ಬೆಂಗಳೂರಿನಲ್ಲಿ ಪ್ಲೆಕ್ಸ್ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರೇ ಗಲಾಟೆ ಆರಂಭ ಮಾಡಿಕೊಂಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಬೆಂಗಳೂರು (ಮಾ.17): ಬೆಂಗಳೂರಿನಲ್ಲಿ ಪ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ. ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಭಾನುವಾರ ಸಿದ್ದರಾಮಯ್ಯ ಕಾರ್ಯಕ್ರಮವಿದ್ದು, ಕಾರ್ಯಕ್ರಮ ಹಿನ್ನೆಲೆ ಶುಕ್ರವಾಎ ಪ್ಲೆಕ್ಸ್ ಹಾಕಲು ಕೈ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರು ನಾವು ಆಟವಾಡಬೇಕು ಕಾರ್ಯಕ್ರಮದ ಹಿಂದಿನ ದಿನ ಪ್ಲೆಕ್ಸ್ ಹಾಕಿಕೊಳ್ಳಿ ಎಂದು ವಿರೋಧ ಮಾಡಿದ್ದಾರೆ. ಈ ವೇಳೆ ಮೃದಾನದಲ್ಲಿ ಆಟವಾಡುತ್ತಿದ್ದ ಯುವಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ನಂತರ ಎರಡು ಗುಂಪುಗಳ ನಡುವೆ ನೂಕಾಟ ತಳ್ಳಾಟ ನಡೆದಿದೆ. ಘಟನೆ ಸಂಬಂಧ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಘಟನೆಯನ್ನು ವಿಜಯನಗರ ಮತ್ತು ಗೋವಿಂದರಾಜನಗರ ಪೊಲೀಸರು ತಿಳಿಗೊಳಿಸಿದ್ದಾರೆ.
ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿದ್ದು, ಗಲಾಟೆ ಸಂಬಂಧ ಸ್ಥಳೀಯ ಪೊಲೀಸರಿಂದ ಡಿಸಿಪಿ ಮಾಹಿತಿ ಪಡೆದಿದ್ದಾರೆ. ಮೈದಾನ ಸುತ್ತ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.
undefined
4 ಕೆಜಿ ಚಿನ್ನ ಮಾರಾಟಕ್ಕೆ ಯತ್ನ, ಗದಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಬೈ ಮೂಲದ ವ್ಯಾಪಾರಿಗಳು!
ಈ ಬಗ್ಗೆ ಮಾತನಾಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಮಾವೇಶ ಭಾನುವಾರ ಆಯೋಜನೆಯಾಗಿತ್ತು. ಈ ವೇಳೆ ಮೈದಾನದಲ್ಲಿ ಕಾರ್ಯಕರ್ತರು ಪ್ಲೆಕ್ಸ್ ಕಟ್ಟುತ್ತಿದ್ದರು. ಈ ವೇಳೆ ಅಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು. ಪ್ಲೆಕ್ಸ್ ಕಟ್ಟುವ ವಿಚಾರಕ್ಕೆ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೈ ಕೈ ಮಿಲಾಯಿಸಿದ್ದಾರೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೂ ಸಹ ಗಾಯವಾಗಿದೆ. ಪೊಲೀಸರನ್ನ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾರು ಭಾಗಿಯಾಗಿದ್ದಾರೆ ಅವರ ವಿಡಿಯೋ ನೋಡಿ ಸುಮೋಟೊ ಕೇಸ್ ದಾಖಲು ಮಾಡಲಾಗುವುದು ಎಂದಿದ್ದಾರೆ.
ನೋಯ್ಡಾದಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕೊಚ್ಚಿ ಚರಂಡಿಗೆಸೆದ ಪಾತಕಿಗಳು!
ಎರಡು ಕಡೆ ಮಹಿಳೆಯರೇ ಗಲಾಟೆ ಆರಂಭ ಮಾಡಿಕೊಂಡಿದ್ದರು. ವಾಹನಗಳಲ್ಲಿ ವೆಫನ್ಸ್ ಇದೆ ಅಂತ ಆರೋಪ ಇತ್ತು. ಪೊಲೀಸರ ತಪಾಸಣೆ ವೇಳೆ ಯಾವುದೇ ವೆಫನ್ಸ್ ಸಿಕ್ಕಿಲ್ಲ. ಮೈದಾನದಿಂದ ಹೊರಗಡೆ ಹೋದ ನಂತರ ಎರಡು ಗುಂಪು ಕಲ್ಲು ತೂರಿದ್ದಾರೆ. ಕಲ್ಲು ತೂರಿದ ವ್ಯಕ್ತಿ ಹಿಡಿಯಲು ಹೋದಾಗ ಪೊಲೀಸರಿಗೆ ಗಾಯವಾಗಿದೆ. ಅವರು ರಾಜಕೀಯ ಪಕ್ಷದ ಕಾರ್ಯಕರ್ತರ ಅಥವಾ ಸಂಘದವರ ಅನ್ನೋ ಬಗ್ಗೆ ತನಿಖೆ ನಡೆಯಲಿದೆ ಎಂದಿದ್ದಾರೆ.