ಕೊಡವ ಭಾಷೆಯಲ್ಲೇ ಸಚಿವ ಶ್ರೀರಾಮುಲು ಟ್ವೀಟ್‌

By Kannadaprabha News  |  First Published Sep 27, 2019, 3:13 PM IST

#WeNeedEmergencyHospitalInKodagu ಟ್ವಿಟರ್ ಅಭಿಯಾನದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀರಾಮುಲು ಅವರು ಕೊಡವ ಭಾಷೆಯಲ್ಲೇ ರೀಟ್ವೀಟ್ ಮಾಡಿದ್ದಾರೆ. ಸಚಿವರು ರೀಟ್ವೀಟ್ ಮಾಡ್ತಿದ್ದಂತೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ ಹರಿದುಬಂತು.


ಮಡಿಕೇರಿ(ಸೆ. 27): ಕೊಡಗು ಜಿಲ್ಲೆಗೆ ಆರೋಗ್ಯ ಸಚಿವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ಆರಂಭಿಸುವಂತೆ ಎರಡನೇ ಹಂತದ ಟ್ವಿಟರ್‌ ಅಭಿಯಾನ ಮತ್ತೆ ಆರಂಭವಾಗಿದೆ. #WeNeedEmergencyHospitalInKodagu ಎಂದು ಬಹುತೇಕರು ಗುರುವಾರ ಟ್ವೀಟ್‌ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಅಭಿಯಾನಕ್ಕೆ ಟ್ವಿಟರ್‌ ಮೂಲಕವೇ ಕೊಡವ ಭಾಷೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಆರೋಗ್ಯ ಸಚಿವರ ಭೇಟಿ, ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್ ಅಭಿಯಾನ

Tap to resize

Latest Videos

‘ಕೊಡವ ನಾಡ್‌ರ ಜನಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೂತ್‌ ಕೇಟಿತುಳ್ಳ. ವೀರ ಯೋಧಂಗಳ ತಂದ ಕೊಡವನಾಡ್‌್ಕ ಬೋಂಡಿಯಾನ ಆಸ್ಪತ್ರೆರ ಬಗ್ಗೆ ಆಪಚ್ಚೆಕ್‌ ಬೆರಿಯ ಚರ್ಚೆ ಮಾಡಿತ್‌ ಒರು ತೀರ್ಮಾನ ಎಡ್ತವಿ. ಕೊಡವ ನಾಡ್‌ರ ಜನಳೇ, ಇಂದು ಬೈಟಾಪಕ ಮಡಿಕೇರಿಲುಳ್ಳ ಜಿಲ್ಲಾಸ್ಪತ್ರೆಲ್‌ ಇಪ್ಪಿ ಎಲ್ಲಾರೂ ಕೂಡಿತ್‌ #WeNeedEmergencyHospitalInKodagu ಬಗ್ಗೆ ಚರ್ಚೆ ಮಾಡನ, ನಾಡ್‌ಕ್‌ ಬೋಂಡಿಯಾನ ಆಸ್ಪತ್ರೆರ ಬಗ್ಗೆ ತೀರ್ಮಾನ ಎಡ್ತವನ’ (ಕೊಡಗಿನ ಜನತೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಮುಂದಿಟ್ಟಿದ್ದು, ವೀರ ಯೋಧರನ್ನು ನೀಡಿದ ಕೊಡಗಿಗೆ ಬೇಕಾಗ ಆಸ್ಪತ್ರೆ ಬಗ್ಗೆ ಆದಷ್ಟುಬೇಗ ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಕೊಡಗಿನ ಜನರೇ ಇಂದು (ಗುರುವಾರ) ಸಂಜೆ 6 ಗಂಟೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಇರುತ್ತೇನೆ. ಎಲ್ಲರೂ ಒಟ್ಟಿಗೆ ಸೇರಿ ಆಸ್ಪತ್ರೆ ಬೇಡಿಕೆ ಬಗ್ಗೆ ಚರ್ಚೆ ಮಾಡೋಣ) ಎಂದು ಕೊಡವ ಭಾಷೆಯಲ್ಲಿ ಟ್ವೀಟ್‌ ಮಾಡಿರುವ ಸಚಿವ ಶ್ರೀರಾಮುಲು, ಗುರುವಾರ ರಾತ್ರಿ ಆಸ್ಪತ್ರೆಯಲ್ಲಿನ ವಾಸ್ತವ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಚರ್ಚೆ ಮಾಡೋಣ ಎಂದು ಪ್ರತಿಕ್ರಿಯಿಸಿದ್ದಾರೆ. ಸಚಿವರ ತಕ್ಷಣದ ಟ್ವೀಟ್‌ ಸ್ಪಂದನೆಗೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ ಹರಿದುಬಂತು.

ಟ್ವೀಟ್‌ ಅಭಿಯಾನ:

ಆರೋಗ್ಯ ಸಚಿವ ಶ್ರೀರಾಮುಲು ಅವರು ಕೊಡಗು ಜಿಲ್ಲಾ ಭೇಟಿಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ 6 ಗಂಟೆಯಿಂದ 8 ಗಂಟೆಯ ವರೆಗೆ ಟ್ವಿಟ್ಟರ್‌ ಅಭಿಯಾನ ನಡೆಯಿತು. ಸಾಕಷ್ಟುಮಂದಿ ಕೊಡಗಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಟ್ವೀಟ್‌ ಮಾಡಿ ಆರೋಗ್ಯ ಸಚಿವರ ಗಮನ ಸೆಳೆದರು.

‘ಆರೋಗ್ಯ ಸಚಿವನಾಗಿ ಎಷ್ಟು ದಿನ ಇರ್ತಿನೋ ಗೊತ್ತಿಲ್ಲ‌, ಇದೊಂದು ಕೆಲಸ ಮಾಡೇ ಮಾಡ್ತಿನಿ’

click me!