ಕೊರೋನಾ ಕಾಟದಿಂದ ಒಮ್ಮೆ ರಸ್ತೆಗಿಳಿದಿದ್ದ ಖಾಸಗಿ ಬಸ್‌ಗಳೂ ಇದೀಗ ಸೇವೆ ನಿಲ್ಲಿಸಿದೆ. ಇಂದು ರಾಜ್ಯ ಮಟ್ಟದ ಬಸ್ ಮಾಲೀಕರ ಸಭೆ ನಡೆದಿದ್ದು, ಮತ್ತೆ ಬಸ್ ರಸ್ತೆಗಿಳಿಸಲು ಗ್ರೀನ್ ಸಿಗ್ನ್ ದೊರೆಯುವ ಸಾಧ್ಯತೆ ಇದೆ.
ಚಿಕ್ಕಮಗಳೂರು(ಜೂ.28): ಕೊರೋನಾ ಕಾಟದಿಂದ ಒಮ್ಮೆ ರಸ್ತೆಗಿಳಿದಿದ್ದ ಖಾಸಗಿ ಬಸ್‌ಗಳೂ ಇದೀಗ ಸೇವೆ ನಿಲ್ಲಿಸಿದೆ. ಇಂದು ರಾಜ್ಯ ಮಟ್ಟದ ಬಸ್ ಮಾಲೀಕರ ಸಭೆ ನಡೆದಿದ್ದು, ಮತ್ತೆ ಬಸ್ ರಸ್ತೆಗಿಳಿಸಲು ಗ್ರೀನ್ ಸಿಗ್ನ್ ದೊರೆಯುವ ಸಾಧ್ಯತೆ ಇದೆ.
ಖಾಸಗಿ ಬಸ್‌ಗಳ ಸಂಚಾರಕ್ಕೆ ಇಂದು ಗ್ರೀನ್ ಸಿಗ್ನಲ್ ಸಿಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯಮಟ್ಟದ ಖಾಸಗಿ ಬಸ್ ಗಳ ಮಾಲೀಕರ ಮಹತ್ವದ ಸಭೆ ನಡೆದಿದ್ದು, ಚಿಕ್ಕಮಗಳೂರಿನ ಪೈ ಕಲ್ಯಾಣ ಮಂಟಪದಲ್ಲಿ ಸಭೆ ನಡೆದಿದೆ.
ಕಲಬುರಗಿ: ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, ಸೇತುವೆ ಕುಸಿದು, ರಸ್ತೆ ಮುಳುಗಡೆ
ಸಭೆಯಲ್ಲಿ 18 ಜಿಲ್ಲೆಗಳ ಖಾಸಗಿ ಬಸ್ ಗಳ ಮಾಲೀಕರು ಭಾಗಿಯಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಲಾಗುತ್ತಿದೆ. ಬಸ್ ಸಂಚಾರ, ಡೀಸೆಲ್ ಏರಿಕೆ , ಟ್ಯಾಕ್ಸ್ ವಿನಾಯಿತಿ ಸೇರಿದಂತೆ ಮಹತ್ವದ ವಿಚಾರಗಳು ಚರ್ಚೆಯಾಗಿವೆ.
ಗ್ರಾಮೀಣ ಭಾಗದಲ್ಲಿ ಬಸ್ ಗಳ ಸಂಚಾರ ಸೇರಿದಂತೆ ಬಸ್ ದರ ಏರಿಕೆ ವಿಚಾರದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಲಾಕ್ ಡೌನ್ ನಂತ್ರ ಖಾಸಗಿ ಬಸ್ ಸಂಚಾರ ಸ್ಥಗಿತ ಗೊಳಿಸಿತ್ತು. ಇದರಿಂದ ಗ್ರಾಮೀಣ ಭಾಗದಲ್ಲಿ ಜನರ ಸಂಚಾರಕ್ಕೆ ಈಗಲೂ ತೊಂದರೆಯಾಗುತ್ತಿದೆ.