ರೈತರಿಗೊಂದು ಸಂತಸದ ಸುದ್ದಿ ನೀಡಿದ ಸರ್ಕಾರ..!

By Kannadaprabha NewsFirst Published Aug 1, 2021, 1:39 PM IST
Highlights

* ರೈತರ ಸಾಲಕ್ಕಿದ್ದ ಷರತ್ತು ಕೊನೆಗೂ ಕೈಬಿಟ್ಟ ಸಹಕಾರ ಇಲಾಖೆ
* ಜು.14ರಂದು ಕನ್ನಡಪ್ರಭ ವಿಶೇಷ ವರದಿ
* ಷರತ್ತು ಕೈಬಿಡುವ ಬಗ್ಗೆ ಭರವಸೆ ನೀಡಿದ್ದ ಸಚಿವರು
 

ಮಂಗಳೂರು(ಆ.01): ಸಹಕಾರಿ ಸಂಘಗಳಲ್ಲಿ ರೈತರು ಸಾಲ ಪಡೆಯಲು ವಿಧಿಸಿದ್ದ ನಿಬಂಧನೆಗಳನ್ನು ಕೊನೆಗೂ ರಾಜ್ಯ ಸರ್ಕಾರ ತೆಗೆದು ಹಾಕಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳಿಗೆ ಸಹಕಾರ ಇಲಾಖೆ ಪತ್ರ ಬರೆದಿದೆ.

ಪ್ರಾಥಮಿಕ ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿದರದಲ್ಲಿ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಎಂಬ ಷರತ್ತು ವಿಧಿಸಿರುವುದನ್ನು ತೆಗೆದುಹಾಕಲಾಗಿದೆ. ಅದೇ ರೀತಿ 10 ವರ್ಷದಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದವರಿಗೆ ಸಬ್ಸಿಡಿ ಸಾಲ ಸೌಲಭ್ಯ ಇಲ್ಲ ಎಂಬ ಷರತ್ತನ್ನು ಕೂಡ ಕೈಬಿಡಲಾಗಿದೆ. ಈ ಕುರಿತ ಪರುಷ್ಕೃತ ಆದೇಶವನ್ನು ಜು.29ರಂದು ಸಹಕಾರ ಇಲಾಖೆ ಹೊರಡಿಸಿದೆ. ಸಹಕಾರ ಇಲಾಖೆಯ ಹಿಂದಿನ ನಿಬಂಧನೆಯಿಂದಾಗಿ ಅನೇಕ ಮಂದಿ ರೈತರು ಸಾಲಕ್ಕಾಗಿ ಪರದಾಟ ನಡೆಸುವಂತಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಲಕ್ಷ ಡೋಸ್‌ ಲಸಿಕೆ ಕೊರತೆ

ಈ ಕುರಿತು ಜು.14ರಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಪುತ್ತೂರು ಶಾಸಕ ಸಂಜೀವ ಮಠಂದೂರು ಕೂಡ ಸಹಕಾರ ಇಲಾಖೆಗೆ ಪತ್ರ ಬರೆದು ಷರತ್ತು ಕೈಬಿಡುವಂತೆ ಆಗ್ರಹಿಸಿದ್ದರು. ಸಹಕಾರ ಭಾರತಿ ಸಂಘಟನೆ ಕೂಡ ಸಚಿವರಿಗೆ ಮನವಿ ಸಲ್ಲಿಸಿತ್ತು. ಮಂಗಳೂರಿಗೆ ಇತ್ತೀಚೆಗೆ ಆಗಮಿಸಿದ ಅಂದಿನ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಷರತ್ತು ತೆಗೆದುಹಾಕುವುದಾಗಿ ಭರವಸೆ ನೀಡಿದ್ದು ಈಗ ಈಡೇರಿದೆ. ರೈತರು ನಿಟ್ಟುಸಿರು ಬಿಡುವಂತಾಗಿದೆ.
 

click me!