ನೀರು ನೀಡಿದ ಎಂ ಬಿ ಪಾಟೀಲ್‌ಗೆ ಕಂಚಿನ ಮೂರ್ತಿ ಸ್ಥಾಪಿಸಿ ಗಿಫ್ಟ್ ನೀಡಿದ ರೈತರು!

By Suvarna NewsFirst Published Mar 17, 2023, 8:41 PM IST
Highlights

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪೂರ (H) ಗ್ರಾಮದಲ್ಲಿ ನೀರು ನೀಡಿದ ರಾಜಕಾರಣಿ ಮಾಜಿ ಸಚಿವ, ಹಾಲಿ ಶಾಸಕ ಎಂ ಬಿ ಪಾಟೀಲ್ ಅವರ ಕಂಚಿನ ಮೂರ್ತಿ ಸ್ಥಾಪನೆ ಮಾಡಿ ರೈತರು ಗಿಫ್ಟ್ ನೀಡಿದ್ದಾರೆ.

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮಾ.17): ರೈತರು ಅಂದ್ರೇನೆ ಹಾಗೇ. ಮನೆಗೆ ಶತೃವೇ ಹಸಿದು ಬಂದರು ಕರೆದು ತುತ್ತು ತಿನ್ನಿಸುವಷ್ಟು ಮುಗ್ದರು. ಯಾರೇ ಉಪಕಾರ ಮಾಡಿದರು ಅದನ್ನ ಜೀವನ ಪರ್ಯಂತ ನೆನಪಿನಲ್ಲಿಟ್ಟು ಸ್ಮರಿಸುವುದು ಅನ್ನದಾತನ ಹುಟ್ಟು ಸ್ವಭಾವ. ರೈತ ಋಣ ತೀರಿಸಲು ನಿಂತ್ರೆ ಹೇಗೆ ತಿರಿಸಬಲ್ಲ ಎನ್ನುವುದಕ್ಕೆ ಈ ಸ್ಟೋರಿಯೆ ಸಾಕ್ಷಿ. ಬಹುತೇಕ ಕಡೆಗಳಲ್ಲಿ ನಗರ, ಪಟ್ಟಣ, ಹಳ್ಳಿಗಳಲ್ಲಿ ಮಹಾತ್ಮರ, ಮೇಧಾವಿಗಳ ಕಂಚಿನ ಮೂರ್ತಿಗಳನ್ನ ಸ್ಥಾಪನೆ ಮಾಡುವುದು ಕಾಮನ್.‌ ಜನಪ್ರತಿನಿಧಿಯೊಬ್ಬರು ನೀರು ನೀಡಿದ ಉಪಕಾರ ಸ್ಮರಣೆಗೆ ರೈತರು ಅವರ ಕಂಚಿನ ಮೂರ್ತಿಯನ್ನೆ ನಿರ್ಮಿಸಿ ನಿಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪೂರ (H) ಗ್ರಾಮದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಂ ಬಿ ಪಾಟೀಲ್ ಕಂಚಿನ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಎಂ ಬಿ ಪಾಟೀಲ್‌ ಜಲಸಂಪನ್ಮೂಲ ಸಚಿವರಾಗಿದ್ದಾಗ ಬಬಲೇಶ್ವರ ಕ್ಷೇತ್ರ  ಸೇರಿದಂತೆ ಜಿಲ್ಲೆಯಲ್ಲಿ ನೀರಾವರಿ ಮಾಡಿರುವುದಕ್ಕೆ ರೈತರು ಸೇರಿ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಎಂ ಬಿ ಪಾಟೀಲರ ಮೇಲಿನ ಅಭಿಮಾನಕ್ಕೆ ತಾವೇ ಸ್ವತಃ ಹಣ ಸೇರಿಸಿ ಕಂಚಿನ ಮೂರ್ತಿ ಸ್ಥಾಪಿಸಿದ್ದಾರೆ.

ಸಂಗಾಪುರ (H) ಗ್ರಾಮದಲ್ಲಿ ಮೂರ್ತಿ ಸ್ಥಾಪನೆ!
ಬಬಲೇಶ್ವರ ತಾಲೂಕಿನ ಸಂಗಾಪೂರದಲ್ಲಿ ರೈತರೇ ಸೇರಿ ಎಂ ಬಿ ಪಾಟೀಲರ ಕಂಚಿನ ಮೂರ್ತಿ ಸ್ಥಾಪಿಸಿದ್ದಾರೆ. ಬರಡು ಭೂಮಿಗೆ ಎಂ ಬಿ ಪಾಟೀಲ್‌ ನೀರು ಕೊಟ್ಟಿದ್ದಾರೆ. ಅವರು ಮಾಡಿದ ನೀರಾವರಿಯಿಂದಲೇ ಜಮೀನುಗಳು ನೀರು ಕಂಡಿವೆ. ಈ ಭಾಗದ ರೈತರು ಉತ್ತಮ ಬೆಳೆ ಕಾಣುವಂತಾಗಿದೆ. ಈ ಕಾರಣಕ್ಕಾಗಿ ರೈತರು ಎಂ ಬಿ ಪಾಟೀಲರಿಗೆ ಏನಾದರೂ ಉಡುಗೊರೆ ನೀಡಬೇಕು ಎಂದು ಕಂಚಿನ ಮೂರ್ತಿ ಸ್ಥಾಪಿಸಿದ್ದಾರೆ. ಇಂದು ಸಂಗಾಪೂರ ಗ್ರಾಮದಲ್ಲಿ ಎಂ ಬಿ ಪಾಟೀಲರ 6 ಅಡಿಗಳ ಕಂಚಿನ ಮೂರ್ತಿ ಅನಾವರಣ ಮಾಡಲಾಗಿದೆ. ವಿವಿಧ ಮಠಾಧೀಶರು, ಮುಖಂಡರು ಮೂರ್ತಿ ಅನಾವರಣಗೊಳಿಸಿದರು.

ಅಪ್ಪು ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಿಲಿಕಾನ್ ಸ್ಟ್ಯಾಚು

ಮೂರ್ತಿ ಸ್ಥಾಪನೆಗೆ 18 ಲಕ್ಷ ಖರ್ಚು ಮಾಡಿದ ರೈತರು!
ರೈತರಿಗೆ ನೀರಾವರಿ ಗಿಫ್ಟ್‌ ನೀಡಿದ ಎಂ ಬಿ ಪಾಟೀಲ್ರಿಗೆ ಅವರ ಕ್ಷೇತ್ರದ ರೈತರು ಏನಾದರು ಕೊಡುಗೆ ನೀಡಬೇಕೆಂದು ಸಭೆಯನ್ನ ನಡೆಸಿದ್ದರು. ಆಗ ಪ್ರತಿಯಾಗಿ ಏನು ಉಡುಗೊರೆ ನೀಡಬೇಕು ಎಂದು ಚರ್ಚೆ ನಡೆದಾಗ ಚಿನ್ನದ ಕಿರೀಟ ತೊಡಿಸುವ ಇಚ್ಚೆಯನ್ನ ಕೆಲವರು ಹೊರಹಾಕಿದ್ರು, ಆದ್ರೆ ಬಹುತೇಕರು ಚಿರಕಾಲ ಉಳಿಯುವಂತ ಗಿಫ್ಟ್‌ ವೊಂದನ್ನ ಎಂ ಬಿ ಪಾಟೀಲರ ಹುಟ್ಟು ಹಬ್ಬಕ್ಕೆ ನೀಡಲು ತೀರ್ಮಾನಿಸಿ ಕಂಚಿನ ಮೂರ್ತಿ ಸ್ಥಾಪಿಸುವ ನಿರ್ಧಾರವನ್ನ ತೆಗೆದುಕೊಂಡಿದ್ದರು. ಬಳಿಕ ಸಭೆ ನಡೆದ ಬಳಿಕ ರೈತರಿಗೆ 10 ರೂಪಾಯಿಯಿಂದ ಹಿಡಿದು ಹತ್ತಾರು ಸಾವಿರ ರೂಪಾಯಿ ವರೆಗು ದೇಣಿಗೆಯನ್ನ ಮೂರ್ತಿ ನಿರ್ಮಾಣಕ್ಕೆ ನೀಡದರಂತೆ. ಒಟ್ಟು 18 ಲಕ್ಷ ರೂಪಾಯಿಗಳು ಮೂರ್ತಿ ನಿರ್ಮಾಣಕ್ಕಾಗಿ ಸಂಗ್ರಹಗೊಂಡಿದ್ದರು. 10 ಲಕ್ಷ ರೂಪಾಯಿಯಲ್ಲಿ ಮೂರ್ತಿ ನಿರ್ಮಾಣವಾದ್ರೆ ಸ್ಥಾಪನೆಗೆ ಒಟ್ಟು 18 ಲಕ್ಷ ರೂಪಾಯಿಯಷ್ಟು ಖರ್ಚಾಗಿದೆ.

'ಬೆಟ್ಟದಾ ಮೇಲೊಂದು ಮನೆಯ ಮಾಡಿ..' ಎಂದ ಅಕ್ಕಮಹಾದೇವಿಯ ಐತಿಹಾಸಿಕ ಪ್ರತಿಮೆ ಶಿಕಾರಿಪುರದಲ್ಲಿ ಅನಾವರಣ!

ರಾಜಸ್ಥಾನದ ಕಲಾವಿದನಿಂದ ಮೂರ್ತಿ ನಿರ್ಮಾಣ!
ಚುನಾವಣೆಗಳು ಬಂದ್ರೆ ರಾಜಕಾರಣಿಗಳು ಜನರಿಗೆ ಗಿಫ್ಟ್‌ ಕೊಡುವುದು ಕಾಮನ್‌, ಇದ್ರೆ ಇಲ್ಲಿ ಚುನಾವಣೆ ಸಮಯದಲ್ಲೆ ರೈತರು, ಅಭಿಮಾನಿಗಳು, ಸಾರ್ವಜನಿಕರು ಸೇರಿ ಮಾಜಿ ಸಚಿವ ಎಂ ಬಿ ಪಾಟೀಲರಿಗೆ ಕಂಚಿನ ಮೂರ್ತಿಯ ಗಿಫ್ಟ್‌ ನೀಡಿದ್ದಾರೆ. ಇನ್ನು ಮೂರ್ತಿಯನ್ನ ರಾಜಸ್ತಾನ ಮೂಲದ ಕಲಾವಿದ ನಿರ್ಮಾಣ ಮಾಡಿದ್ದಾನೆ. ರಾಜಕುಮಾರ್ ಪಂಡಿತ್‌ ಎನ್ನುವ ಕಲಾವಿದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಂಚಿನ ಮೂರ್ತಿ ನಿರ್ಮಿಸಿರೋದು ವಿಶೇಷವಾಗಿದೆ.

click me!