ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಹೆಜ್ಜೆ!

By Kannadaprabha News  |  First Published Nov 21, 2024, 9:37 PM IST

ತುಂಗಭದ್ರಾ ಜಲಾಶಯದ ಮಂಡಳಿ ಸಭೆ ನ.22ರಂದು ಹೊಸಪೇಟೆಯಲ್ಲೇ ನಡೆಯಲಿದೆ. ಈ ಸಭೆಯಲ್ಲಿ ಗೇಟ್‌ಗಳ ಸ್ಥಿತಿಗತಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ 


ಕೃಷ್ಣ ಎನ್. ಲಮಾಣಿ 

ಹೊಸಪೇಟೆ(ನ.21):  ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳ ಅಳವಡಿಕೆ ಬಗ್ಗೆ ತುಂಗಭದ್ರಾ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೊಸಪೇಟೆಯಲ್ಲೇ ನ.22ರಂದು ತುಂಗಭದ್ರಾ ಮಂಡಳಿ ಸಭೆ ನಡೆಯಲಿದೆ. ಮಂಡಳಿ ಅಧ್ಯಕ್ಷ ಎಸ್. ಎನ್. ಪಾಂಡೆ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇಂದ್ರ ಸರ್ಕಾರದ ಭಾಗವಹಿಸಲಿದ್ದಾರೆ. 

Tap to resize

Latest Videos

undefined

ಪ್ರತಿನಿಧಿಗಳು ಕೂಡ ಸಂಸ್ಥೆಯೊಂದಕ್ಕೆ ನೀಡಲು ನಿರ್ಧಾರ: 

ಜಲಾಶಯದ ಕ್ರಸ್ಟ್‌ಗೇಟ್‌ಗಳ ಗಟ್ಟಿತನ ಅಧ್ಯಯನಕ್ಕಾಗಿ ಪರಿಣತ ಸಂಸ್ಥೆಯೊಂದಕ್ಕೆ ನೀಡಲು ತುಂಗಭದ್ರಾ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಈ ಸಂಸ್ಥೆ ನೀಡುವ ವರದಿ ಆಧಾರದ ಮೇಲೆ ಜಲಾಶಯದ ಗೇಟ್ ಗಳನ್ನು ಬದಲಿಸುವ ಸಾಧ್ಯತೆ ಇದೆ. ಈಗಾಗಲೇ ತುಂಗಭದ್ರಾ ಮಂಡಳಿ ಈ ಸಂಸ್ಥೆಗೆ ಪತ್ರ ಕೂಡ ಬರೆದಿದೆ. ಈಗಾಗಲೇ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದು, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಪರಿಣತ ತಜ್ಞ ಎ.ಕೆ. ಬಜಾಜ್ ನೇತೃತ್ವದ ತಾಂತ್ರಿಕ ತಂಡ ಆಗಮಿಸಿ ಪರಿಶೀಲನೆ ನಡೆಸಿ, ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಿದೆ. ಈಗ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಅಧ್ಯಯನಕ್ಕಾಗಿ ನೀಡಲು ತುಂಗಭದ್ರಾ ಮಂಡಳಿ ಮುಂದಾಗಿದೆ. ಇದಕ್ಕಾಗಿ ನ.25ರಂದು ಆನ್‌ಲೈನ್ ಸಭೆ ಕೂಡ ನಿಗದಿಯಾಗಿದೆ.

ವಕ್ಫ್ ಆಸ್ತಿ ಯಾರದ್ದು ಅಲ್ಲ, ಅದು ಹಿರಿಯರು ದಾನ ಕೊಟ್ಟಿದ್ದು: ಸಚಿವ ಜಮೀರ್ ಅಹ್ಮದ್

ಗೇಟ್ ಬದಲಾವಣೆಗೆ ಸಿದ್ಧತೆ: 

ಜಲಾಶಯದ ಗೇಟ್ ಗಳನ್ನು ಬದಲಿಸಲು ಈಗಾಗಲೇ ಪರಿಣತ ತಜ್ಞರು ಕೂಡ ಸಲಹೆ ನೀಡಿದ್ದಾರೆ. ಜಲಾಶಯದ 19ನೇ ಗೇಟ್‌ಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಿದ ತಜ್ಞ ಕನ್ನಯ್ಯ ನಾಯ್ತು ಕೂಡ ಜಲಾಶಯದ ಗೇಟ್‌ಗಳನ್ನು ಬದಲಿಸಲು ಸಲಹೆ ನೀಡಿದ್ದಾರೆ. ಜೊತೆಗೆ ಸಿಡಬ್ಲ್ಯುಸಿಯ ಪರಿಣತರ ತಂಡ ಕೂಡ ಗೇಟ್‌ ಗಳನ್ನು ಬದಲಿಸಲು ಸಲಹೆ ನೀಡಿದ್ದಾರೆ. 

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಗೇಟ್‌ಗಳ ಗಟ್ಟಿತನದ ಬಗ್ಗೆ ಅಧ್ಯಯನ ನಡೆಸಲು ಅನುಮೋದನೆ ನೀಡಲು ಮಂಡಳಿ ಮುಂದಾಗಿದೆ. ಜಲಾಶಯದ 32 ಕ್ರಸ್ಟ್ ಗೇಟ್‌ಗಳ ಗಟ್ಟಿತನ, ಜಲಾಶಯದ ಕಾಲುವೆಗಳ ಸ್ಥಿತಿಗತಿ, ಜಲಾಶಯದ ನೀರುಪ್ರತಿ ವರ್ಷ ಹಚ್ಚಹಸಿರುಬಣ್ಣಕ್ಕೆ ತಿರುಗುತ್ತಿರುವುದು ಸೇರಿದಂತೆ ಜಲಾಶಯದ ಇನ್ನಿತರ ವಿಷಯಗಳ ಕುರಿತು ಮಂಡಳಿಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಚರ್ಚೆ ನಡೆಯಲಿದೆ. 

ವಕ್ಫ್‌, ಮುಜರಾಯಿ ಆಸ್ತಿ ದೇವರದ್ದು, ಯಾರಪ್ಪನದ್ದಲ್ಲ: ಸಚಿವ ಜಮೀರ್‌ ಅಹಮದ್

ಈ ಬಾರಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಜಲಾಶಯ ಭರ್ತಿಯಾದ ಬಳಿಕ ನದಿಗೂ ನೀರು ಹರಿಸಲಾಗಿದೆ. ಜಲಾಶಯದಿಂದ ಕರ್ನಾಟಕದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳು ನೀರು ಪಡೆಯುತ್ತವೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಕೂಡ ನೀರು ಪಡೆಯುತ್ತವೆ. ಒಟ್ಟು 13 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ಜಲಾಶಯ ನೀರು ಒದಗಿಸುತ್ತದೆ. ಈ ಜಲಾಶಯ ಹಾಗೂ ಗೇಟ್‌ಗಳ ಬಲವರ್ಧನೆ ಅತಿ ಮುಖ್ಯವಾಗಿದ್ದು, ಇದಕ್ಕಾಗಿ ತುಂಗಭದ್ರಾ ಜಲಾಶಯದಲ್ಲಿನ 22ರಂದು ನಡೆಯಲಿರುವ ಮಂಡಳಿ ಸಭೆ ಮಹತ್ವ ಪಡೆದುಕೊಂಡಿದೆ.

ತುಂಗಭದ್ರಾ ಜಲಾಶಯದ ಮಂಡಳಿ ಸಭೆ ನ.22ರಂದು ಹೊಸಪೇಟೆಯಲ್ಲೇ ನಡೆಯಲಿದೆ. ಈ ಸಭೆಯಲ್ಲಿ ಗೇಟ್‌ಗಳ ಸ್ಥಿತಿಗತಿ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ತಿಳಿಸಿದ್ದಾರೆ. 

click me!