ಇಲ್ಲೇ ಕುಳಿತರೆ ಸ್ಟಾರ್‌ ಕನಸು ಅಸಾಧ್ಯ: ನಟ ವೈಜನಾಥ್‌ ಬಿರಾದರ್‌

Published : Mar 17, 2023, 11:59 PM IST
ಇಲ್ಲೇ ಕುಳಿತರೆ ಸ್ಟಾರ್‌ ಕನಸು ಅಸಾಧ್ಯ: ನಟ ವೈಜನಾಥ್‌ ಬಿರಾದರ್‌

ಸಾರಾಂಶ

80ರ ದಶಕದಲ್ಲಿ ಬೀದರ್‌ ಅಂದಾಕ್ಷಣ ಅದೆಲ್ಲಿ ಎಂದು ಅಚ್ಚರಿಯಿಂದ ಕೇಳುತ್ತಿದ್ದ ಬೆಂಗಳೂರಿಗರು, ಇದೀಗ ನಮ್ಮ ಬೀದರ್‌ನತ್ತ ಆಕರ್ಷಿತರಾಗುತ್ತಿರುವದು ಹೆಮ್ಮೆಯ ವಿಚಾರ. ಇದಕ್ಕೆಲ್ಲ ಸ್ಥಳೀಯರ ಪ್ರತಿಭೆ ಮತ್ತು ಪ್ರಭಾವ ಕಾರಣ ಎಂದು ಹಿರಿಯ ಖ್ಯಾತ ಹಾಸ್ಯ ನಟ ವೈಜನಾಥ್‌ ಬಿರಾದರ್‌ ಅಭಿಪ್ರಾಯ ವ್ಯಕ್ತಪಡಿಸಿದರು. 

ಬೀದರ್‌ (ಮಾ.17): 80ರ ದಶಕದಲ್ಲಿ ಬೀದರ್‌ ಅಂದಾಕ್ಷಣ ಅದೆಲ್ಲಿ ಎಂದು ಅಚ್ಚರಿಯಿಂದ ಕೇಳುತ್ತಿದ್ದ ಬೆಂಗಳೂರಿಗರು, ಇದೀಗ ನಮ್ಮ ಬೀದರ್‌ನತ್ತ ಆಕರ್ಷಿತರಾಗುತ್ತಿರುವದು ಹೆಮ್ಮೆಯ ವಿಚಾರ. ಇದಕ್ಕೆಲ್ಲ ಸ್ಥಳೀಯರ ಪ್ರತಿಭೆ ಮತ್ತು ಪ್ರಭಾವ ಕಾರಣ ಎಂದು ಹಿರಿಯ ಖ್ಯಾತ ಹಾಸ್ಯ ನಟ ವೈಜನಾಥ್‌ ಬಿರಾದರ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಲ್ಲಿನ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಸ್ಕೃತಿ ಸಂವರ್ಧನೆಯಲ್ಲಿ ತಾರಾಲೋಕ ಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಸಿನಿಮಾ ಲೋಕದವರು ಬೀದರ್‌ನತ್ತ ಹೆಜ್ಜೆ ಇಡುತ್ತಿದ್ದಾರೆ, ಇಲ್ಲಿನ ನೂರಾರು ಜನ ಬೆಂಗಳೂರಿನಲ್ಲಿ ಬೆಳೆದಿದ್ದಾರೆ ಎಂದರು.

ಬೀದರ್‌ ಜಿಲ್ಲೆಯಲ್ಲಿಯೇ ಕುಳಿತುಕೊಂಡು ನಾವು ಬೆಳೆಯಬೇಕು, ಜನ ಮನ್ನಣೆ ಗಳಿಸಬೇಕೆಂಬ ಮನೋಭಾವ ಹೊಂದದಿದ್ದಲ್ಲಿ ಏನೂ ಸಾಧಿಸಲಾಗಲ್ಲ. ಸಾಧನೆಗೆ ಗುರಿ ತಲುಪುವ ತವಕ, ಅದರತ್ತ ಜಿಗಿದು ಸಾಗುವದಕ್ಕಾಗಿನ ಪ್ರಯತ್ನ ಮುಖ್ಯ ಎಂದರು. ಖ್ಯಾತ ಸಂಗೀತ ನಿರ್ದೇಶಕ ವೀರಸಮರ್ಥ ಮಾತನಾಡಿ, ಉನ್ನತ ಸ್ಥಾನಕ್ಕೇರಿ ಜನರೆಲ್ಲ ಗುರುತಿಸುವಂತಾಗಲು ಹೊರಬನ್ನಿ. ಹೊರಜಗತ್ತಿನಲ್ಲಿ ಪಯಣಿಸಿ ಆದರೆ ಜಿಲ್ಲೆಗೆ ಅಂಟಿಕೊಂಡು ಕುಳಿತರೆ ಸಾಧನೆಯ ಶಿಭರವೇರಲು ಸಾಧ್ಯವಾಗುವದಿಲ್ಲ ಎಂದರು.  ಜಿಲ್ಲೆಯಲ್ಲಿ ಸಾಕಷ್ಟುಪ್ರತಿಭೆಗಳಿವೆ. ಸಂಗೀತ, ಸಾಹಿತ್ಯ ಹಾಗೂ ನಟನಾ ಕೌಶಲ್ಯವಿರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ.

ನಾರಾಯಣಗೌಡ ನಮ್ಮ ಪಕ್ಷದ ಸೂಪರ್‌ ಸ್ಟಾರ್‌, ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಆದರೆ, ಬೀದರ್‌ ಜಿಲ್ಲೆಯನ್ನು ಬಿಟ್ಟು ಮಹಾನಗರಗಳತ್ತ ಪ್ರಯಾಣಿಸಿ ಗುರಿ ತಲುಪುವವರೆಗೆ ಅಲ್ಲಿಯೇ ಠಿಕಾಣಿ ಹೂಡಿ ಶ್ರಮವಹಿಸಿ ಪ್ರಯತ್ನಿಸಿದಾಗ ಮಾತ್ರ ನಿಮ್ಮ ವ್ಯಕ್ತಿತ್ವ ಅಭಿವೃದ್ಧಿಗೊಳಿಸಿಕೊಳ್ಳಲು ಸಾಧ್ಯ ಎಂದರು. ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ತನ್ನ ಜಿಲ್ಲಾ ಸಮ್ಮೇಳನದಲ್ಲಿ ಆಯೋಜಿಸಿರುವ ಸಾಹಿತ್ಯ ಸಂಸ್ಕೃತಿ ಸಂವರ್ಧನೆಯಲ್ಲಿ ತಾರಾ ಲೋಕ ಗೋಷ್ಠಿಯು ರಾಜ್ಯದಲ್ಲಿಯೇ ವಿನೂತನ, ಸ್ಥಳೀಯ ನಟ, ನಟಿಯರನ್ನು, ಗಾಯಕರನ್ನು, ಸಂಗೀತ ನಿರ್ದೇಶಕರನ್ನು ಗುರುತಿಸಿ ಅವರಿಗೆ ವೇದಿಕೆ ನೀಡಿರುವ ಕಾರ್ಯ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ನಡೆದಂತಿಲ್ಲ ಎಂದು ಶ್ಲಾಘಿಸಿದರು.

ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಬಿ.ಜೆ ವಿಷ್ಣುಕಾಂತ ಅವರು ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದೇಯಾದಲ್ಲಿ ಅವರಲ್ಲಿರುವ ಅದ್ಭುತ ಕಲಾ ಕೌಶಲ್ಯ ಹೊರಬರುವದರಲ್ಲಿ ಸಂದೇಹವಿಲ್ಲ. ಈಗಾಗಲೇ ಜಿಲ್ಲೆಯ ವೈಜನಾಥ ಬಿರಾದರ ಹಾಗೂ ವೀರಸಮರ್ಥ ಅವರು ಸಿನಿ ಲೋಕದಲ್ಲಿ ಹೆಸರುವಾಸಿಯಾಗಿ ಬೀದರ್‌ ಹೆಮ್ಮೆ ಆಗಿದ್ದಾರೆ. ಇವರಂತೆ ಇನ್ನುಳಿದವರೂ ಶ್ರಮವಹಿಸಿ ಗುರಿ ತಲುಪಬೇಕೆಂದರು. ತೆಲುಗು ಕಿರುತೆರೆ ನಟಿ ಹುಮನಾಬಾದ್‌ನ ರಸಜ್ಞಾ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟುಜನ ಪ್ರತಿಭಾನ್ವಿತರಿದ್ದಾರೆ. ಅವರಿಗೆ ಅವಕಾಶಗಳು ಸಿಗಬೇಕು, ಅದಕ್ಕಾಗಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮತ್ತು ಸತತ ಶ್ರಮ ಹಾಕಬೇಕು ಎಂದರು.

ಮಂಡ್ಯ ಜಿಲ್ಲೆ ಜವಾಬ್ದಾರಿ ನನ್ನದೇ, ಪ್ರಚಾರದ ಉಸ್ತುವಾರಿ ನಾನೇ ವಹಿಸುವೆ: ಎಚ್‌.ಡಿ.ದೇವೆಗೌಡ

ಕನ್ನಡತಿ ಧಾರಾವಾಹಿಯ ಅಮ್ಮಮ್ಮ ಖ್ಯಾತಿಯ ನಟಿ ಚಿತ್ಕಳಾ ಬಿರಾದಾರ, ನಟ ನಿರ್ದೇಶಕ ಮಹೇಶ ಪಾಟೀಲ್‌, ನಟ ವೀರಣ್ಣ ಕಾರಬಾರಿ ಹಲವಾರು ಜನ ತಾರಾ ಲೋಕದವರು ಮಾತನಾಡಿದರು. ಸಿದ್ದಾರೂಢ ಕಂದಗೂಳ ಹಾಗೂ ಸಂಗೀತ ನಿರ್ದೇಶಕ ಸರ್ವೇಶ ಕನ್ನಡ ಗೀತೆಗಳನ್ನು ಹಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಪರಿಷತ್‌ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿಇದ್ದರು.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!