ಕೊರೋನಾ ಕಾಟ: ಅಂತ್ಯಕ್ರಿಯೆ ಬೇರೆಡೆ ಮಾಡಿ ಎಂದಿದ್ದಕ್ಕೆ ಕಲ್ಲು ತೂರಾಟ..!

Kannadaprabha News   | Asianet News
Published : Apr 23, 2020, 08:59 AM IST
ಕೊರೋನಾ ಕಾಟ: ಅಂತ್ಯಕ್ರಿಯೆ ಬೇರೆಡೆ ಮಾಡಿ ಎಂದಿದ್ದಕ್ಕೆ ಕಲ್ಲು ತೂರಾಟ..!

ಸಾರಾಂಶ

ಮತ್ತೊಂದು ಭಾಗದಲ್ಲಿ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದಕ್ಕೆ ಸ್ಮಶಾನಭೂಮಿ ದಾನ ನೀಡಿದ್ದ ಮನೆ ಮೇಲೆ ಕಲ್ಲು ತೂರಾಟ| ಬೆಳಗಾವಿ ತಾಲೂಕಿನ ಕವಳೆವಾಡಿ ಗ್ರಾಮದಲ್ಲಿ ನಡೆದ ಘಟನೆ| ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ| ಈ ಕೃತ್ಯದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ|

ಬೆಳಗಾವಿ(ಏ.23): ಕೊರೋನಾ ಹಿನ್ನೆಲೆಯಲ್ಲಿ ಮತ್ತೊಂದು ಭಾಗದಲ್ಲಿ ಅಂತ್ಯಕ್ರಿಯೆ ಮಾಡಿ ಎಂದು ಹೇಳಿದ್ದಕ್ಕೆ ಸ್ಮಶಾನಭೂಮಿ ದಾನ ನೀಡಿದ್ದ ವ್ಯಕ್ತಿಯೊಬ್ಬರ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ತಾಲೂಕಿನ ಕವಳೆವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮನೋಹರ ಮೋರೆ ಸ್ಮಶಾನದ ಇನ್ನೊಂದು ಭಾಗದಲ್ಲಿ ಶವ ಹೂಳುವಂತೆ ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಅಲ್ಲಿದ್ದವರು ಮನೋಹರ ಜತೆ ವಾಗ್ವಾದಕ್ಕೀಳಿದು ಮನೆಗೆ ಕಲ್ಲು ತೂರಿ ದಾಂಧಲೆ ನಡೆಸಿದ್ದಾರೆ. 

ಲಾಕ್‌ಡೌನ್‌ ಮಧ್ಯೆ ಪುಣೆಯಿಂದ ಮಗುವಿಗೆ ಮಾತ್ರೆ ತರಿಸಿಕೊಟ್ಟ ಸಚಿವ ಅಂಗಡಿ

ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕೃತ್ಯದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಇದುವರೆಗೆ ಪ್ರಕರಣ ದಾಖಲಾಗಿಲ್ಲ.


 

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!