ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ| ಸಹಪಾಠಿಗೆ ಬಾಟಲಿಯಿಂದ ಚುಚ್ಚಿ ಓಡಿಹೋದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶವವಾಗಿ ಪತ್ತೆ|ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.
ಚಿತ್ರದುರ್ಗ, [ಸೆ.27]: ಇಬ್ಬರು ಗೆಳೆಯರ ಜಗಳ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ. ಇವರಿಬ್ಬರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು. ಗುರುವಾರ ಮಧ್ಯಾಹ್ನ ಒಟ್ಟಿಗೆ ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ಆದರೆ ಬಳಿಕ ಆಗಿದ್ದೆಲ್ಲ ದುರಂತ.
.ಹಿರಿಯೂರು ನಗರದ ಡಾ. ಅಂಬೇಡ್ಕರ್ ರಮಾಬಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭರತ್ ಹಾಗೂ ನವೀನ್ ಇಬ್ಬರೂ ಒಟ್ಟಿಗೆ ಹೊರಗೆ ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ/ ಈ ಜಗಳದಲ್ಲಿ ನವೀನ್ ರೊಚ್ಚಿಗೆಂದು ಭರತ್ನಿಗೆ ಬಾಟಲಿಯ ಗ್ಲಾಸ್ನಿಂದ ಚುಚ್ಚಿ ಹಲ್ಲೆಗೊಳಿ ಓಡಿಹೋಗಿದ್ದಾನೆ.
undefined
ಗಾಜಿನ ಬಾಟಲಿಯಿಂದ ಹಿರಿತಕ್ಕೊಳಗಾದ ಭರತ್ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಲಾಟೆಯಾದ ಕೆಲ ಹೊತ್ತಿನಲ್ಲಿ ನವೀನ್ [14] ಶವ ಪತ್ತೆಯಾಗಿದೆ. ಭರತ್ ಗೆ ಗಾಜಿನಿಂದ ತಿವಿದಿದ್ದಕ್ಕೆ ಆತಂಕಗೊಂಡು ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಮೃತ ನವೀನ್ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.