ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವ್ಯಾಪ್ತಿಯಲ್ಲಿ ಅಕ್ರಮ ಹೋಂ ಸ್ಟೇಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಗುಂಡ್ಲುಪೇಟೆ(ಜೂ.11): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವ್ಯಾಪ್ತಿಯಲ್ಲಿ ಅಕ್ರಮ ಹೋಂ ಸ್ಟೇಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಆದೇಶದ ಮೇರೆಗೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ(ಜೂ.10) ರಂದು ಗುಂಡ್ಲುಪೇಟೆ ತಾಲೂಕು ಆಡಳಿತ ಮುಂದಾಗಿತ್ತು. ಜಮೀನಿನ ಮಾಲೀಕರಾದ ಎನ್.ಕಾರ್ತಿಕ್, ಮಹದೇವಪ್ಪ ಹಾಗೂ ಬಿ.ಸೋಮಶೇಖರ್ ತೆರವು ಕಾರ್ಯಾಚರಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಇಮ್ಯೂನಿಟಿ ಹೆಚ್ಚಿಸಲು ಹಸಿ ಅರಿಶಿನ; ನೀವು ತಿಳಿದುಕೊಳ್ಳಲೇ ಬೇಕು!
ಪ್ರಕರಣ ಇತ್ಯರ್ಥವಾಗುವ ತನಕ ತೆರವು ಕಾರ್ಯಾಚರಣೆ ಮುಂದೂಡಲಾಗಿದೆ ಎಂದು ಗುಂಡ್ಲುಪೇಟೆ ತಹಸೀಲ್ದಾರ್ ಎಂ.ನಂಜುಂಡಯ್ಯ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ತೆರವಿಗೆ ಕಾರಣ:
ಸರ್ವೇ ನಂಬರ್ 146 ಹಾಗು 517 ರಲ್ಲಿ ಹೋಂಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧಿಸೂಚನೆ ಉಲ್ಲಂಘಿಸಿದ ಹಿನ್ನೆಲೆ ಮೇಲ್ಕಂಡ ಮೂರು ಹೋಂಸ್ಟೇಗಳ ನೋಂದಣಿ ರದ್ದು ಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಲಾಗಿದೆ. ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷತ್ರ್ಮ ಪರಿಸರ ವಲಯದ ವ್ಯಾಪ್ತಿಗ ಬರುತ್ತದೆ. ಸದರಿ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆ ನಡೆಸಲು ಅವಕಾಶ ವಿರುವುದಿಲ್ಲ. ಆದಾಗ್ಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಪೂರ್ವಾನುಮತಿ ಪಡೆಯದೇ ನಿರ್ಮಿಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಇಮ್ರಾನ್ ಜನಪ್ರಿಯತೆ ಕುಸಿತ: ಪಾಕ್ ಸರ್ಕಾರ ಮತ್ತೆ ಸೇನೆ ಹಿಡಿತಕ್ಕೆ?
ಈ ಹಿನ್ನೆಲೆ ಗುಂಡ್ಲುಪೇಟೆ ತಹಸೀಲ್ದಾರ್‌ರಿಂದ ವರದಿ ತರಿಸಿಕೊಂಡು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು.ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಬಂದ ಕಾರಣ ತೆರವು ಕಾರ್ಯಾಚರಣೆ ನಿಂತಿದೆ.
ಬಂಡೀಪುರ ಬಳಿಯ ಸೂಕ್ಷ್ಮ ಪರಿಸರ ವಲಯದಲ್ಲಿ 3 ಅಕ್ರಮ ಹೋಂ ಸ್ಟೇಗಳ ತೆರವು ನಡೆಯಬೇಕಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡಿದ ಕಾರಣ ಕಾರ್ಯಾಚರಣೆ ಮುಂದೂಡಲಾಗಿದೆ ಎಂದು ತಹಸೀಲ್ದಾರ್ ಎಂ.ನಂಜುಂಡಯ್ಯ ತಿಳಿಸಿದ್ದಾರೆ.
ಶೃಂಗೇರಿಗೆ ಲಗ್ಗೆ ಇಟ್ಟ ಲಕ್ಷಾಂತರ ಮಿಡತೆ ಹಿಂಡು!
3 ಹೋಂಸ್ಟೇಗಳ ತೆರವು ಸಂಬಂಧ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಅರಣ್ಯ ಇಲಾಖೆಯಿಂದ ತಡೆಯಾಜ್ಞೆ ತೆರವುಗೊಳಿಸಲು ಮೇಲ್ಮನವಿಯನ್ನು ಸಲ್ಲಿಸಲಾಗುವುದು. ತಡೆಯಾಜ್ಞೆ ತಂದವರಿಗೆ ತಾತ್ಕಾಲಿಕ ತೃಪ್ತಿ ಸಿಕ್ಕಿದೆ ಅಷ್ಟೇ ಎಂದು ಎಸಿಎಫ್ ಕೆ.ಪರಮೇಶ್ ತಿಳಿಸಿದ್ದಾರೆ.