ಯಾದಗಿರಿ: 669 ಕೊರೋನಾ ಸೋಂಕಿತರಲ್ಲಿ 119 ಜನರು ಗುಣಮುಖ

By Kannadaprabha News  |  First Published Jun 11, 2020, 10:14 AM IST

ಯಾದಗಿರಿ ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 669 ಪ್ರಕರಣಗಳ ಪೈಕಿ 119 ಜನ ಗುಣಮುಖ| ಬುಧವಾರ 27 ಪ್ರಕರಣಗಳು ದೃಢ| ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ರತ್ನಗಿರಿ ಸ್ಥಳಗಳಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದವರು| 


ಯಾದಗಿರಿ(ಜೂ.11): ಜಿಲ್ಲೆಯಲ್ಲಿ ಜೂನ್ 10 ರಂದು ಬುಧವಾರ 10 ವರ್ಷದೊಳಗಿನ 3 ಮಕ್ಕಳು ಸೇರಿದಂತೆ ಒಟ್ಟು 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 669 ಪ್ರಕರಣಗಳ ಪೈಕಿ 119 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

27 ಜನ ಸೋಂಕಿತರಲ್ಲಿ 10 ಮಹಿಳೆಯರು, 17 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ರತ್ನಗಿರಿ ಸ್ಥಳಗಳಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಶಹಾಪುರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ಗೆ ಕೊರೋನಾ ಸೋಂಕು: ಹೆಚ್ಚಿದ ಆತಂಕ

ಆರ್‌ಟಿಪಿಸಿಆರ್ ಲ್ಯಾಬ್ ಉದ್ಘಾಟನೆ

ಜೂನ್ 12ರಂದು ಯಾದಗಿರಿ ತಾಲ್ಲೂಕಿನ ಮುದ್ನಾಳ ಸಮೀಪದ ಕೋವಿಡ್-19 ಆಸ್ಪತ್ರೆ (ಹೊಸ ಜಿಲ್ಲಾಸ್ಪತ್ರೆ)ಯಲ್ಲಿ ಕೊರೊನಾ ಪರೀಕ್ಷೆ ನಡೆಸುವ ಆರ್.ಟಿ.ಪಿ.ಸಿ.ಆರ್. ಲ್ಯಾಬ್ ಅನ್ನು ಪಶುಸಂಗೋಪನೆ, ಹಜ್ ಮತ್ತು ವಕ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಉದ್ಘಾಟಿಸಲಿದ್ದಾರೆ. 
 

click me!