ಉಡುಪಿ: ಪಿಟ್ಸ್‌ ಬಂದರೂ ಸಮಯಪ್ರಜ್ಞೆ ಮೆರೆದು ಅವಘಡ ತಪ್ಪಿಸಿದ ಬಸ್‌ ಚಾಲಕ..!

By Kannadaprabha News  |  First Published Jun 28, 2024, 12:17 PM IST

ಪರ್ಕಳ ಕೆನರಾ ಬ್ಯಾಂಕ್ ಬಳಿ ತಿರುವಿನಲ್ಲಿ, ಉಡುಪಿಯಿಂದ ಭೈರಂಜೆಗೆ ಹೋಗುತ್ತಿದ್ದ ಬಸ್‌ನ ಚಾಲಕನ ಬಾಯಿಂದ ನೊರೆ ಹೊರಗೆ ಬಂದು, ಪಿಟ್ಸ್ ಕಾಣಿಸಿಕೊಂಡಿತು. ಇದರಿಂದ ಚಾಲಕನ ಕೈಯಿಂದ ಬಸ್‌ ನಿಯಂತ್ರಣ ತಪ್ಪಿತು. ಏರಿನಲ್ಲಿ ಹತ್ತುತ್ತಿದ್ದ ಬಸ್‌ ತಕ್ಷಣ ಹಿಮ್ಮುಖ ಚಲಿಸಲಾರಂಭಿಸಿತು. ಈ ಸಂದರ್ಭದಲ್ಲಿ ತನ್ನ ಅಸ್ವಸ್ಥತೆಯ ನಡುವೆಯೂ ಕಷ್ಟಪಟ್ಟು ಹಿಮ್ಮುಖ ಚಲಿಸುತ್ತಿದ್ದ ಬಸ್ಸನ್ನು ಬಲಕ್ಕೆ ತಿರುಗಿಸಿ ಚರಂಡಿಗೆ ಇಳಿಯುವಂತೆ ಮಾಡಿದರು.

ಉಡುಪಿ(ಜೂ.28): ಚಾಲನೆ ವೇಳೆಯೇ ಪಿಟ್ಸ್‌ ಬಂದರೂ ಸಮಯಪ್ರಜ್ಞೆ ಮೆರೆದು ಬಸ್‌ ಚಾಲಕನೊಬ್ಬ ಸಂಭವಿಸಬಹುದಾಗಿದ್ದ ಅವಘಡ ತಪ್ಪಿಸಿರುವ ಘಟನೆ ಗುರುವಾರ ಸಂಜೆ ಉಡುಪಿಯ ಪರ್ಕಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪರ್ಕಳ ಕೆನರಾ ಬ್ಯಾಂಕ್ ಬಳಿ ತಿರುವಿನಲ್ಲಿ, ಉಡುಪಿಯಿಂದ ಭೈರಂಜೆಗೆ ಹೋಗುತ್ತಿದ್ದ ಬಸ್‌ನ ಚಾಲಕನ ಬಾಯಿಂದ ನೊರೆ ಹೊರಗೆ ಬಂದು, ಪಿಟ್ಸ್ ಕಾಣಿಸಿಕೊಂಡಿತು. ಇದರಿಂದ ಚಾಲಕನ ಕೈಯಿಂದ ಬಸ್‌ ನಿಯಂತ್ರಣ ತಪ್ಪಿತು. ಏರಿನಲ್ಲಿ ಹತ್ತುತ್ತಿದ್ದ ಬಸ್‌ ತಕ್ಷಣ ಹಿಮ್ಮುಖ ಚಲಿಸಲಾರಂಭಿಸಿತು. ಈ ಸಂದರ್ಭದಲ್ಲಿ ತನ್ನ ಅಸ್ವಸ್ಥತೆಯ ನಡುವೆಯೂ ಕಷ್ಟಪಟ್ಟು ಹಿಮ್ಮುಖ ಚಲಿಸುತ್ತಿದ್ದ ಬಸ್ಸನ್ನು ಬಲಕ್ಕೆ ತಿರುಗಿಸಿ ಚರಂಡಿಗೆ ಇಳಿಯುವಂತೆ ಮಾಡಿದರು.

Latest Videos

undefined

ಉಡುಪಿ: ಕುಡಿತಕ್ಕಾಗಿ 6500 ರು. ಮೌಲ್ಯದ ಮೀನು ಕದ್ದು 140 ರು.ಗೆ ಮಾರಿದ ಭೂಪ..!

ಇದರಿಂದ ಗಾಬರಿಗೊಂಡ ಕೆಲವು ಪ್ರಯಾಣಿಕರು ಬಸ್‌ನಿಂದ ಹೊರಗೆ ಧುಮುಕಿದರು. ನಂತರ ಚಾಲಕನನ್ನು ಆಟೋವೊಂದರಲ್ಲಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಬಸ್ಸನ್ನು ಮೇಲಕ್ಕೆ ಎತ್ತಿದರು. ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

click me!