ಪ್ರವೀಣ್‌ ಕೊಲೆ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ: ಪ್ರಮೋದ್‌ ಮುತಾಲಿಕ್‌

By Kannadaprabha News  |  First Published Aug 17, 2022, 6:20 AM IST

ರಾಜ್ಯದಲ್ಲಿ ಹಿಂದೂಗಳ ಕೊಲೆಗಳಾಗುತ್ತಿದ್ದು ಕಾರಣವಾದ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ಬ್ಯಾನ್‌ ಮಾಡಬೇಕೆಂದು ಇನ್ನೆಷ್ಟು ಹೋರಾಟ ಮಾಡಬೇಕು: ಮುತಾಲಿಕ್‌


ಧಾರವಾಡ(ಆ.17): ಮಂಗಳೂರಿನ ಪ್ರವೀಣ ಕೊಲೆಯ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದು ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣದಿಂದ ಗೊತ್ತಾಗುತ್ತಿದೆ. ಹಿಂದೂಗಳ ಪರ ಎಂದು ಅಧಿಕಾರಕ್ಕೆ ಬಂದರೂ ಹಿಂದೂಗಳ ಮೇಲೆ ನಿರಂತರ ಹತ್ಯೆಯಾಗುತ್ತಿವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಇಂಟಲಿಜೆನ್ಸ್‌ ವಿಫಲತೆಯಿಂದ ಈ ರೀತಿಯ ಕೃತ್ಯಗಳಾಗುತ್ತಿವೆ. ಸಾರ್ವಜನಿಕ ಗಣೇಶ ಉತ್ಸವ ಮಾಡುತ್ತಿರುವಾಗಿನಿಂದಲೂ ಇಂತಹ ಘಟನೆ ನಡೆಯುತ್ತಿದೆ. ಹರ ಘರ್‌ ತಿರಂಗಾ ರಾಜ್ಯದಲ್ಲಿ ಯಶಸ್ವಿಯಾಗಿದೆ. ದೇಶಪ್ರೇಮವನ್ನು ತೋರಿಸಿದ್ದಾರೆ. ಇದು ಕೆಲ ಮುಸ್ಲಿಂರಿಗೆ ಆಗಿ ಬಂದಿಲ್ಲ. ಇದಕ್ಕೆ ಕಪ್ಪು ಚುಕ್ಕೆ ತರಬೇಕೆಂದು ಹೀಗೆಲ್ಲಾ ಮಾಡುತ್ತಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಅವರೆಲ್ಲ ಚಾಕುವನ್ನು ಇಟ್ಟುಕೊಂಡೆ ಓಡಾಡುತ್ತಾರೆ ಎಂದರು.

Latest Videos

undefined

ಸಿಎಂ ಬದಲಾವಣೆ ಯಾವುದೇ ಚಿಂತನೆಯಿಲ್ಲ: ಕೇಂದ್ರ ಸಚಿವ ಜೋಶಿ

ಇನ್ನು, ವೀರ ಸಾರ್ವಕರ ದೇಶಭಕ್ತ. ಕ್ರಾಂತಿಕಾರ. ಅವರ ಬಗ್ಗೆ ಮಾತನಾಡುವರ ಮೇಲೆ ಕ್ರಮವಾಗಬೇಕು. ಸಾರ್ವಕರ ಭಾವಚಿತ್ರದ ಜೊತೆಗೆ ಎರಡು ದ್ವಜಗಳನ್ನು ಕೆಳಗೆ ಎಳೆದು ಹಾಕಿದ್ದಾರೆ. ದ್ವಜಕ್ಕೆ ಅವಮಾನ ಮಾಡಲಾಗಿದ್ದು, ಸರ್ಕಾರದ ದುರ್ಬಲತೆಯಿಂದ ಹೀಗೆಲ್ಲಾ ಆಗುತ್ತಿದ್ದು ಹಿಂದೂ ಸಮಾಜ ಜಾಗೃತವಾಗಬೇಕಿದೆ. ಬೀದಿ ಬೀದಿಗಳಲ್ಲಿ ಇವರಿಗೆ ಉತ್ತರ ಕೊಡುವ ಪರಿಸ್ಥಿತಿ ಬರಬೇಕು. ಇಲ್ಲದಿದ್ದರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಎಚ್ಚರಿಸಿದರು.

ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್‌ ಆಗಲಿ

ರಾಜ್ಯದಲ್ಲಿ ಹಿಂದೂಗಳ ಕೊಲೆಗಳಾಗುತ್ತಿದ್ದು ಕಾರಣವಾದ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ಬ್ಯಾನ್‌ ಮಾಡಬೇಕೆಂದು ಇನ್ನೆಷ್ಟು ಹೋರಾಟ ಮಾಡಬೇಕು. ಬಿಜೆಪಿ ವಿಪಕ್ಷದಲ್ಲಿದ್ದಾಗ ಬ್ಯಾನ್‌ ಮಾಡಬೇಕು ಎಂದು ಹೋರಾಟ ಮಾಡಲಾಯಿತು. ಈಗ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಲ್ಲವೇ? ದೇಶದ ಹಿಂದೂಗಳ ರಕ್ಷಣೆಗೋಸ್ಕರ ಈ ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಮಾಡಬೇಕು. ಅಧಿಕಾರದ ಲಾಭಕ್ಕಾಗಿ ರಾಜ್ಯ ಸರ್ಕಾರದ ನಡೆ ಸರಿಯಲ್ಲ ಎಂದು ಮುತಾಲಿಕ್‌ ಕಿಡಿಕಾರಿದರು.
 

click me!