ವೈದ್ಯ ಸೀಟು ಪ್ರವೇಶ ಪರೀಕ್ಷೆ ರಾಜ್ಯಗಳೇ ನಡೆಸಲಿ: ಸಚಿವ ಪರಮೇಶ್ವರ್‌

By Kannadaprabha News  |  First Published Jun 28, 2024, 5:12 PM IST

ನೀಟ್‌ ಬದಲು ರಾಜ್ಯಗಳಲ್ಲೇ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಈ ಹಿಂದೆ ಇದ್ದಂತೆ ಆಯಾ ರಾಜ್ಯ ಸರ್ಕಾರಗಳಿಗೇ ಕೇಂದ್ರ ವಹಿಸಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಆಗ್ರಹಿಸಿದ್ದಾರೆ. 


ಬೆಂಗಳೂರು (ಜೂ.28): ನೀಟ್‌ ಬದಲು ರಾಜ್ಯಗಳಲ್ಲೇ ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಈ ಹಿಂದೆ ಇದ್ದಂತೆ ಆಯಾ ರಾಜ್ಯ ಸರ್ಕಾರಗಳಿಗೇ ಕೇಂದ್ರ ವಹಿಸಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನಾನು ಕೆಲಸ‌ ಮಾಡಿರುವುದರಿಂದ ನೀಟ್‌ನ ಸಾಧಕ-ಬಾಧಕಗಳ ಬಗ್ಗೆ ಗೊತ್ತಿದೆ. 11 ನ್ಯಾಯಾಧೀಶರ ಜಡ್ಜ್‌‌ಮೆಂಟ್ ಬದಿಗೊತ್ತಿ ನೀಟ್ ಮಾಡಿದ್ದಾರೆ‌. 

ಅವರು ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಮಕ್ಕಳಿಗೆ ಸರಿಯಾಗಿ, ಸುಲಭವಾಗಿ ಸೀಟು ಸಿಗುವ ರೀತಿಯಲ್ಲಿ ಮಾಡಬೇಕಲ್ಲವೇ? ನೀಟ್‌ ಪರೀಕ್ಷಾ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಾಗಾಗಿ ವೈದ್ಯ ಕೋರ್ಸುಗಳ ಪ್ರವೇಶ ಪರೀಕ್ಷೆಯನ್ನು ನೀಟ್‌ ಬದಲು ಆಯಾ ರಾಜ್ಯಗಳಿಗೇ ವಹಿಸುವುದು ಸೂಕ್ತ ಎಂದರು. ನಮ್ಮ ರಾಜ್ಯದಲ್ಲಿ ನಡೆಸುವ ಸಿಇಟಿ ಮಾದರಿಯಾಗಿತ್ತು. ಯಾವ ತೊಂದರೆಯೂ ಆಗುತ್ತಿರಲಿಲ್ಲ. ಸ್ಥಳೀಯ ವಿದ್ಯಾರ್ಥಿಗಳಿಗೂ ಹೆಚ್ಚಿನ ಅವಕಾಶಗಳು ಸಿಗುತ್ತಿತ್ತು ಎಂದರು.

Tap to resize

Latest Videos

ದರ್ಶನ್​ ಅಭಿಮಾನಿಗಳಿಂದ ಬ್ಯಾಡ್​ ಕಮೆಂಟ್ಸ್ ಟಾರ್ಚರ್: ಗುರು ನಾನ್‌ ಇನ್ನೂ ಚಿಕ್ಕವಳು ಎಂದ ಸೋನು ಗೌಡ!

ಜಮೀನು ಉಳುಮೆ ಮಾಡಿದ ಪರಮೇಶ್ವರ್‌: ಪ್ರತಿ ವರ್ಷ ಪ್ರಗತಿ ಪರ ರೈತರಿಗೆ ಉತ್ತಮವಾದ ಬೀಜ, ಗೊಬ್ಬರವನ್ನು ವಿತರಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಬೀಜವನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ತಾಲೂಕಿನಲ್ಲಿ ಜಿಪಂ, ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಲ್ಲೇಶಪುರದ ರೈತ ಚನ್ನಪ್ಪನವರ ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಜಮೀನು ಉಳುಮೆ ಮಾಡಿ ಮುಂಗಾರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ 3.5 ಲಕ್ಷ ಹೇಕ್ಟೆರ್ ಭೂಮಿ ಕೃಷಿಗೆ ಯೋಗ್ಯವಾಗಿದ್ದು, ಈಗ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೋಡಗಿ ಬೆಳೆ ಬೆಳೆದು ಸಮಾಜದ ಹಸಿವನ್ನು ನೀಗಿಸಿಬೇಕಿದೆ. ಕೃಷಿ ಉತ್ತಮ ಲಾಭದಾಯಕ ಕೆಲಸವಲ್ಲದಿದ್ದರೂ ಜೀವ ಸಂಕುಲದ ಉಳಿವಿಗೆ ಅನಿವಾರ್ಯವಾಗಿದೆ. ಕೃಷಿಗೆ ಹಿನ್ನೆಡೆಯಾಗುತ್ತಿರುವುದು ಕೃಷಿ ಕುಟುಂಬದಲ್ಲಿ ಓದಿದ ವಿದ್ಯಾರ್ಥಿಗಳು ದುಡಿಮೆಗೆ ನಗರ ಸೇರುತ್ತಿದ್ದಾರೆ. ಯುವಕರು ಅದೇ ಹೊರಗಡೆಯ ಕೆಲಸದ ಶ್ರಮ ಕೃಷಿ ಕಾರ್ಯದ ಮೇಲೆ ಹಾಕಿದರೆ ಇನ್ನು ಲಾಭ ಗಳಿಸಬಹುದು ಎಂದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಕೃಷಿ ಇಲಾಖೆಯ ಜೆ.ಡಿ. ರಮೇಶ್, ಅಶೋಕ್, ಚಂದ್ರಕುಮಾರ, ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ತಾಲೂಕು ಕೃಷಿ ಇಲಾಖೆ ಅಧಿಕಾರಿ ರುದ್ರಪ್ಪ, ವಿಜಯನರಸಿಂಹ ಹಾಜರಿದ್ದರು.

ದಲಿತರ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ: ಆರ್​.ಅಶೋಕ್

ಮದ್ಯವರ್ತಿಗಳಿಂದ ರೈತರಿಗೆ ತೊಂದರೆ: ಮದ್ಯವರ್ತಿಗಳಿಂದ ಇತ್ತೀಚೆಗೆ ರೈತರಿಗೆ ತೊಂದರೆಯಾಗುತ್ತಿದೆ. ರೈತರು ಬೆಳೆದ ಆಹಾರ ಪದಾರ್ಥಗಳನ್ನು ಮದ್ಯವರ್ತಿಗಳು ಕಡಿಮೆ ಬೆಲೆಗೆ ತೆಗೆದುಕೊಂಡು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಇದರ ಅನುಭವ ನೂರಾರು ಕ್ವಿಂಟಲ್‌ರಾಗಿ ಬೆಳೆದಾಗ ನನಗೂ ಆಗಿದೆ. ಇದನ್ನು ಎಪಿಎಂಸಿಯಲ್ಲಿ ತಪ್ಪಿಸಲು ವಿಶೇಷ ಕಾಯ್ದೆ ತರಬೇಕಿದೆ. ಅಧಿಕಾರಿಗಳು ರೈತರಿಗೆ ಬೆಳೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಅತಿವೃಷ್ಟಿ, ಅನಾವೃಷ್ಟಿಯದಾಗ ರೈತರಿಗೆ ನೆರವಾಗುತ್ತದೆ ಎಂದು ಹೇಳಿದರು.

click me!