ತಮಿಳುನಾಡಿಗೆ ದಿಢೀರ್ ಕಾವೇರಿ ನೀರು ಹರಿಸಿದ ಸರ್ಕಾರ, ನದಿಯಲ್ಲಿ ಸಿಲುಕಿದ 6 ರಾಸುಗಳು

Published : Sep 11, 2026, 10:04 AM IST
Cattle Stranded in River After Sudden Cauvery Water Release

ಸಾರಾಂಶ

ಕರ್ನಾಟಕದಲ್ಲಿ ಮಳೆ ಕೊರತೆ ನಡುವೆ ಪ್ರಾಧಿಕಾರ ಆದೇಶ ರಾಜ್ಯದ ಸಂಕಷ್ಟ ಹೆಚ್ಚಿಸಿದೆ. ಇದರ ನಡುವೆ ನಿನ್ನ ಸಂಜೆ ದಿಢೀರ್ ತಮಿಳುನಾಡಿಗೆ ಕಾವೇರು ನೀರು ಹರಿಸಲಾಗಿದ್ದು, ನದಿಯಲ್ಲಿ 6 ರಾಸುಗಳು ಸಂಕಷ್ಟ ಸಿಲುಕಿದ ಘಟನೆ ನಡೆದಿದೆ.

ಮಂಡ್ಯ (ಸೆ.11) ಕರ್ನಾಟಕ ಹಾಗೂ ಕಾವೇರಿ ನಡುವಿನ ನದಿ ನೀರು ವಿವಾದ ಈ ಬಾರಿ ತೀವ್ರಗೊಂಡಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಳೆ ಕೊರತೆ, ಬರಗಾಲ ಪರಿಸ್ಥಿತಿಯಲ್ಲಿ ರಾಜ್ಯ ನೀರಿನ ಕೊರತೆ ಎದುರಿಸುತ್ತಿದೆ. ಇದರ ನಡುವೆ ಪ್ರಧಿಕಾರ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿದೆ. ಮತ್ತೊಂದೆಡೆ ರೈತರು, ಕನ್ನಡಪರ ಸಂಘಟನೆಗಳು ಹೋರಾಟ ತೀವ್ರಗೊಳಿಸುತ್ತಿದೆ. ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರ ನಿನ್ನೆ (ಸೆ.10) ದಿಢೀರ್ ತಮಿಳುನಾಡಿಗೆ ನೀರು ಹರಿಸಿದೆ. ಇದರ ಪರಿಣಾಮ ಹುಲ್ಲು ಮೇಯುತ್ತಿದ್ದ ರಾಸುಗಳು ನೀರಿನಲ್ಲಿ ಸಿಲುಕಿದ ಘಟನೆ ನಡೆದಿದೆ.

8 ಸಾವಿರ ಕ್ಯೂಸೆಕ್ ನೀರು

ಕಾವೇರಿ ನದಿಯಲ್ಲಿ ನಿನ್ನೆ ಸಂಜೆ ಇದಕ್ಕಿದ್ದಂತೆ ನೀರು ಏರಿಕೆಯಾಗಿದೆ. ನದಿ ನೀರಿನ ಮಟ್ಟದ ಅಂದಾಜಿನಲ್ಲಿ ನಡು ಗುಡ್ಡೆ ಪ್ರದೇಶಗಳಲ್ಲಿ ಹುಲ್ಲು ಮೇಯುತ್ತಿದ್ದ ರಾಸುಗಳು ದಿಢೀರ್ ನೀರು ಹರಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಾಸುಗಳು ಮರಳಿ ಬರಲಾಗದೇ ಕಂಗಾಲಾಗಿದೆ. ಬೆಳಗ್ಗೆ 3 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದ. ಆದರೆ ಸಂದೆ ವೇಳೆ 8 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಏಕಾಏಕಿ 5 ಸಾವಿರ ಕ್ಯೂಸೆಕ್ ನೀರು ಏರಿಕೆಯಾಗಿ ರಾಸುಗಳು ಸಂಕಷ್ಟಕ್ಕೆ ಸಿಲುಕಿತ್ತು.

ರಾತ್ರಿ ಇಡೀ ರಾಸುಗಳ ರಕ್ಷಣೆಗೆ ಕಾರ್ಯಾಚರಣೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿಯ ಕಾವೇರಿ ನದಿಯ ನಡುಗುಡ್ಡೆಯಲ್ಲಿ ಸಿಲುಕಿಕೊಂಡಿದ್ದ ರಾಸುಗಳ ರಕ್ಷಣೆಗೆ ರಾತ್ರಿ ಇಡೀ ಕಾರ್ಯಾಚರಣೆ ಮಾಡಲಾಗಿದೆ. ಗಂಜಾಂನ ಶಿವರಾಜು ಎಂಬುವವರಿಗೆ ಸೇರಿದ ರಾಸುಗಳು ಈ ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಬಳಿಕ ಕಾರ್ಯಾಚರಣೆ ನಡೆಸಿದೆ.ಸ್ಥಳೀಯರು ಸಾಥ್ ನೀಡಿದ್ದಾರೆ. ಸತತ ಕಾರ್ಯಾಚರಣೆ ಬಳಿಕ 6 ರಾಸುಗಳನ್ನು ಯಶಸ್ವಿಯಾಗಿ ಮರಳಿ ತರಲಾಗಿದೆ.

ತಮಿಳುನಾಡಿಗೆ ನಿನ್ನ ಸಂಜೆಯಿಂದ 8 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣಾಗಿದೆ. ಪ್ರಾಧಿಕಾರ ಆದೇಶ ಪಾಲಿಸಲು ಕಾವೇರಿಯಲ್ಲಿ ನೀರು ಬತ್ತಿಹೋಗುತ್ತಿದೆ. ಮಳೆ ಕೊರತೆಯಿಂದ ಕರ್ನಾಟಕ ಬಹುತೇಕ ಜಲಾಶಗಳಲ್ಲಿ ನೀರಿನ ಕೊರತೆ ಇದೆ. ಈಗಲೇ ಹಲವು ಭಾಗದಲ್ಲಿ ನೀರಿನ ಕೊರತೆ ಎದುರಾಗಿದೆ. ಮಂಡ್ಯ ಸೇರಿದಂತೆ ಕಾವೇರಿ ಭಾಗದ ರೈತರಿಗೆ ಬೆಳೆ ಬೆಳೆಯಲು ನಿರ್ಬಂಧವಿದಿಸಿದೆ. ಆದರೆ ತಮಿಳುನಾಡಿಗೆ ಯಥೇಚ್ಚವಾಗಿ ನೀರು ಹರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.

PREV
Read more Articles on
click me!

Recommended Stories

ಬೆಂಗಳೂರು-ಮಂಗಳೂರು ವಂದೇ ಭಾರತ್ 2ನೇ ಟ್ರಯಲ್ ರನ್ ಯಶಸ್ವಿ: ಪುತ್ತೂರಲ್ಲಿ ನಿಲ್ಲದೆ ನಿರಾಸೆ ಮೂಡಿಸಿದ ರೈಲು!
ಬಿಎಂಟಿಸಿ ಬಸ್‌ ಸ್ಟೇರಿಂಗ್ ಕಿತ್ಕೊಂಡು ಬಂತು ಡ್ರೈವರ್ ಕೈಗೆ, ಪ್ರಯಾಣಿಕರ ಜೀವ ಬಂದಿತ್ತು ಬಾಯಿಗೆ!