ಅನರ್ಹಗೊಂಡ ಕಾಂಗ್ರೆಸ್ ಶಾಸಕ ಸುಧಾಕರ್ ಯುಟರ್ನ್..!

By Web DeskFirst Published Aug 6, 2019, 6:06 PM IST
Highlights

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಚಿಕ್ಕಬಳ್ಳಾಪುರ MLA ಡಾ. ಸುಧಾಕರ್ ಅವರು ಇದೀಗ ಯುಟರ್ನ್ ಹೊಡೆದಿದ್ದಾರೆ. 

ಚಿಕ್ಕಬಳ್ಳಾಪುರ [ಆ.06]:  ಈ ಕ್ಷಣದವರೆಗೂ ನಾನು ಕಾಂಗ್ರೆಸ್ ನವನೇ‌ ಎಂದು ಅನರ್ಹ ಕಾಂಗ್ರೆಸ್ ಶಾಸಕ ಸುಧಾಕರ್ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಇಂದು [ಮಂಗಳವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಕ್ಷಣದವರೆಗೂ ನಾನು ಕಾಂಗ್ರೆಸ್ ನವನೇ‌.  ನಾನು ಕಾಂಗ್ರೆಸ್ ವಿರುದ್ಧ ಎಲ್ಲಾದರೂ ಮಾತನಾಡಿದ್ದೀನಾ' ಎಂದು ಹೇಳುವ ಮೂಲಕ ಯುಟರ್ನ್ ಹೊಡೆದಿದ್ದಾರೆ.

ರಾಜೀನಾಮೆ ನೀಡಿದ್ದೇಕೆ? ಡಾ. ಸುಧಾಕರ್ ಕೊಟ್ಟ ಕಾರಣ ಇಲ್ಲಿದೆ!

ಯಾವುದೇ ವಿಚಾರಣೆ ಮಾಡದೇ ಯಾಕೆ ಹೀಗೆ ಮಾಡಿದ್ರು ಎಂದು ಅರ್ಥ ಮಾಡಿಕೊಳದೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಇದನ್ನು ನಾನು ಸಿದ್ದರಾಮಯ್ಯ, ವೇಣುಗೋಪಾಲ್ ಅವರನ್ನು ಕೇಳಿದ್ದೇನೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್ ಅವರು ಸಮ್ಮಿಶ್ರ ಸರ್ಕಾರದ ಆರಂಭದಿಂದಲೂ ಸರ್ಕಾರವನ್ನು ಟೀಕಿಸುತ್ತಲೇ ತಮ್ಮ ಅಸಮಾಧಾನ ಹೊರಹಾಕುತ್ತ ಬಂದಿದ್ದರು.ನಂತರ ಬದಲಾದ ರಾಜಕೀಯ ವಿದ್ಯಮಾನಗಳಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆತ್ಮಾಹುತಿ ದಳದಂತೆ ತ್ಯಾಗಕ್ಕೆ ಬಂದಿದ್ದೇವೆ: ಸುಧಾಕರ್!

ಮಾತ್ರವಲ್ಲದೇ ಇನ್ನುಳಿದ ಅತೃಪ್ತ ಶಾಸಕರೊಂದಿಗೆ ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಮೊನ್ನೇ ಅಷ್ಟೇ ಸುಧಾರಕ್ ಅವರು ನೂತನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಲ್ಲದೇ ಬಿಜೆಪಿ ನಾಯಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಆದ್ರೆ, ಇದೀಗ ಈ ರೀತಿಯ ಹೇಳಿಕೆ ನೀಡಿರುವುದು, ಸುಧಾಕರ್ ನಡೆ  ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖ ಸಂಗತಿ ಎಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ಮರಳಿ ಕಾಂಗ್ರೆಸ್ ಸೇರಿಸಿಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

click me!