ಮಂಡ್ಯ: ಸಹೋದರಿಯರಿಗೆ ಡೆಂಘೀ, ಬಾಲಕಿ ಸಾವು

By Web DeskFirst Published Aug 6, 2019, 3:32 PM IST
Highlights

ರಾಜ್ಯದಲ್ಲಿ ಹಲವೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಮಂಡ್ಯದಲ್ಲಿ 7 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ. ಕೆ.ಆರ್ ಪೇಟೆಯ ಗ್ರಾಮದಲ್ಲಿ ಸಹೋದರಿಯರಿಬ್ಬರಿಗೂ ಡೆಂಘೀ ಜ್ವರ ಬಂದಿದ್ದು, ಒಬ್ಬಳು ಮೃತಪಟ್ಟಿದ್ದು, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ.

ಮಂಡ್ಯ(ಆ.06): ರಾಜ್ಯದಲ್ಲಿ ಹಲವೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಮಂಡ್ಯದಲ್ಲಿ 7 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ. ಕೆ.ಆರ್ ಪೇಟೆಯ ಗ್ರಾಮದಲ್ಲಿ ಸಹೋದರಿಯರಿಬ್ಬರಿಗೂ ಡೆಂಘೀ ಜ್ವರ ಬಂದಿದ್ದು, ಒಬ್ಬಳು ಮೃತಪಟ್ಟಿದ್ದು, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು,  ಹೇಮಾವತಿ(7) ಎಂಬ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ. ಹೇಮಾವತಿ ಸಹೋದರಿ ಪ್ರೇರಣ(5) ಕೂಡಾ ಡೆಂಘೀ ಜ್ವರದಿಂದ ತೀವ್ರ ಅಸ್ವಸ್ಥಳಾಗಿದ್ದು, ಪ್ರೇರಣಾಳಿಗೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಬಿಎಂಪಿಯ 62 ವಾರ್ಡ್‌ಗಳು ಡೆಂಘೀ ಪೀಡಿತ!

ಡೆಂಘೀ ಜ್ವರದಿಂದಾಗಿ ಅಗಸರಹಳ್ಳಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಡೆಂಘೀ, ಚಿಕೂನ್‌ ಗುನ್ಯಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಜನ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಹಾಗೆಯೇ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!