ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವನ್ನೇ ಬಂದ್‌ ಮಾಡಿಸಿದ ಚಿಪ್ಸ್‌ ಪ್ಯಾಕೆಟ್!

By Sathish Kumar KH  |  First Published Jun 5, 2023, 4:39 PM IST

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಚಿಪ್ಸ್‌ ಖರೀದಿ ವಿಚಾರಕ್ಕೆ ಗ್ರಾಹಕ ಹಾಗೂ ವ್ಯಾಪಾರಿ ನಡುವೆ ಮಾರಾಮಾರಿ ನಡೆದಿದ್ದು, ಪ್ರವಾಸಿ ತಾಣವನ್ನೇ ಬಂದ್‌ ಮಾಡಲಾಗಿದೆ. 


ಕೊಡಗು (ಜೂ.05): ಕೊಡಗಿನಲ್ಲಿ ನಿನ್ನೆ ರಾತ್ರಿ ವೇಳೆ ಚಿಪ್ಸ್‌ ಖರೀದಿ ಮಾಡುವ ವೇಳೆ ಗಲಾಟೆ ಆರಂಭವಾಗಿದ್ದು, ಗ್ರಾಹಕ ಮತ್ತು ಅಂಗಡಿ ಮಾಲೀಕರ ನಡುವೆ ಮಾರಾಮಾರಿ ನಡೆದಿದೆ. ಇನ್ನು ಈ ಘಟನೆಯಿಂದ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟ್‌ನಲ್ಲಿ ಉದ್ವಿಗ್ನ ವಾತಾವಣ ನಿರ್ಮಾಣವಾಗಿದ್ದು, ಇಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಡಳಿತದಿಂದ ಬಂದ್‌ ಮಾಡಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಏನೆಲ್ಲಾ ಗಲಾಟೆಗಳು ನಡೆಯುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇನ್ನು ಕೊಡಗಿನಲ್ಲಿಯೂ ಕೂಡ ಕೇವಲ ಚಿಪ್ಸ್‌ ಖರೀದಿ ವಿಚಾರವಾಗಿ ಆರಂಭವಾದ ಮಾರಾಮಾರಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ದೊಡ್ಡದಾಗಿ ಬೆಳೆದಿದೆ. ಮಡಿಕೇರಿಯ ರಾಜಾಸೀಟಿನಲ್ಲಿ ನಿನ್ನೆ ರಾತ್ರಿ ಅಂಗಡಿಯ ವ್ಯಾಪಾರಿ ಮತ್ತು ಸೆಕ್ಯುರಿಟಿ ಗಾರ್ಡ್ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಸೆಕ್ಯುರಿಟಿ ಗಾರ್ಡ್ ಜಯಣ್ಣ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ಕೂಡಲೇ ಇತರೆ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಲಾಗಿದೆ. ಪ್ರಸ್ತುತ ಸೆಕ್ಯೂರಿಟಿ ಗಾರ್ಡ್‌ ಜಯಣ್ಣ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos

undefined

ಕ್ಷುಲ್ಲಕ ಕಾರಣಕ್ಕೆ ತಾಯಿ ಸೀರೆಯಿಂದಲೇ ನೇಣು ಬಿಗಿದುಕೊಂಡ ಅಕ್ಕ- ತಂಗಿಯರು

ಹಲ್ಲೆ ಮಾಡಿದ ಝಂಷದ್‌ ವಶ:  ಸೆಕ್ಯುರಿಟಿ ಗಾರ್ಡ್ ಜಯಣ್ಣ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಝಂಷದ್ ಎಂದು ಗುರುತಿಸಲಾಗಿದೆ. ಚಿಪ್ಸ್ ಕೊಳ್ಳುವ ವಿಷಯದಲ್ಲಿ ನಡೆದಿರುವ ಗಲಾಟೆ ನಡೆದ ಆರೋಪದಡಿ ಹಾಗೂ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಡಿ ಝಂಷದ್ ನನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ರಾಜಾಸೀಟ್‌ ಪ್ರವಾಸಿ ತಾಣದಲ್ಲಿ ಮಾರಾಮಾರಿಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ರಾಜಾಸೀಟು ಮುಂಭಾಗದಲ್ಲಿದ್ದ ಎಲ್ಲಾ ಅಂಗಡಿಗಳನ್ನು ಜಿಲ್ಲಾಡಳಿತದಿಂದ ಬಂದ್ ಮಾಡಿಸಲಾಗಿದೆ. 

ಪಶು ಆಸ್ಪತ್ರೆ ಅಧಿಕಾರಿ ಕುಸಿದುಬಿದ್ದು ಸಾವು: 
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಪಶು ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಜಾನುವಾರು ಅಭಿವೃದ್ಧಿ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಕೆ.ಆರ್‌. ದಯಾನಂದ (59) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಆಗಿದ್ದಾರೆ. ಮಡಿಕೇರಿ ತಾಲ್ಲೂಕು ಪಶುವೈದ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಯಾನಂದ ಅವರು ಕೆ. ನಿಡುಗಣೆಯ ಗೋಶಾಲೆಗೆ ಕರ್ತವ್ಯಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದೆ. ಮಡಿಕೇರಿ ಸಮೀಪದ ಮೇಕೇರಿಯ ನಿವಾಸಿಯಾಗಿದ್ದ  ಕೆ.ಆರ್‌. ದಯಾನಂದ ಕರ್ತವ್ಯದ ನಡುವೆಯೇ ಸಾವನ್ನಪ್ಪಿದ್ದರಿಂದ ಕಚೇರಿಯಲ್ಲಿ ನೀರವ ಮೌನ ಆವರಿಸಿತ್ತು. ಇನ್ನು ಮೃತ ಅಧಿಕಾರಿ ದಯಾನಂದ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 

ಕರೆಂಟ್‌ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್‌ಮ್ಯಾನ್‌!

ಬಿಲ್‌ ಪಾವತಿಸದ ಗ್ರಾಪಂಗಳ ವಿದ್ಯುತ್‌ ಕಡಿತ ಮಾಡಬೇಡಿ ಎಂದು ಶಾಸಕ ಮಂಥರ್‌ ಗೌಡ ಸೂಚನೆ
ಸೋಮವಾರಪೇಟೆ (ಜೂ.05): ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬಾರದು. ಸಮರ್ಪಕ ವಿದ್ಯುತ್‌ ಪೂರೈಕೆಗೆ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಅಶೋಕ್‌ ಅವರಿಗೆ ಶಾಸಕ ಡಾ. ಮಂಥರ್‌ ಗೌಡ ಸೂಚಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮನ್ನೆಚ್ಚರಿಕೆ ಕ್ರಮದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯುತ್‌ ಬಿಲ್‌ ಪಾವತಿಸದ ನೆಪವೊಡ್ಡಿ, ಕೆಲ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಸಂಪರ್ಕವನ್ನು ಸೆಸ್‌್ಕ ಕಡಿತಗೊಳಿಸುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಸಭೆಯ ಗಮನಕ್ಕೆ ತಂದಾಗ, ಶಾಸಕರು ಸೆಸ್‌್ಕ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು. ಶಾಸಕನಾದ ನಾನು ಮೂರು ಬಾರಿ ಕಾಲ್‌ ಮಾಡಿದಾಗಲೂ ನನ್ನ ಕರೆಯನ್ನು ಸ್ವೀಕರಿಸಿಲ್ಲ. ಇನ್ನು ಸಾರ್ವಜನಿಕರ ಕರೆಯನ್ನು ಸ್ವೀಕರಿಸುತ್ತಿರಾ ಎಂದು ಸೆಸ್‌್ಕ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯೊಬ್ಬರ ಕರೆಯನ್ನು ಸ್ವೀಕರಿಸಿ ಸಮಸ್ಯೆ ಆಲಿಸಬೇಕು ಎಂದು ಶಾಸಕರು ತಿಳಿಸಿದರು.

click me!