ಹಾಲು ವಿತರಣೆಗೆ ತೆರಳುತ್ತಿದ್ದ ಕರ್ತವ್ಯನಿರತ ಪಾಲಿಕೆ ಸಿಬ್ಬಂದಿ ಮೇಲೆ ಪೊಲೀಸಪ್ಪನ ದರ್ಪ

Kannadaprabha News   | Asianet News
Published : Apr 23, 2020, 08:40 AM IST
ಹಾಲು ವಿತರಣೆಗೆ ತೆರಳುತ್ತಿದ್ದ ಕರ್ತವ್ಯನಿರತ ಪಾಲಿಕೆ ಸಿಬ್ಬಂದಿ ಮೇಲೆ ಪೊಲೀಸಪ್ಪನ ದರ್ಪ

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗೆ ಹಳೆ ಹುಬ್ಬಳ್ಳಿ ಠಾಣೆ ಪಿಎಸ್‌ಐ ಥಳಿತ| ಪಾಲಿಕೆ ಅಧಿಕಾರಿ ಬಿಪಿಎಲ್‌ ಕಾರ್ಡ್‌ದಾರರಿಗೆ ಹಾಲು ವಿತರಿಸಲು ಹೋಗುತ್ತಿದ್ದೇನೆ ಎಂದು ಹೇಳಿದರೂ ಲಾಠಿಯಿಂದ ಹಲ್ಲೆ ನಡೆಸಿದ ಪಿಎಸ್‌ಐ ಸುಖಾನಂದ|

ಹುಬ್ಬಳ್ಳಿ(ಏ.23): ಹಾಲು ವಿತರಣೆಗೆಂದು ತೆರಳಿದ್ದ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗೆ ಹಳೆ ಹುಬ್ಬಳ್ಳಿ ಠಾಣೆ ಪಿಎಸ್‌ಐ ಥಳಿಸಿದ ಘಟನೆ ಬೆಳಗ್ಗೆ ನಡೆದಿದ್ದು ಗಾಯಗೊಂಡಿರುವ ಅಧಿಕಾರಿಗಳಿಗೆ ಚಿಕಿತ್ಸೆ ಪಡೆದಿದ್ದಾರೆ.

ಘಟನೆ ಖಂಡಿಸಿ ಪಾಲಿಕೆಯ ನೌಕರರು ಪ್ರತಿಭಟಿಸಿದ್ದಾರೆ. ಪಾಲಿಕೆ ವಲಯ ಕಚೇರಿ-9ರ ಸಹಾಯಕ ಕಂದಾಯ ಅಧಿಕಾರಿ ಎನ್‌.ಕೆ.ಅಂಗಡಿ ಹೆಗ್ಗೇರಿ ಪ್ರದೇಶದಲ್ಲಿ ಹಾಲು ವಿತರಣೆಗೆ ತೆರಳುತ್ತಿದ್ದರು. 

ಕೊರೋನಾ ಪ್ರಕರಣ: ಪೊಲೀಸ್ ಠಾಣೆ ಕಲ್ಯಾಣ ಮಂಟಪಕ್ಕೆ ಶಿಫ್ಟ್

ಈ ವೇಳೆ ಪಿಎಸ್‌ಐ ಸುಖಾನಂದ ತಡೆದಿದ್ದಾರೆ. ಆಗ ಅಂಗಡಿ ತಾವು ಪಾಲಿಕೆ ಅಧಿಕಾರಿ ಬಿಪಿಎಲ್‌ ಕಾರ್ಡ್‌ದಾರರಿಗೆ ಹಾಲು ವಿತರಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೂ ಪಿಎಸ್‌ಐ ಸುಖಾನಂದ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪಿಎಸ್‌ಐ ವರ್ತನೆ ಖಂಡಿಸಿ ಮಹಾನಗರ ಪಾಲಿಕೆಯ ನೌಕರರು ಪ್ರತಿಭಟನೆ ನಡೆಸಿದ್ದಾರೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು