ರೈತರಿಗೆ ಸಾಲದ ಮಿತಿ ಹೆಚ್ಚಿಸಲು ಚಿಂತನೆ: ಸಚಿವ ಸೋಮಶೇಖರ್‌

By Kannadaprabha NewsFirst Published Jun 28, 2020, 1:28 PM IST
Highlights

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್‌ ವಿತರಿಸಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌| ರಾಜ್ಯದಲ್ಲಿನ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ನೀಡಲು 14 ಸಾವಿರ ಕೋಟಿ ವಿನಿಯೋಗ| ರೈತರಿಗೆ ಹೊಸ ಸಾಲ ನೀಡಿ ಸಾಲದ ಮಿತಿ ಹೆಚ್ಚಿಸಬೇಕಾದರೆ ಇನ್ನೂ 6 ಸಾವಿರ ಕೋಟಿ ಅಗತ್ಯವಿದೆ|

ಬೀದರ್‌(ಜೂ.28): ರೈತರಿಗೆ ಹೊಸ ಸಾಲ ನೀಡಲು ಸಾಲದ ಮಿತಿ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್‌ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲ ನೀಡಲು 14 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.

ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಗಟ್ಟಿಗಿತ್ತಿ ಮಹಿಳೆ..!

ರೈತರಿಗೆ ಹೊಸ ಸಾಲ ನೀಡುವಂತೆ ಮಾಜಿ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ್‌ ಮನವಿ ಮಾಡಿದ್ದಾರೆ. ರೈತರಿಗೆ ಹೊಸ ಸಾಲ ನೀಡಿ ಸಾಲದ ಮಿತಿ ಹೆಚ್ಚಿಸಬೇಕಾದರೆ ಇನ್ನೂ 6 ಸಾವಿರ ಕೋಟಿ ಅಗತ್ಯವಿದೆ. ಈ ಕುರಿತು ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.
 

click me!