14 ಜಿಲ್ಲೆಗಳಿಂದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪ್ರತಿವರ್ಷ 30000 ಸಾವಿರ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅದರಲ್ಲಿ ಸುಮಾರು 18,000 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಗೆ ಪ್ರವೇಶವನ್ನ ಪಡೆದುಕೊಳ್ಳುತ್ತಾರೆ.
ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜೂ.28): ವಿದ್ಯಾಕಾಶಿ ಧಾರವಾಡ ಜಿಲ್ಲೆ ಸದ್ಯ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕಾಶಿಯಾಗಿದೆ ಧಾರವಾಡದಲ್ಲಿ ವಿದ್ಯಾಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಲು ಕೊಪ್ಪಳ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಗುಲ್ಬರ್ಗಾ, ಬಿದರ, ಸೇರಿದಂತೆ ಉತ್ತರ ಕರ್ನಾಟಕದ 14 ಜಿಲ್ಲೆಗಳಿಂದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪ್ರತಿವರ್ಷ 30000 ಸಾವಿರ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅದರಲ್ಲಿ ಸುಮಾರು 18,000 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಗೆ ಪ್ರವೇಶವನ್ನ ಪಡೆದುಕೊಳ್ಳುತ್ತಾರೆ.
undefined
ಜಿಲ್ಲೆಯಲ್ಲಿ 132 ಹಾಸ್ಟೆಲ್ ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ವಿದ್ಯಾಭ್ಯಾಸಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಸೂಕ್ತವಾದ ಸೌಲಭ್ಯವನ್ನ ಕೊಡಲು ಜಿಲ್ಲಾಡಳಿತದಿಂದ ಆಗುತ್ತಿಲ್ಲ ಅನ್ನೋ ಮಾತುಗಳನ್ನ ಸ್ಥಳಿಯರು ಹೇಳುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 132 ಹಾಸ್ಟೆಲ್ ಗಳು ಇದ್ದು ಅದರಲ್ಲಿ 54 ಹಾಸ್ಟೆಲ್ ಗಳಿಗೆ ಸ್ವಂತ ಜಾಗವಿಲ್ಲದ ಆ ಹಾಸ್ಟೆಲ್ ಗಳನ್ನ ಬಾಡಿಗೆ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಬರೋಬ್ಬರಿ 54 ಹಾಸ್ಟೆಲ್ ಗಳಿಗೆ ಪ್ರತಿ ವರ್ಷಕ್ಕೆ 6 ಕೋಟಿ ಹಣವನ್ನ ಸರಕಾರ ಬಾಡಿಗೆ ಕೊಡುತ್ತಿದೆ.
ಕಾಂಗ್ರೆಸ್ ಮಾಡಿದ ತಪ್ಪಿಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಲಿ: ಆರ್.ಅಶೋಕ್
ಆದರೆ ಕಳೆದ 4 ವರ್ಷದಿಂದ 54 ಹಾಸ್ಟೆಲ್ ಗಳಿಗೆ 25 ಕೂಟಿಗೂ ಹಣವನ್ನ ಬಾಡಿಗೆ ಕೊಡುತ್ತಿದೆ ಸರಕಾರ. ಸದ್ಯ ಆ ಎಲ್ಲ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡ, ಮತ್ತು ಜಾಗವನ್ನ ಸರಕಾರ ಕೊಟ್ಟಿದ್ದೆ ಆದ್ರೆ ಪ್ರತಿ ವರ್ಷ ಬಾಡಿಗೆ ಕಟ್ಟೋದು ನಿಲ್ಲುತ್ತದೆ. ಇನ್ನು ಜಿಲ್ಲೆಯ 132 ಹಾಸ್ಟೆಲ್ ಗಳಲ್ಲಿ ಯಾವ ಯಾವ ಇಲಾಖೆಯಿಂದ ಎಷ್ಟೆಷ್ಟು ಹಾಸ್ಟೆಲ್ ಗಳು ಇವೆ ಎಂಬುದನ್ನ ನೋಡೋದಾದ್ರೆ ಅದರಲ್ಲಿ ಬಿಸಿಎಂ ಹಾಸ್ಟೆಲ್ 92 ಹಾಸ್ಟೆಲ್ ಗಳು ಇದ್ರೆ ಅದರಲ್ಲಿ 44 ಬಾಡಿಗೆಯಲ್ಲಿ ನಡೆಯುತ್ತಿವೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 34 ಹಾಸ್ಟೆಲ್ ಗಳು, ಅಲ್ಪ ಸಂಖ್ಯಾತ ಇಲಾಖೆಯಿಂದ 6 ಹಾಸ್ಟೆಲ್ ಗಳು ಹಾಗೂ ಮೊರಾರ್ಜಿ ದೇಸಾಯಿ ಯಿಂದ ,12 ಹಾಸ್ಟೆಲ್ ಗಳಿದ್ದು ಅದರಲ್ಲಿ ಸ್ವಂತ ಜಾಗವಿಲ್ಲದೆ ಹಾಸ್ಟೆಲ್ ಬಾಡಿಗೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿವೆ..
ಇದರಲ್ಲಿ ಬಾಡಿಗೆ ಇರುವ 54 ಕಟ್ಟಡಗೆ ಕೋಟಿ ಕೋಟಿ ಹಣ ವೆಚ್ಚ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆ ಸದ್ಯ ಸ್ವಂತ ನಿವೇಶನಗಳನ್ನ ನೀಡಿ ಸ್ವಂತ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಎಂದು ಸ್ಥಳಿಯರು ಆಗ್ರಹ ಮಾಡಿದ್ದಾರೆ.ಇನ್ನು ಪ್ರಸಕ್ತ ವರ್ಷದಲ್ಲಿ 15 ಬಿಸಿಎಂ ಹಾಸ್ಟೆಲ್ ಗಳು ಬಿಡುಗಡೆಯಾಗಿದ್ದು ಆ ಹಾಸ್ಟೆಲ್ ಗಳನ್ನ ಸಹ ಬಾಡಿಗೆಯಲ್ಲಿ ನಡೆಸಲು ಸರಕಾರ ಮತ್ತು ಜಿಲ್ಲಾಡಳಿತ ಮುಂದಾಗಿದೆ.ಆದರೆ ಪ್ರತಿ ವರ್ಷವೂ ೬ ಕೋಟಿ ಯಷ್ಡು ಬಾಡಿಗೆಯನ್ನ ಕಟ್ಟುವ ಬದಲು ಸ್ವಂತ ಜಾಗವನ್ನ ನೀಡಿ ಸರಕಾರಕ್ಕೆ ಆಗುವ ಹೊರೆಯನ್ನ ಕಡಿಮೆ ಮಾಡಬೇಕು ಎಂಬುದು ಜನಸಾಮಾನ್ಯರ ಅಳಲಾಗಿದೆ.
ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ: ಸಚಿವ ಚಲುವರಾಯಸ್ವಾಮಿ
ಸರಕಾರ ಹಾಸ್ಟೆಲ್ ಗಳನ್ನ ಬಿಡುಗಡೆ ಮಾಡುವುದಲ್ಲದೆ ಆ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಡಡವನ್ನ ನೀಡಲು ಆಸಕ್ತಿಯನ್ನ ಮಾಡಬೇಕಿದೆ..ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಶಾಸಕ ವಿನಯ ಕುಲಕರ್ಣಿ ಟವರ ಆಸಕ್ತಿಯಿಂದ 15 ಬಿಸಿಎಂ ಹಾಸ್ಟೆಲ್ ಗಳು ಈ ವರ್ಷ ಪ್ರಸಕ್ತವರ್ಷದಿಂದ ನಡೆಸಬೇಕು ಎಂದು ಆದೇಶವನ್ನ ಮಾಡಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ. ಜೊತೆಗೆ ಈ ನಾಯಕರು 54 ,ಹಾಸ್ಟೆಲ್ ಗಳನ್ನ ಬಾಡಿಗೆಯಿಂದ ಮುಕ್ತ ಗೊಳಿಸಿ ಆದಷ್ಟು ಬೇಗ ಸ್ವಂತ ಜಾಗವನ್ನ ಕೊಡಿಸಿ ಸ್ವಂತ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಎಂಬುದು ಏಷ್ಯಾ ನೆಟ್ ಸುವರ್ಣ ನ್ಯೂಸ್ ನ ಕಳಕಳಿ.