬಳಿಕ ಬಳ್ಳಾರಿಗೆ ಬಂದಿದ್ದ ಶ್ರೀನಿವಾಸ, ಶಾಲಾ, ಕಾಲೇಜಿನಂತೆ ಎಂಬಿಬಿಎಸ್ ನಲ್ಲೂ ಟಾಪರ್ ಅಗಿದ್ರಂತೆ. ಗುರುಗಳು ಹೇಳಿದ ಪಾಠವನ್ನು ಶ್ರದ್ಧೆಯಿಂದ ಕೇಳುವುದು ಅದನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರುವುದರದಲ್ಲಿ ಡಾ. ಶ್ರೀನಿವಾಸ ಮೊದಲಿಗರಾಗಿದ್ರಂತೆ. 1984-85 ರ ಬ್ಯಾಚ್ ವಿದ್ಯಾರ್ಥಿಗಳ ಪೈಕಿ ಡಾ. ಶ್ರೀನಿವಾಸ ಮೊದಲಿಗರಾಗಿ ಉಳಿಯುತ್ತಾರೆ. ಡಾ. ಶ್ರೀನಿವಾಸ ಬಗ್ಗೆ ಮನಬಿಚ್ಚಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ. ವಿದ್ಯಾದರ್ ಕಿನ್ನಾಳ. ಓದಬೇಕೆನ್ನುವ ಛಲ, ಧೃಡ ನಂಬಿಕೆ, ಡಾ. ಶ್ರೀನಿವಾಸ ಅವರನ್ನು ಈ ಮಟ್ಟಕ್ಕೇರಿಸಿದೆ ಎನ್ನತ್ತಾರೆ.
Ballari; ವಿಮ್ಸ್ ನಿರ್ದೇಶಕರ ವಿರುದ್ಧ ಷಡ್ಯಂತ್ರದ ಆರೋಪ, ಕಾಂಗ್ರೆಸ್ ಪ್ರತಿಭಟನೆ
ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಲು ಒಮ್ಮೆ ವಿಮ್ಸ್ ಕರೆದಾಗ ತಾವು ಓದಿದ ಕಾಲೇಜು ಎಂದು ಹೆಮ್ಮೆಯಿಂದ ಬಂದಿದ್ರಂತೆ ಎಷ್ಟೇ ಉನ್ನತ ಸ್ಥಾನಕ್ಕೆರಿದ್ರೂ ತಾವು ಸಾಗಿ ಬಂದ ದಾರಿಯನ್ನು ಇಂದಿಗೂ ಮರೆತಿಲ್ಲ!