ಅದೆಷ್ಟೂ ಸರ್ಕಾರ ಬಂದು ಹೋದ್ರೂ ನನಸಾಗದ ಮೆಡಿಕಲ್ ಕಾಲೇಜು ಕನಸು, ಬಿಜೆಪಿ ಸರ್ಕಾರದ ಅಸಲಿ ಸತ್ಯ ಬಯಲು!

By Suvarna NewsFirst Published Jun 5, 2023, 5:54 PM IST
Highlights

ಸರ್ಕಾರಿ ಆಸ್ಪತ್ರೆಯಲ್ಲಿ ನಾಮಫಲಕವನ್ನು ಹಾಕುವ ಮೂಲಕ ಶೀಘ್ರದಲ್ಲೇ ಚಿತ್ರದುರ್ಗ ಮೆಡಿಕಲ್ ಕಾಲೇಜು ನಿರ್ಮಾಣದ ಆಶಾ ಭಾವನೆ ಮೂಡಿಸಿದ್ದ ಬಿಜೆಪಿ ಸರಕಾರ, ಈವರೆಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯುಸ್

ಚಿತ್ರದುರ್ಗ (ಜೂ.5): ರಾಜ್ಯದಲ್ಲಿ ಅದೆಷ್ಟೊ, ಸರ್ಕಾರಗಳು ಅಧಿಕಾರಕ್ಕೆ ಬಂದವು, ಹೋದವು. ಆದರೆ ಕೋಟೆನಾಡಿನ ಮೆಡಿಕಲ್ ಕಾಲೇಜು ಕನಸು ಮಾತ್ರ ಕನಸಾಗಿಯೇ ಉಳಿದಿದೆ. ಚುನಾವಣೆ ವೇಳೆ ಎಲ್ಲಾ ಪಕ್ಷಗಳಿಗೂ ದಾಳವಾಗಿದ್ದ ಮೆಡಿಕಲ್ ಕಾಲೇಜು ಆರಂಭವಾಗುವ ಲಕ್ಷಣಗಳು ಮಾತ್ರ  ಈವರೆಗೆ ಕಾಣ್ತಿಲ್ಲ.  

ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನಾಳಿದ ಸಮ್ಮಿಶ್ರ ಸರ್ಕಾರ‌ ಹಾಗೂ ಬಿಜೆಪಿ ಸರ್ಕಾರಗಳು, ತಮ್ಮ ಅಧಿಕಾರದ ಅವಧಿಯೊಳಗೆ  ಕೋಟೆನಾಡು ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ‌ ಮಾಡುತ್ತೇವೆಂಬ ಭರವಸೆ ನೀಡಿದವು.‌‌ ಮೆಡಿಕಲ್ ಕಾಲೇಜಿಗಾಗಿ ಬಿಜೆಪಿ ಸರ್ಕಾರದ ಸಿಎಂ ಹಾಗು ಸಚಿವರು ಸ್ಥಳವನ್ನು ಪರಿಶೀಲನೆ ನಡೆಸಿ, ಡೀನ್ ಅವರನ್ನು ಸಹ ನೇಮಿಕ ಮಾಡಿತ್ತು.ಅಲ್ಲದೆ ಸಾಕಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದ್ದೂ, 2023 - 24 ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ತಾತ್ಕಲಿಕವಾಗಿ ಸೈನ್ಸ್ ಕಾಲೇಜಿನಲ್ಲಿ ಆಡಳಿತ ಆರಂಭಿಸಲಿದೆ ಅಂತ ಹೇಳಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ನಾಮಫಲಕವನ್ನು ಹಾಕುವ ಮೂಲಕ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣ ವಾಗಬಹುದೆಂಬ ಆಶಾ ಭಾವನೆಯನ್ನು ಜನರಲ್ಲಿ‌ ಮೂಡಿಸಿದ್ದ  ಬಿಜೆಪಿ‌ ನಾಯಕರು ಭರ್ಜರಿ ಬಿಲ್ಡಪ್ ಕೊಟ್ಟಿದ್ದರು.

10ನೇ ತರಗತಿಯ ಎಲ್ಲಾ 6 ಸಬ್ಜೆಕ್ಟ್‌ನಲ್ಲಿ 35 ಪಡೆದ ಮಗ, ಜಸ್ಟ್ ಪಾಸ್‌ಗೆ ಹೆತ್ತವರ ಮುಗಿಲು

ಆದರೆ ಮೆಡಿಕಲ್ ಕಾಲೇಜು ನಿರ್ಮಾಣದ ಅಸಲಿ ಸತ್ಯ ಈಗ ಬಯಲಾಗಿದೆ‌.‌‌ ಚಿತ್ರದುರ್ಗ ಮೆಡಿಕಲ್ ಕಾಲೇಜು ಕಾಮಗಾರಿಗಾಗಿ ಈವರೆಗೆ ನಯಾಪೈಸ ಅನುದಾನ ಸರ್ಕಾರದಿಂದ ಈವರೆಗೆ ಬಿಡುಗಡೆಯಾಗಿಲ್ಲ. ಯಾವುದೇ ಯೋಜನೆ ಸಹ ಸಿದ್ಧವಾಗಿಲ್ಲ ಅನ್ನೊ‌ ಸತ್ಯ ಡೀನ್ ಯುವರಾಜ್ ಸ್ಪೋಟಿಸಿದ್ದಾರೆ. ಹೀಗಾಗಿ ಮೆಡಿಕಲ್‌ ಕಾಲೇಜು ಕನಸು ಕನಸಾಗಿಯೇ ಉಳಿಯಲಿದೆ ಎಂಬ ಅನುಮಾನ ಕೋಟೆನಾಡಿನ ಜನರಲ್ಲಿ  ಶುರುವಾಗಿದೆ.

ಇನ್ನು ಇಷ್ಟೆಲ್ಲಾ ಅನುಮಾನ ಶುರವಾದ ಬೆನ್ನಲ್ಲೇ, ಕೇಂದ್ರ‌ ಸಚಿವ ಎ.ನಾರಾಯಣಸ್ವಾಮಿ ದಿಢೀರ್ ಅಂತ  ನೂತನ ಶಾಸಕ ವೀರೇಂದ್ರ ಪಪ್ಪಿ ಸಮ್ಮುಖದಲ್ಲಿ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ರು. ಮೆಡಿಕಲ್ ಕಾಲೇಜಿಗಾಗಿ ನೂತನ ಡಿಸಿ ಕಚೇರಿ ನಿರ್ಮಾಣ ಆಗುತ್ತಿರುವ ಜಮೀನಿನಲ್ಲೇ ಮೆಡಿಕಲ್ ಕಾಲೇಜಿಗೆ 80 ಎಕರೆ ಜಾಗ ಮೀಸಲಿಡಲು ಚರ್ಚೆ ನಡೆಸಿದರು.ಬಳಿಕ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಯೇ ಮಾಡ್ತೇವೆಂಬ ಭರವಸೆ ನೀಡಿದರು.

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ 6 ಕಂಡೀಷನ್ ಹಾಕಿ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ

ಒಟ್ಟಾರೆ ಜಿಲ್ಲೆಯ ಆರು ಕ್ಷೇತ್ರಗಳ ಶಾಸಕರಲ್ಲಿ ನಾಲ್ವರು ಶಾಸಕರು, ಓರ್ವ ಸಚಿವ ಸಭೆಗೆ ಗೈರಾಗಿದ್ರು.ಅಲ್ಲು ಸಹ ಬಿಜೆಪಿ‌ ಹಾಗು ಕಾಂಗ್ರೆಸ್ ನ ಮುಸುಕಿನ ಗುದ್ದಾಟ ಒಳಗೊಳಗೆ ಹೊಗೆಯಾಡ್ತಿದ್ದು,ಇವರ ಜಗಳದಲ್ಲಿ ಮೆಡಿಕಲ್ ಕಾಲೇಜು ಕನಸು ಕನಸಾಗಿಯೇ ಉಳಿಯಲಿದ್ಯಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ‌ ಶುರುವಾಗಿದೆ.

click me!