ಮಂಡ್ಯ: ನೆರೆ ಸಂತ್ರಸ್ತರಿಗೆ 1 ದಿನದ ವೇತನ ನೀಡಿದ ಕಾಲೇಜು ಸಿಬ್ಬಂದಿ, 6ಲಕ್ಷದ ಚೆಕ್ ಹಸ್ತಾಂತರ

By Kannadaprabha NewsFirst Published Aug 23, 2019, 9:05 AM IST
Highlights

ನೆರೆ ಸಂತ್ರಸ್ತರಿಗೆ ಒಂದು ದಿನದ ವೇತನ ನೀಡುವ ಮೂಲಕ ಪಿಇಎಸ್ ಕಾಲೇಜು ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಎಲ್ಲರೂ ತಮ್ಮ ಒಂದು ದಿನದ ವೇಋತನವನ್ನು ನೆರೆ ಸಂತ್ರಸ್ತರಿಗಾಗಿ ನೀಡಿದ್ದು, 6.75 ಲಕ್ಷ ರು.ಗಳ ಚೆಕ್‌ನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾರೆ.

ಮಂಡ್ಯ(ಆ.23): ನೆರೆ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಪಿಇಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಬೋಧಕರು, ಬೋಧಕೇತರರು ಮತ್ತು ಸಿಬ್ಬಂದಿ ವರ್ಗದ ಒಂದು ದಿನದ ಒಟ್ಟಾರೆ ವೇತನ 6.75 ಲಕ್ಷ ರು.ಗಳ ಚೆಕ್‌ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ವಿ.ರವೀಂದ್ರ ಜಿಲ್ಲಾಧಿಕಾರಿಗಳಿಗೆ ವಿತರಿಸಿದರು.

ಮಂಡ್ಯ: ಬದುಕಿರುವ ಮಗು ಸತ್ತಿದೆ ಎಂದ ವೈದ್ಯ..!

ನಂತರ ಮಾತನಾಡಿದ ಅವರು, ನೆರೆಯಿಂದ ಕಷ್ಟದಲ್ಲಿರುವ ಜನರಿಗೆ ಸಹಾಯ ನೀಡುವುದು ಮಾನವೀಯತೆ ಲಕ್ಷಣ. ನಾವು ನಮ್ಮ ಒಂದು ದಿನದ ವೇತನವನ್ನು ಸಂತ್ರಸ್ತರ ನಿಧಿಗೆ ನೀಡುತ್ತಿದ್ದೇವೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಜೀವನೋಪಾಯಕ್ಕೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತಗಾಗಿ ಕಳುಹಿಸುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಅವರಿಗೆ 6.75 ಲಕ್ಷ ರು.ಗಳ ಚೆಕ್‌ ವಿತರಿಸಲಾಯಿತು. ಆಡಳಿತಾಧಿಕಾರಿ ಜೆ. ಶೇಷಪ್ಪ, ಅಧ್ಯಾಪಕರ ಸಂಘದ ಅಧ್ಯಕ್ಷ ಪೊ›. ಕೆ.ಎಂ.ಅನಂತು ಮತ್ತು ಕಾರ್ಯದರ್ಶಿ ಡಾ.ಬಿ.ಷಣ್ಮುಖ ಹಾಗೂ ಡಾ. ಬಿ.ಎಸ್‌.ಶಿವಕುಮಾರ್‌ ಇದ್ದರು.

click me!