ಗಂಗಾವತಿ: ಮನೆ ಮೇಲೆ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ: ದೇಶಾಭಿಮಾನ ಮೆರೆದ ಯುವಕ..!

By Girish GoudarFirst Published May 26, 2022, 8:58 AM IST
Highlights

*   ವಿಶೇಷತೆಗೆ ಕಾರಣವಾದ ಪ್ರಶಾಂತ್ ಚಿತ್ರಗಾರ್‌ಗೆ ಎಲ್ಲೆಡೆ ಮೆಚ್ಚುಗೆ 
*  ತಮ್ಮ ಮನೆಯೆ ಮೇಲೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಪ್ರಶಾಂತ್ ಚಿತ್ರಗಾರ್
*  ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ 
 

ವರದಿ- ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ(ಮೇ.26):  ಸಾಮಾನ್ಯವಾಗಿ ನಾವು ಮೂರ್ತಿಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಷ್ಠಾಪನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಮನೆಯ ಮೇಲೆ ಶಿವಾಜಿಯ ಮೂರ್ತಿಯನ್ನು ತನ್ನ ಮನೆಯ ಮೇಲೆ ಪ್ರತಿಷ್ಠಾಪನೆ ಮಾಡುವ ಮೂಲಕ ತಮ್ಮ ದೇಶಾಭಿಮಾನ ಮೆರೆದಿದ್ದಾರೆ. ಅಷ್ಟಕ್ಕೂ ಯಾರು ದೇಶಾಭಿಮಾನಿ ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

Latest Videos

ಎಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು?

ಕೊಪ್ಪಳ ಜಿಲ್ಲೆಯ ಗಂಗಾವತಿ ಅಂದರೆ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ. ಗಂಗಾವತಿ ಭತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಪ್ರದೇಶ. ಇಲ್ಲಿ ಬೆಳೆತುವ ಸೋನಾ ಮಸೂರಿ ಇಡೀ ಭಾರತದಲ್ಲಿಯೇ ಫೇಮಸ್. ‌ಅದೇ ರೀತಿಯಾಗಿ ಇದೀಗ ಗಂಗಾವತಿ ಮತ್ತೆ ಫೇಮಸ್ ಆಗಿದೆ. ಹೌದು, ಈ ಬಾರಿ ಫೇಮಸ್ ಆಗಿರುವುದು ಶಿವಾಜಿ ಮೂರ್ತಿಯಿಂದ. ಹೌದು ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್‌ನ ಮನೆಯೊಂದರ ಮನೆ ಮೇಲೆ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 

ಕೂಲಿಕಾರನಾದ ನನ್ನನ್ನೇ 3 ಬಾರಿ ಮಂತ್ರಿ ಮಾಡಿದ್ದು ಬಿಜೆಪಿ: ಕೋಟ ಶ್ರೀನಿವಾಸ ಪೂಜಾರಿ

ಯಾರು ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು?

ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್ ನ ಕಲಾವಿದ ಪ್ರಶಾಂತ್ ಚಿತ್ರಗಾರ್ ಎನ್ನುವರು ಪಕ್ಕಾ ಹಿಂದೂ ಕಾರ್ಯಕರ್ತ. ಜೊತೆಗೆ ಅಪ್ಪಟ ದೇಶಾಭಿಮಾನಿ ಜೊತೆಗೆ ಶಿವಾಜಿಯ ಕಟ್ಟಾ ಅಭಿಮಾನಿ. ಹೀಗಾಗಿ ಪ್ರಶಾಂತ್ ಚಿತ್ರಗಾರ್ ಅವರು ಮನೆಯೊಂದನ್ನು ನಿರ್ಮಿಸಿದ್ದು, ಆ ಮನೆಯ ಗೃಹಪ್ರವೇಶ ಇಂದು ಇತ್ತು. ಈ ಹಿನ್ನಲೆಯಲ್ಲಿ ಇಂದು ಅವರು ತಮ್ಮ ಮನೆಯ ಮೇಲೆ ಶಿವಾಜಿ ಮಹಾರಾಜ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಶಿವಾಜಿ ಮೂರ್ತಿ ನಿರ್ಮಾಣ ಆಗಿದ್ದು ಎಲ್ಲಿ?

ಮಹಾರಾಷ್ಟ್ರದ ಪುಣೆ ಪೂರ್ತಿಗಳ ತಯಾರಿಕೆಯ ಎತ್ತಿದ ಕೈ. ಹೀಗಾಗಿ ಇದೇ ಪುಣೆಯ ಮಂಗಲ ಸುಧಾ ಆರ್ಟ್ಸ್ ನಲ್ಲಿ ಈ ಶಿವಾಜಿಯವರ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಶಿವಾಜಿ ಮೂರ್ತಿಯು 6 ಫೀಟ್ ಎತ್ತರವಿದ್ದು, 1 ಲಕ್ಷ ರೂಪಾಯಿ ವೆಚ್ಚದಲ್ಲಿ ಫೈಬರ್ ನಿಂದ ನಿರ್ಮಾಣ ಮಾಡಲಾಗಿದೆ. ಈ ಮೂರ್ತಿಯನ್ನು ನಿರ್ಮಾಣ ಮಾಡಲು ಕಲಾವಿದರು ಒಂದು ತಿಂಗಳ ಸಮಯ ತೆಗೆದುಕೊಂಡಿದ್ದು, ಒಳ್ಳೇಯ ಶಿವಾಜಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದಾರೆ.

Koppal: ಹುಲಿಗೆಮ್ಮ ರಥೋತ್ಸವದಲ್ಲಿ 3 ಲಕ್ಷ ಭಕ್ತರು ಭಾಗಿ..!

ಮನೆಯಲ್ಲಿ ನಿರ್ಮಾಣ ಮಾಡಲು ಕಾರಣ

ಇನ್ನು ಪ್ರಶಾಂತ್ ಚಿತ್ರಗಾರ್ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರೂ ಗೋಡೆಗಳಿಗೆ ರಾಷ್ಟ್ರ ಭಕ್ತರ ಫೋಟೋಗಳನ್ನು ನೇತು ಹಾಕುತ್ತಾರೆ. ಆದರೆ ಅದನ್ನೇ ಮನೆ ಮೇಲೆ ನಿರ್ಮಾಣ ಮಾಡಿದರೆ ಹೇಗೆ ಎಂದು ಯೋಚಿಸಿದ್ದಾರೆ.‌ ಈ ವಿಷಯವನ್ನ ಅವರ ಮನೆಯವರ ಬಳಿ ಹಂಚಿಕೊಂಡಿದ್ದಾರೆ. ಆಗ ಮನೆಯವರೆಲ್ಲರೂ ತುಂಬಾ ಖುಷಿಯಿಂದ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇಂದು ಪ್ರಶಾಂತ್ ಚಿತ್ರಗಾರ್ ತಮ್ಮ ಮನೆಯೆ ಮೇಲೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಯಾರೆಲ್ಲ ಭಾಗವಹಿಸಿದ್ದರು

ಇನ್ನು ಪ್ರಶಾಂತ್ ಚಿತ್ರಗಾರ್ ಇಂದು ತಮ್ಮ ಗೃಹಪ್ರವೇಶದ ಜೊತೆಗೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಸಹ ಮಾಡಿದರು.‌ಈ ವೇಳೆ ಅನೇಕ ಹಿಂದೂಪರ ಮುಖಂಡರು ಸಹ ಆಗಮಿಸಿದ್ದರು.‌ಅದರಲ್ಲಿ ವಿಶೇಷವಾಗಿ  ಶ್ರೀರಾಮ‌ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಹಡಗಲಿ ಹಾಲಸ್ವಾಮಿಗಳು, ಹಿಂದೂ ಭಾಷಣಕಾರರಾದ ಚೈತ್ರಾ ಕುಂದಾಪುರ, ಹಾರಿಕಾ‌ ಮಂಜುನಾಥ್ ಸೇರಿದಂತೆ ಅನೇಕರು ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಒಟ್ಟಿನಲ್ಲಿ ಮನೆಯ ಮೇಲೆ ಟೆರಸ್ ಗಾರ್ಡನ್, ಜಿಮ್ ನಿರ್ಮಾಣ ಮಾಡುವ ಈ ಕಾಲದಲ್ಲಿ ರಾಷ್ಟ್ರಭಕ್ತ ಅಪ್ರತಿಮ ಶೂರ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ವಿಶೇಷವೇ ಸರಿ. ಈ ವಿಶೇಷತೆಗೆ ಕಾರಣವಾದ ಪ್ರಶಾಂತ್ ಚಿತ್ರಗಾರ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 

click me!