Kalyana-Karnataka: 371ಜೆ ಜಾರಿಯಾದ್ರೂ ಕಲ್ಯಾಣ ಕರ್ನಾಟಕದವರ ಅನ್ಯಾಯ ನೀಗಿಲ್ಲ..!

By Kannadaprabha News  |  First Published Dec 24, 2021, 8:17 AM IST

*  ನಿಯಮಾನುಸಾರ ಅನುಷ್ಠಾನವೇ ಆಗುತ್ತಿಲ್ಲ, ಸಿಗುತ್ತಿಲ್ಲ ಬಡ್ತಿ
*  ಅನ್ಯ ಕರ್ನಾಟಕದವರಿಗೆ ಅನುಕೂಲವಾಯ್ತಾ ಸೌಲಭ್ಯ?
*  ಶೇ.8ರ ಮೀಸಲಾತಿಗೆ ವರ್ಗೀಕರಣ ಆಗುತ್ತಿಲ್ಲ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.24):  ಕಲ್ಯಾಣ ಕರ್ನಾಟಕದ(Kalyana-Karnataka) ಅಭಿವೃದ್ಧಿಗೆ ಸಂವಿಧಾನ ತಿದ್ದುಪಡಿ ಮಾಡಿ ನೀಡಿರುವ 371ಜೆ(371J) ಸ್ಥಾನಮಾನ ಕನ್ನಡಿಯೊಳಗಿನ ಗಂಟಾಗಿದ್ದು, ಅನುಕೂಲಕ್ಕಿಂತ ಅನಾನುಕೂಲಕ್ಕೆ ದಾರಿಯಾಗುತ್ತಿರುವ ಶಂಕೆ ಕಾಡುತ್ತಿದೆ.

Tap to resize

Latest Videos

undefined

371ಜೆ ಸ್ಥಾನಮಾನವನ್ನು ಕಲ್ಯಾಣ ಕರ್ನಾಟಕಕ್ಕೆ 2013ರಲ್ಲಿಯೇ ಜಾರಿ ಮಾಡಿದ್ದರೂ ಈ ವರೆಗೆ ಬಡ್ತಿಗಾಗಿ ರಾಜ್ಯ ವ್ಯಾಪ್ತಿಯಲ್ಲಿರುವ ಹುದ್ದೆಗಳ ವರ್ಗೀಕರಣ ಮಾಡಿ ನೋಟಿಫಿಕೇಶನ್‌(Notification) ಮಾಡಿಲ್ಲ. ಪರಿಣಾಮ ಇಲ್ಲಿ ಆಗಿರುವ ಹುದ್ದೆಗಳ ವರ್ಗೀಕರಣ ರಾಜ್ಯವ್ಯಾಪಿ ಆಗದೆ ಇರುವುದರಿಂದ ಈ ಭಾಗದ ನೌಕರರಿಗೆ(Employees) ಅನ್ಯಾಯವಾಗುತ್ತಿದೆ. ಹೆಚ್ಚು ಸ್ಥಾನಮಾನ ಮತ್ತು ಸೌಲಭ್ಯ ದೊರೆಯಬೇಕಿದ್ದರೂ ಮತ್ತಷ್ಟು ಕಡಿತ ಮಾಡಲಾಗಿದೆ.

ವಿಜಯನಗರ ಜಿಲ್ಲೆಗೂ 371 ಜೆ ಸ್ಥಾನಮಾನ: ರಾಜ್ಯಪಾಲರ ಆದೇಶ

ಈ ವಿಶೇಷ ಸ್ಥಾನಮಾನದ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಸ್ಥಳೀಯ ಸರ್ಕಾರಿ ಉದ್ಯೋಗದಲ್ಲಿ(Government Job) ಶೇ.80 ರಷ್ಟನ್ನು ಅಲ್ಲಿನ ಸ್ಥಳೀಯರಿಗೇ ಮೀಸಲಿಡಬೇಕು. ಇನ್ನು ಈ ಪ್ರದೇಶದ ಹೊರತಾಗಿ ಇಡೀ ಕರ್ನಾಟಕಕ್ಕೆ(Karnataka) ಅನ್ವಯವಾಗುವಂತೆ ರಾಜ್ಯ ಮಟ್ಟದ ಹುದ್ದೆಗಳ ನೇಮಕ, ಬಡ್ತಿ ಮತ್ತಿತರ ವಿಚಾರದಲ್ಲಿ ಶೇ.8 ರಷ್ಟನ್ನು ಇಲ್ಲಿನವರಿಗೇ ಮೀಸಲಿಡಬೇಕು(Reservation). ಆದರೆ ಇದರ ಹೊರತಾದ ಪ್ರದೇಶದಲ್ಲಿ ಶೇ.8ರ

ಮೀಸಲಾತಿಗೆ ವರ್ಗೀಕರಣ ಆಗುತ್ತಿಲ್ಲ.

ರಾಜ್ಯವ್ಯಾಪ್ತಿ ಇಲಾಖೆಯಲ್ಲಿ ದೊರೆಯಬಹುದಾದ ಶೇ. 8ರಷ್ಟುಸ್ಥಾನಗಳ ವರ್ಗೀಕರಣವನ್ನು ಕಳೆದ 9 ವರ್ಷಗಳಿಂದ ಮಾಡಿಲ್ಲ. ಇದರಿಂದ ತಮ್ಮ ಹುದ್ದೆಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಬಡ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಇದೇ ತತ್ಸಮಾನ ಹುದ್ದೆಯಲ್ಲಿರುವ ಕಲ್ಯಾಣ ಕರ್ನಾಟಕೇತರ ಹುದ್ದೆಗಳಿಗೆ ಬಡ್ತಿ ಸಿಗುತ್ತಿದೆ. ರಾಜ್ಯದ ಇತರ ಪ್ರದೇಶದವರು ಎರಡ್ಮೂರು ವರ್ಷ ಸೇವೆ ಸಲ್ಲಿಸಿದವರೂ ಬಡ್ತಿಯಾಗುತ್ತಿದ್ದರೆ ಇಲ್ಲಿನವರು ಮಾತ್ರ ಹತ್ತಾರು ವರ್ಷವಾಗಿದ್ದರೂ ಬಡ್ತಿ ಹೊಂದಿಲ್ಲ.

ಕಳೆದ 9 ವರ್ಷಗಳಿಂದ ಇಲಾಖಾ ಮುಂಬಡ್ತಿ ಸಮಿತಿಯೂ ರಾಜ್ಯಮಟ್ಟದ ನೌಕರರೊಂದಿಗೆ ಕಲ್ಯಾಣ ಕರ್ನಾಟಕ ನೌಕರರಿಗೆ ಮುಂಬಡ್ತಿ ಪರಿಗಣಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿ ನೀಡಲು ಶೇ. 8ರಷ್ಟು ಹುದ್ದೆಗಳನ್ನು ಪ್ರತ್ಯೇಕ ಮಾಡಿ, ಆದೇಶಿಸಿದ ನಂತರ ನೀಡಲಾಗುತ್ತದೆ ಎಂದು ಹೇಳಿ ಅಷ್ಟು ವರ್ಷಗಳಿಂದ ಹೀಗೆ ಸಾಗು ಹಾಕಲಾಗುತ್ತಿದೆ. ಹಾಗಾದರೆ ಯಾರು ಇದನ್ನು ವರ್ಗೀಕರಣ ಮಾಡಬೇಕು ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ದೊಡ್ಡ ಅನ್ಯಾಯ:

371ಜೆ ಸ್ಥಾನಮಾನದ ಮೀಸಲಾತಿ ಸೌಲಭ್ಯವನ್ನೇ ಅಧಿಕಾರಿಗಳ ಹಂತದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಇದಕ್ಕಾಗಿ ಒಂದಿಲ್ಲೊಂದು ತಂತ್ರ ಮಾಡಿ, ಕಲ್ಯಾಣ ಕರ್ನಾಟಕ ಭಾಗದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಪದವಿ ಕಾಲೇಜು ಉಪನ್ಯಾಸಕ ನೇಮಕಾತಿಯ ವೇಳೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರನ್ನು ಪ್ರತ್ಯೇಕವಾಗಿ ಕಾಯ್ದಿರಿಸಿದ ಹುದ್ದೆಗಳಿಗೆ ಮಾತ್ರ ಸ್ಪರ್ಧಿಸುವಂತೆ ಸೂಚಿಸಲಾಗಿತ್ತು. ಇದರಿಂದ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗುವ ಮೆರಿಟ್‌ ಹೊಂದಿದ್ದರು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೀಮಿತ ಮಾಡಲಾಯಿತು. ಕೆಎಟಿಗೆ(KAT) ಹೋಗಿದ್ದರಿಂದ ಅಧಿಕಾರಿಗಳಿಗೆ ಛೀಮಾರಿ ಹಾಕಲಾಯಿತು. ಅದಾದ ಮೇಲೆ ಸರಿಮಾಡಲಾಯಿತು. ಈಗಲೂ ನಡೆಯುತ್ತಿರುವ ನೇಮಕಾತಿಯಲ್ಲಿ ಈ ರೀತಿ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಮಾತ್ರ ಸ್ಪರ್ಧಿಸುವಂತೆ ಮಾಡುತ್ತಿದ್ದಾರೆ. ರಾಜ್ಯವ್ಯಾಪಿ ಆಯ್ಕೆಯಾಗುವ ಸಾಮರ್ಥ ಇದ್ದವರನ್ನು ಕಲ್ಯಾಣ ಕರ್ನಾಟಕ ಹುದ್ದೆಗೆ ಸೀಮಿತ ಮಾಡಲಾಗುತ್ತಿದೆ.

Belagavi Violence: ಮಹಾರಾಷ್ಟ್ರಕ್ಕೆ KKRTC ಬಸ್‌ ಸಂಚಾರ ಸ್ಥಗಿತ

371ಜೆ ಜಾರಿಯಾಗಿದ್ದರೂ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಅನೇಕ ರೀತಿಯಲ್ಲಿ ಅನ್ಯಾಯವಾಗುತ್ತಿದೆ. ಹುದ್ದೆಗಳ ವರ್ಗೀಕರಣವಾಗದೆ ಇರುವುದು ಸಮಸ್ಯೆಯಾಗಿದೆ ಅಂತ ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ತಿಳಿಸಿದ್ದಾರೆ. 

ನಾನು ನಗರ ಯೋಜನೆಯಲ್ಲಿ ಎಂಜನಿಯರ್‌ ಆಗಿ ಸೇವೆ ಮಾಡುತ್ತಿದ್ದೇನೆ. ಕಲ್ಯಾಣ ಕರ್ನಾಟಕದಲ್ಲಿ ನನಗೆ ಬಡ್ತಿಯಾಗುತ್ತಿಲ್ಲ. ಆದರೆ, ನನಗಿಂತಲೂ ಕಡಿಮೆ ಅವಧಿ ಸೇವೆ ಸಲ್ಲಿಸಿದ ನನ್ನ ತತ್ಸಮಾನ ಹುದ್ದೆಯಲ್ಲಿರುವ ಕಲ್ಯಾಣ ಕರ್ನಾಟಕದಲ್ಲದವರು ಬಡ್ತಿಯಾಗಿದ್ದಾರೆ. ಈ ಕುರಿತು ದೂರು ನೀಡಿದರೂ ಪ್ರಯೋಜನವಾಗಿಲ್ಲ ಅಂತ ಹೆಸರು ಹೇಳದ ನೌಕರರೊಬ್ಬರು ಹೇಳಿದ್ದಾರೆ. 
 

click me!