ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ಸಿನೆಮಾ ತೋರಿಸಲು ಕರೆದುಕೊಂಡು ಹೋಗ್ತಾ ಇದ್ರು. ಮಾಲ್ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಮಾಲ್ ಒಳಗೆ ಪ್ರವೇಶ ಮಾಡಲು ನಿರಾಕರಿಸಿದ್ದಾರೆ.
ಬೆಂಗಳೂರು(ಜು.16): ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಮಾಲ್ ಸಿಬ್ಬಂದಿ ಒಳಗೆ ಬಿಡದ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿ ನಡೆದಿದೆ.
ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ಇಂದು(ಮಂಗಳವಾರ) ಸಂಜೆ ಸಿನೆಮಾ ತೋರಿಸಲು ಕರೆದುಕೊಂಡು ಹೋಗ್ತಾ ಇದ್ರು. ಮಾಲ್ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಮಾಲ್ ಒಳಗೆ ಪ್ರವೇಶ ಮಾಡಲು ನಿರಾಕರಿಸಿದ್ದಾರೆ. ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ರೈತರಾಗಿದ್ದಾರೆ.
undefined
ಬೆಂಗಳೂರಲ್ಲಿ ನಿಮ್ಮ ವಾಣಿಜ್ಯ ಮಳಿಗೆಗೆ ಕನ್ನಡ ನಾಮಫಲಕ ಹಾಕಿಲ್ವಾ..? ಬಿಬಿಎಂಪಿಯವರು ನಾಳೆಯೇ ಅಂಗಡಿ ಮುಚ್ಚಿಸ್ತಾರೆ!
ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದಾರೆ. ನಾಗರಾಜ್ ಎಂಬುವರು ಒಳಗೆ ಬಿಡಿ ಅಂತ ಎಷ್ಟು ಬಾರಿ ಕೇಳಿದರು ಪಂಚೆ ಹಾಕೊಂಡಿದ್ದರೆ ಹಾಗಾಗಿ ಬಿಡುವುದಿಲ್ಲ, ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ. ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಹೇಳಿದ್ದಾರೆ. ಇದರಿಂದ ನಾಗರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.