ಉತ್ತರಕನ್ನಡ ಜಿಲ್ಲೆಯಲ್ಲಿ ಪತ್ನಿ ಸಮೇತ ಡಿಕೆಶಿ ಟೆಂಪಲ್‌ ರನ್‌: ದೇವಸ್ಥಾನಗಳಲ್ಲಿ ವಿಶೇಷ ಪೂಜೆ!

By Girish Goudar  |  First Published Nov 21, 2024, 8:53 PM IST

ಮೀನುಗಾರರು ನೀರಿನಲ್ಲಿ, ಸಮುದ್ರದಲ್ಲಿ ಮೀನು ಕೃಷಿ ಮಾಡ್ತಾರೆ. ಮೀನುಗಾರರಿಗೆ ಯಾವುದೇ ಲಂಚ, ಪ್ರಮೋಷನ್ ಇಲ್ಲ. ಸೂರ್ಯ, ಬೆಳಕು, ನೀರನ್ನು ನಂಬಿಕೊಂಡು ಇಡೀ ಸಮಾಜಕ್ಕೆ ಸಹಾಯ ಮಾಡ್ತಿದ್ದಾರೆ. ಮೀನುಗಾರರು ಸ್ವಂತಕ್ಕೇನೂ ಮಾಡ್ತಿಲ್ಲ, ಯಾವ ಮೀನುಗಾರನೂ ಕೋಟ್ಯಾಂತರ ಹಣ ಸಂಪಾದಿಸಿರೋದು ನಾನು ನೋಡಿಲ್ಲ. ಮೀನುಗಾರರ ಬದುಕು ಹಸಿರು ಮಾಡಬೇಕೆಂದು ನನ್ನ ಆಸೆಯಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ 


ಕಾರವಾರ(ನ.21):  ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಂತಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಶುರು  ಮಾಡಿದ್ದಾರೆ. ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಪತ್ನಿ ಜೊತೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಇಡಗುಂಜಿ ಬಳಿಕ ಮುರುಡೇಶ್ವರ ಕ್ಷೇತ್ರಕ್ಕೂ ಪತ್ನಿ ಸಮೇತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ದರ್ಶನವನ್ನ ಪಡೆದುಕೊಂಡಿದ್ದಾರೆ. ಮುರುಡೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಭಟ್ಕಳದ ಮುರುಡೇಶ್ವರದಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

Latest Videos

undefined

ಅಪಹರಣ ಕೇಸ್‌: ರೇವಣ್ಣ ಬಂಧಮುಕ್ತ ಬೆನ್ನಲ್ಲೇ ಟೆಂಪಲ್‌ರನ್‌..!

ಮುರುಡೇಶ್ವರದಲ್ಲಿ ಮತ್ಸ್ಯಮೇಳ-2024 ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಂದಿನಿ ಹಾಲು ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆ. ಕರಾವಳಿಯಲ್ಲಿ ಮೀನು ಪ್ರಚಾರ ಮಾಡಲೆಂದು ನಾನು ಮುರುಡೇಶ್ವರ ಬಂದಿದ್ದೇನೆ. ಭಾಷಣದುದ್ದಕ್ಕೂ ಮಾಂಕಾಳು ವೈದ್ಯರನ್ನು ಮಣಕಾಲು ವೈದ್ಯ ಎಂದು ಕರೆದಿದ್ದಾರೆ. 

ಮೀನುಗಾರರು ನೀರಿನಲ್ಲಿ, ಸಮುದ್ರದಲ್ಲಿ ಮೀನು ಕೃಷಿ ಮಾಡ್ತಾರೆ. ಮೀನುಗಾರರಿಗೆ ಯಾವುದೇ ಲಂಚ, ಪ್ರಮೋಷನ್ ಇಲ್ಲ. ಸೂರ್ಯ, ಬೆಳಕು, ನೀರನ್ನು ನಂಬಿಕೊಂಡು ಇಡೀ ಸಮಾಜಕ್ಕೆ ಸಹಾಯ ಮಾಡ್ತಿದ್ದಾರೆ. ಮೀನುಗಾರರು ಸ್ವಂತಕ್ಕೇನೂ ಮಾಡ್ತಿಲ್ಲ, ಯಾವ ಮೀನುಗಾರನೂ ಕೋಟ್ಯಾಂತರ ಹಣ ಸಂಪಾದಿಸಿರೋದು ನಾನು ನೋಡಿಲ್ಲ. ಮೀನುಗಾರರ ಬದುಕು ಹಸಿರು ಮಾಡಬೇಕೆಂದು ನನ್ನ ಆಸೆಯಾಗಿದೆ. ಮೀನುಗಾರರ ಸಂಕಷ್ಟ ಪರಿಹಾರವನ್ನು 10 ಲಕ್ಷ ರೂ‌‌.ಗೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಜಿಲ್ಲೆಯಲ್ಲಿ ಹಲವು ಬಂದರುಗಳು ನಿರ್ಮಾಣವಾಗಬೇಕು. ಯುವಕರು ಇಲ್ಲಿ ಕೋಮುಗಲಭೆಗಳಲ್ಲಿ ತೊಡಗಿದ್ರು, ಅದನ್ನು ನಾವು ತಪ್ಪಿಸ್ತೇವೆ. ಯುವಕರ ಉತ್ತಮ ಬದುಕು ಸೃಷ್ಠಿಗಾಗಿ ಒಳ್ಳೆಯ ಅವಕಾಶ ಕಲ್ಪಿಸ್ತೇವೆ. ಕರಾವಳಿಗೆ ಪ್ರವಾಸೋದ್ಯಮ ನೀತಿ ಜಾರಿ ತರಲು ನಿರ್ಧರಿಸಿದ್ದೇವೆ. ಕರಾವಳಿಯಲ್ಲಿ ಅಭಿವೃದ್ಧಿ ಹಾಗೂ ದೊಡ್ಡ ಉದ್ಯಮ ಬೆಳೆಸಲು ಯೋಚನೆಯಿದೆ. ಬಂದರು ನಿರ್ಮಾಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ. 

Lok Sabha Election 2024: ಧರ್ಮಯುದ್ಧಕ್ಕೂ ಮುನ್ನ ದೇವರ ದರ್ಶನ: ಡಿ.ಕೆ.ಶಿವಕುಮಾರ್

ಮೀನುಗಾರರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. 40 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಮೀನುಗಾರಿಕಾ ಬಂದರು ಪೂರ್ಣಗೊಂಡಿದೆ. ದೊಡ್ಡ ಕಂಪೆನಿಗಳಿಂದ ಸಣ್ಣ ಮೀನುಗಾರರಿಗೆ ತೊಂದರೆಯಾಗದಂತೆ ಕ್ರಮಗೊಳ್ತೇವೆ. ಮೀನುಗಾರರನ್ನು ಬದುಕಿಸಲು ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಹೆಚ್ಚು ಉದ್ಯೋಗ ಸೃಷ್ಟಿಗೆ ಪಂಚ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಬೆಲೆ ಏರಿಕೆ ತಡೆಯಲು ಸರಕಾರ ಗ್ಯಾರಂಟಿ ಯೋಜನೆಗಳನ್ನ ತಂದಿತ್ತು. ಸರಕಾರ ಯೋಜನೆಯನ್ನು ನೋಡಿ ಇದೀಗ ಬಿಜೆಪಿಯವರು ಕೂಡ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ 5 ಶಾಸಕರು ನನ್ನ ಕೈ ಗಟ್ಟಿಗೊಳಿಸಿದ್ದಾರೆ ಎಂದ ಡಿಕೆಶಿ ಹೇಳಿದ್ದಾರೆ. 

click me!